ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರ ತಾಯಿ ಇಂದು ವಿಧಿವಶರಾಗಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಪ್ರಧಾನಿ ಮೋದಿ ಅವರು ಮುಗಿಸಿದ್ದಾರೆ. ಗುಜರಾತ್ ಗಾಂಧಿನಗರದಲ್ಲಿರುವ ಸೆಕ್ಟರ್ 30 ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ಮಾಡಲಾಗಿದೆ.

ದೆಹಲಿಯಿಂದ ಗುಜರಾತ್ ಗೆ ಬಂದ ಮೋದಿ, ಅಮ್ಮನ ಪಾದ ಮುಟ್ಟಿ ಭಾವುಕರಾಗಿದ್ದಾರೆ. ಬಳಿಕ ಅಮ್ಮನ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗಿತ್ತು. ಪ್ರಧಾನಿ ಮೋದಿ ಅವರು ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟಿದ್ದರು. ನಾಲ್ವರು ಸಹೋದರ ಹಾಗೂ ಸಹೋದರಿ ಅಮ್ಮನ ಚಿತೆಗೆ ಸ್ಪರ್ಶ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಶಿ ಅನ್ನೋದನ್ನು ನಿರೂಪಿಸಿದ್ದರು. ಇತ್ತಿಚೆಗಷ್ಟೇ 100 ವರ್ಷ ದಾಟಿದ್ದರು. ಅವರ ಹುಟ್ಟುಹಬ್ಬವನ್ನು ಆಚರಿಸಿ, ಪ್ರಧಾನಿ ಮೋದಿ ಅವರು ಭಾವುಕ ಸಾಲುಗಳನ್ನು ಬರೆದಿದ್ದರು. ತಾಯಿ ಮೇಲಿದ್ದ ಪ್ರೀತಿಯನ್ನು ಪದಗಳ ಮೂಲಕ ಹೇಳಿದ್ದರು. ಆದರೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾ ಬೆನ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

The post ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಪ್ರಧಾನಿ ಮೋದಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/wgOS4qF
via IFTTT

Leave a Reply

Your email address will not be published. Required fields are marked *