
PAMBAN BRIDGE INAUGURATION : 1914 ರಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಗಿದ್ದ ಪಂಬನ್ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಲಾಗಿದೆ. ಎಂಜಿನಿಯರಿಂಗ್ನ ಅದ್ಭುತ ಎಂದೇ ಬಣ್ಣಿಸಲಾಗುವ ಸೇತುವೆಯ ವಿಶೇಷತೆ ಹೀಗಿದೆ.

ಹೈದರಾಬಾದ್: ತಮಿಳುನಾಡಿನ ರಾಮೇಶ್ವರಂನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಪಂಬನ್ ಸಮುದ್ರ ಸೇತುವೆಯನ್ನು ಉದ್ಘಾಟಿಸಿದರು. ಈ ಸೇತುವೆಯು ಭೂಮಿ ಮತ್ತು ರಾಮೇಶ್ವರಂ ದ್ವೀಪದ ನಡುವೆ ರೈಲು ಸಂಪರ್ಕವನ್ನು ಒದಗಿಸುತ್ತದೆ. ರಾಮ ನವಮಿಯ ಶುಭ ಸಂದರ್ಭದಲ್ಲಿ ಸೇತುವೆಯು ಉದ್ಘಾಟನೆಯಾಗಿದೆ. ಇದು ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದೆ.
ರಾಮೇಶ್ವರಂ, ಚಾರ್ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದು. ಇಲ್ಲಿಗೆ ದೇಶ ಮತ್ತು ವಿದೇಶಗಳಿಂದ ವರ್ಷವಿಡೀ ಭಕ್ತರು ಭೇಟಿ ನೀಡುವ ಪವಿತ್ರ ಆಧ್ಯಾತ್ಮಿಕ ತಾಣವಾಗಿದೆ. ಇಲ್ಲಿಗೆ ತೆರಳಲು ರಸ್ತೆ ಮಾರ್ಗವಿದೆ.
https://twitter.com/i/status/1908786681152405960
ಎಂಜಿನಿಯರಿಂಗ್ನ ಅದ್ಭುತ ಪಂಬನ್ ಸೇತುವೆ: ಹೊಸ ಪಂಬನ್ ಸೇತುವೆಯು ಭಾರತದ ಎಂಜಿನಿಯರಿಂಗ್ ಕೌಶಲ್ಯದ ಅದ್ಭುತವಾಗಿದೆ. ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೂಲ ಪಂಬನ್ ಸೇತುವೆಯನ್ನು 1914 ರಲ್ಲಿ ಬ್ರಿಟಿಷ್ ಎಂಜಿನಿಯರ್‌ಗಳು ನಿರ್ಮಿಸಿದ್ದರು.
ಒಂದು ಶತಮಾನಕ್ಕೂ (108 ವರ್ಷ) ಹೆಚ್ಚು ಕಾಲ ಯಾತ್ರಿಕರು, ಪ್ರವಾಸಿಗರು ಮತ್ತು ವ್ಯಾಪಾರಕ್ಕೆ ಜೀವನಾಡಿಯಾಗಿ ಕಾರ್ಯನಿರ್ವಹಿಸಿತು. ಸಮುದ್ರ ನೀರಿನ ಹೊಡೆತ, ಹೆಚ್ಚಿದ ಸಂಚಾರದಿಂದ ಶಿಥಿಲಗೊಂಡಿತ್ತು. ಹೀಗಾಗಿ, ಆಧುನಿಕ ಬೇಡಿಕೆಯಂತೆ 2019 ರಲ್ಲಿ ಕೇಂದ್ರ ಸರ್ಕಾರವು ಬದಲಿ ರೈಲ್ವೆ ಪಥ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು.

ಅದರಂತೆ, ಭಾರತದ ಮೊದಲ ಲಂಬ ಲಿಫ್ಟ್ (ಸೇತುವೆಯ ಇಡೀ ಭಾಗವನ್ನು ನೆಲದಿಂದ ಮೇಲಕ್ಕೆ ನೇರವಾಗಿ ಎತ್ತುವುದು) ರೈಲ್ವೆ ಸಮುದ್ರ ಸೇತುವೆಗೆ ಬುನಾದಿ ಹಾಕಲಾಯಿತು. ಇದು ಹಡಗುಗಳಿಗೆ ದಾರಿ ಮಾಡಿಕೊಡಲು ನೆರವಾಗುತ್ತದೆ. ಇದು 2.07 ಕಿಲೋಮೀಟರ್ ಉದ್ದ ಹೊಂದಿದ್ದು, ಸೇತುವೆಯ ಒಂದು ಭಾಗವನ್ನು ನೇರವಾಗಿ ಮೇಲಕ್ಕೆ (ವರ್ಟಿಕಲ್ ಲಿಫ್ಟ್) ಎತ್ತಲಾಗುತ್ತದೆ. ಇದನ್ನು ರೈಲ್ವೆ ಸಚಿವಾಲಯದ ನವರತ್ನ ಪಿಎಸ್‌ಯು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್) ನಿರ್ಮಿಸಿದೆ.

ಹೊಸ ಪಂಬನ್ ಸೇತುವೆಯ ಪ್ರಮುಖ ಲಕ್ಷಣಗಳು
- 72.5 ಮೀಟರ್ ಉದ್ದದ ಸೇತುವೆಯನ್ನು ಹಡಗುಗಳು ಹಾದುಹೋಗಲು 17 ಮೀಟರ್‌ವರೆಗೆ ಎತ್ತಬಹುದು.
- ಹೊಸ ಸೇತುವೆಯು ಹಳೆಯ ಸೇತುವೆಗಿಂತ 3 ಮೀಟರ್ ಎತ್ತರವಾಗಿದೆ.
- ಎರಡು ಹಳಿಗಳನ್ನು ಹೊಂದಿದೆ. ಹಳೆಯ ಸೇತುವೆ ಒಂದೇ ಮಾರ್ಗವನ್ನು ಹೊಂದಿತ್ತು.
- ಆಧುನಿಕ ವಸ್ತುಗಳು ಮತ್ತು ಎಂಜಿನಿಯರಿಂಗ್ ತಂತ್ರಗಳಿಂದ ಸೇತುವೆಯ ದೀರ್ಘಾಯುಷ್ಯ ಹೊಂದಿದೆ.
- ಸೇತುವೆಯನ್ನು ಸ್ಟೇನ್‌ಲೆಸ್ ಸ್ಟೀಲ್ ಕಬ್ಬಿಣ, ಉನ್ನತ ದರ್ಜೆಯ ರಕ್ಷಣಾತ್ಮಕ ಬಣ್ಣ, ಬಿಗಿಯಾದ ಕೊಂಡಿಗಳಿಂದ ನಿರ್ಮಿಸಲಾಗಿದೆ.
- ವಿಶೇಷ ಪಾಲಿಸಿಲೋಕ್ಸೇನ್ ಲೇಪನವು ಸೇತುವೆಯ ಸವೆತವನ್ನು ರಕ್ಷಿಸುತ್ತದೆ.
ಹೊಸ ಸೇತುವೆಯ ಅಗತ್ಯವೇನಿತ್ತು? ಹಳೆ ಸೇತುವೆಯು ಶಿಥಿಲಗೊಂಡ ಪರಿಣಾಮ ಸಂಚಾರ ನಿಲ್ಲಿಸಿದ ಕಾರಣ, ಸಾರಿಗೆ ಬೇಡಿಕೆಯು ಹೆಚ್ಚಿತು. ಹೆಚ್ಚುತ್ತಿರುವ ದಟ್ಟಣೆಯ ನಿಯಂತ್ರಣ ಮತ್ತು ವೇಗ ಸಂಚಾರಕ್ಕೆ ಈ ರೈಲ್ವೆ ಮಾರ್ಗದ ಅಗತ್ಯವಿತ್ತು. ಸುಗಮ ಕಡಲ ಸಂಚಾರಕ್ಕಾಗಿ ಅತ್ಯಾಧುನಿಕ ಸಮುದ್ರ ಸೇತುವೆಯ ನಿರ್ಮಾಣ ಮಾಡಲಾಗಿದೆ.

ಹೊಸ ಪಂಬನ್ ಸೇತುವೆಯು ತಾಕತ್ತಿದು
- ಭಾರವಾದ ರೈಲು ಸಂಚಾರ ಮತ್ತು ವೇಗದ ರೈಲುಗಳಿಗೆ ಅವಕಾಶ ಕಲ್ಪಿಸುವುದು.
- ಅಡೆತಡೆಗಳಿಲ್ಲದೆ ದೊಡ್ಡ ಹಡಗುಗಳು ಸೇತುವೆ ಕೆಳಗೆ ಹಾದುಹೋಗಲಿವೆ.
- ಕನಿಷ್ಠ 100 ವರ್ಷಗಳಿಗಿಂತ ಹೆಚ್ಚಿನ ಜೀವಿತಾವಧಿ ಹೊಂದಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಗುರುತು: ಹೊಸ ಪಂಬನ್ ಸೇತುವೆ ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ಇದರ ತಾಂತ್ರಿಕತೆ ಮತ್ತು ವಿಶಿಷ್ಟ ವಿನ್ಯಾಸ ದೇಶದ ಎಂಜಿನಿಯರಿಂಗ್ ಕೌಶಲ್ಯವು ಜಾಗತಿಕವಾಗಿ ಮೆಚ್ಚುಗೆ ಗಳಿಸಿದೆ. ಇದು ವಿಶ್ವದ ಪ್ರಖ್ಯಾತ ಸೇತುವೆಗಳ ಜೊತೆ ಸ್ಥಾನ ಪಡೆಯಲಿದೆ. ಅಮೆರಿಕದ ಗೋಲ್ಡನ್ ಗೇಟ್ ಸೇತುವೆ, ಲಂಡನ್‌ನ ಟವರ್ ಸೇತುವೆ ಮತ್ತು ಡೆನ್ಮಾರ್ಕ್-ಸ್ವೀಡನ್‌ನ ಒರೆಸುಂಡ್ ಸೇತುವೆಗಳ ಸಾಲಿನಲ್ಲಿ ಇದು ಸೇರಲಿದೆ.

ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1