20 ಮಂದಿಗೆ ಪ್ರಧಾನಿ ಮೋದಿ ಬೆಸ್ಟ್‌ ಕ್ರಿಯೇಟರ್‌ ಆವಾರ್ಡ್‌ ನೀಡಿ ಗೌರವಿಸಿದರು.

ಪ್ರಧಾನಮಂತ್ರಿ ಮೋದಿಯವರು (PM Modi) ಇಂದು ನವದೆಹಲಿಯಲ್ಲಿ (Delhi) ಚೊಚ್ಚಲ ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯನ್ನು (National Creators Awards) ಪರಿಚಯಿಸಿದರು. ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ 20 ವಿಭಾಗಗಳ ವ್ಯಕ್ತಿಗಳನ್ನು ಗೌರವಿಸಿದರು. ದೇಶದ ಫೇಮಸ್ ಕ್ರಿಯೇಟರ್ಸ್‌ಗಳಿಗೆ ಪ್ರಧಾನಿ ಮೋದಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಲಿಸ್ಟ್‌ನಲ್ಲಿ ಯೂಟ್ಯೂಬರ್ಸ್‌ (Youtubers), ಮೋಟಿವೇಷನಲ್‌ ಸ್ಪೀಕರ್‌ (Motivational Speaker), ಸೋಷಿಯಲ್‌ ವರ್ಕರ್‌ (Social Worker) ಈ ರೀತಿ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ 20 ಮಂದಿಗೆ ಪ್ರಧಾನಿ ಮೋದಿ ಬೆಸ್ಟ್‌ ಕ್ರಿಯೇಟರ್‌ ಆವಾರ್ಡ್‌ ನೀಡಿ ಗೌರವಿಸಿದರು.

ಕನ್ನಡ ಅಯ್ಯೋ ಶದ್ಧಾಗೂ ಸಿಕ್ತು ಪ್ರಶಸ್ತಿ!

ಆರ್‌ಜೆ, ವಿಜೆ, ಶದ್ಧಾ ಜೈನ್‌ಗೂ ಪಧಾನಿ ಮೋದಿ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡತಿ ಅಯ್ಯೋ ಶ್ರದ್ಧಾ ವೇದಿಕೆ ಮೇಲೆ ಬರ್ತಿದ್ದಂತೆ ಪ್ರಧಾನಿ ಮೋದಿ ಅಯ್ಯೋ.. ಅಂತ ಹೇಳಿ ತಮಾಷೆ ಮಾಡಿದರು. ಅಯ್ಯೋ ಶ್ರದ್ಧಾಗೆ ಅಷ್ಟೇ ಅಲ್ಲ. ಪ್ರಶಸ್ತಿ ಪಡೆಯಲು ವೇದಿಕೆಗೆ ಬಂದ ಕ್ರಿಯೇಟರ್ಸ್‌ಗಳ ಕಾಲೆಳೆದರು ಪ್ರಧಾನಿ ಮೋದಿ. ಕ್ರಿಯೇಟರ್‌ಗಳು ಯಾವಾಗಲೂ ತಮಾಷೆ ಮಾಡುತ್ತಾ, ಕಾಲೆಳೆಯುತ್ತಾರೆ. ಅಂಥವರಿಗೆ ಪ್ರಧಾನಿ ಮೋದಿ ತಮಾಷೆ ಮಾಡಿ ಕಾಲೆಳೆದರು.

20 ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ!

ಬೆಸ್ಟ್‌ ಸ್ಟೋರಿ ಟೆಲ್ಲರ್‌, ಡಿಸ್ರುಪ್ಟರ್‌, ಸೆಲೆಬ್ರಿಟಿ ಕ್ರಿಯೇಟರ್‌, ಗ್ರೀನ್‌ ಚಾಂಪಿಯನ್‌, ದಿ ಬೆಸ್ಟ್‌ ಕ್ರಿಯೇಟರ್‌ ಫಾರ್‌ ಸೋಷಿಯಲ್‌ ಚೇಂಜ್‌, ಮೋಸ್ಟ್‌ ಇಂಪ್ಯಾಕ್ಟ್‌ ಆಗ್ರಿ ಕ್ರಿಯೇಟರ್‌, ಸಾಂಸ್ಕೃತಿಕ ರಾಯಭಾರಿ, ಅತ್ಯುತ್ತಮ ಪ್ರಯಾಣ ಸೃಷ್ಟಿಕರ್ತ, ಸ್ವಚ್ಛತಾ ರಾಯಭಾರಿ, ಹೊಸ ಭಾರತ ಚಾಂಪಿಯನ್, ಟೆಕ್ ಸೃಷ್ಟಿಕರ್ತ ಸೇರಿದಂತೆ 20 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. , ಹೆರಿಟೇಜ್ ಫ್ಯಾಶನ್, ಅತ್ಯಂತ ಸೃಜನಾತ್ಮಕ ಸೃಷ್ಟಿಕರ್ತ (ಪುರುಷ ಮತ್ತು ಹೆಣ್ಣು), ಆಹಾರ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ, ಶಿಕ್ಷಣದಲ್ಲಿ ಅತ್ಯುತ್ತಮ ಸೃಷ್ಟಿಕರ್ತ ಮತ್ತು ಅಂತರರಾಷ್ಟ್ರೀಯ ರಚನೆಕಾರ ಪ್ರಶಸ್ತಿಯನ್ನು ಇಂದು ಮೋದಿ ನೀಡಿದರು.

ಪ್ರಧಾನಿ ಮೋದಿ ಅವರು ಪ್ರೇರಕ ಭಾಷಣಕಾರ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡ್ರೂ ಹಿಕ್ಸ್ ಮತ್ತು ಇತರರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಪ್ರಶಸ್ತಿಗಳನ್ನು ನೀಡಿದರು.

ಯಾರ್ಯಾರಿಗೆ ಯಾವ ಪ್ರಶಸ್ತಿ ಸಿಕ್ತ?

ಜಯ ಕಿಶೋರಿ ಅವರಿಗೆ ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ಕಬಿತಾ ಸಿಂಗ್ (ಕಬಿತಾಸ್ ಕಿಚನ್) ಅವರಿಗೆ ಆಹಾರ ವಿಭಾಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ಡ್ರೂ ಹಿಕ್ಸ್ ಅವರಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ಕಾಮಿಯಾ ಜಾನಿ ಅವರಿಗೆ ನೆಚ್ಚಿನ ಪ್ರಯಾಣ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ರಣವೀರ್ ಅಲ್ಲಾಬಾಡಿಯಾ (ಬೀರ್‌ಬೈಸೆಪ್ಸ್) ಅವರಿಗೆ ವರ್ಷದ ಡಿಸ್ಟ್ರಪ್ಟರ್ ಪ್ರಶಸ್ತಿಯನ್ನು ನೀಡಲಾಯಿತು.

-RJ ರೌನಾಕ್ (Bauaa) ಅವರಿಗೆ ಅತ್ಯಂತ ಸೃಜನಶೀಲ ಸೃಷ್ಟಿಕರ್ತ-ಪುರುಷ ಪ್ರಶಸ್ತಿಯನ್ನು ನೀಡಲಾಯಿತು.

ಶ್ರದ್ಧಾ ಜೈನ್ ಅವರಿಗೆ ಅತ್ಯಂತ ಸೃಜನಶೀಲ ಸೃಷ್ಟಿಕರ್ತ (ಮಹಿಳೆ) ಪ್ರಶಸ್ತಿಯನ್ನು ನೀಡಲಾಯ್ತು.

ಅರಿದಮನ್ ಅವರಿಗೆ ಅತ್ಯುತ್ತಮ ಮೈಕ್ರೋ ಕ್ರಿಯೇಟರ್ ಪ್ರಶಸ್ತಿ ನೀಡಲಾಯಿತು.

ನಿಶ್ಚಯ್ ಅವರಿಗೆ ಗೇಮಿಂಗ್ ವಿಭಾಗದಲ್ಲಿ ಬೆಸ್ಟ್ ಕ್ರಿಯೇಟರ್ ಪ್ರಶಸ್ತಿ ನೀಡಲಾಯಿತು.

ಅಂಕಿತ್ ಬೈಯನ್ ಪುರಿಯಾ ಅವರಿಗೆ ಅತ್ಯುತ್ತಮ ಆರೋಗ್ಯ ಮತ್ತು ಫಿಟ್ನೆಸ್ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ನಮನ್ ದೇಶಮುಖ್ ಅವರಿಗೆ ಶಿಕ್ಷಣ ವಿಭಾಗದಲ್ಲಿ ಉತ್ತಮ ಸೃಷ್ಟಿಕರ್ತ ಪ್ರಶಸ್ತಿಯನ್ನು ನೀಡಲಾಯಿತು.

ಜಾನ್ವಿ ಸಿಂಗ್ ಅವರಿಗೆ ಹೆರಿಟೇಜ್ ಫ್ಯಾಷನ್ ಐಕಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಲ್ಹಾರ ಕಾಳಂಬೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೌರವ್ ಚೌಧರಿ ಅವರು ಟೆಕ್ ವಿಭಾಗದಲ್ಲಿ ಬೆಸ್ಟ್ ಕ್ರಿಯೇಟರ್ ಪ್ರದಾನ ಮಾಡಲಾಯಿತು.

ಮೈಥಿಲಿ ಠಾಕೂರ್ ಅವರಿಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಂಖ್ತಿ ಪಾಂಡೆ ಅವರಿಗೆ ನೆಚ್ಚಿನ ಗ್ರೀನ್ ಚಾಂಪಿಯನ್ ಪ್ರಶಸ್ತಿಯನ್ನು ನೀಡಲಾಯಿತು.

ಕೀರ್ತಿಕಾ ಗೋವಿಂದಸಾಮಿ ಅವರಿಗೆ ಉತ್ತಮ ಕಥೆಗಾರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಮನ್ ಗುಪ್ತಾ ಅವರಿಗೆ ಸೆಲೆಬ್ರಿಟಿ ಕ್ರಿಯೇಟರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

20 ವಿವಿಧ ವಿಭಾಗಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಿದ ನಂತರ ಮೂವರು ಅಂತರರಾಷ್ಟ್ರೀಯ ರಚನೆಕಾರರು ಸೇರಿದಂತೆ ವಿಜೇತರನ್ನು ನಿರ್ಧರಿಸಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *