
ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಫಿಕ್ಸ್ ಆಗಿದೆ. ಎಲ್ಲಾ ಪಕ್ಷದವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಲ್ಲದೆ, ಜನ ಯಾರ ಪರ ಇದ್ದಾರೆ ಎಂಬ ಆತಂಕದಲ್ಲಿಯೇ ಇದ್ದಾರೆ. ಅದಕ್ಕಾಗಿಯೇ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಂತು ಹೈಕಮಾಂಡ್ ಮೊರೆ ಹೋಗಿದ್ದಾರೆ. ಹೀಗಾಗಿಯೇ ಪ್ರಧಾನಿ ಮೋದಿ ಅವರು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. ಈಗ ಮತ್ತೆ ಭೇಟಿ ನೀಡಲಿದ್ದಾರೆ.
ಇದೇ ತಿಂಗಳ 9ರಂದು ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಹುಲಿಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ಆಸ್ಕರ್ ಅವಾರ್ಡ್ ಪಡೆದಂತ ದಂಪತಿಯನ್ನು ಪ್ರಧಾನಿ ಅವರು ಭೇಟಿಯಾಗಲಿದ್ದಾರೆ.
ಈ ಬಾರಿಯ ಆಸ್ಕರ್ ರೇಸ್ ನಲ್ಲಿ ಎಲಿಫೆಂಟ್ ವಿಸ್ಪರ್ಸ್ ಸಿನಿಮಾ ಗೆದ್ದಿತ್ತು, ಪ್ರಶಸ್ತಿಯನ್ನು ಬಾಚಿಕೊಂಡಿತ್ತು. 41 ನಿಮಿಷಗಳ ಆ ಡಾಕ್ಯುಮೆಂಟರಿಗೆ ಎಲ್ಲರೂ ಮನಸೋತಿದ್ದರು. ಅನಾಥ ಆನೆಯನ್ನು ಹೆತ್ತ ಮಗುವಿನಂತೆ ನೋಡಿಕೊಂಡಿದ್ದರು ದಂಪತಿ. ಈ ಸಿನಿಮಾದ ನಾಯಕ ಬೊಮ್ಮಾ ಮತ್ತು ಅವರ ಪತ್ನಿಯನ್ನು ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ, ಪ್ರಶಂಸಿಲಿದ್ದಾರೆ. ತಮಿಳುನಾಡಿನ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿ ಈ ದಂಪತಿ ಇದ್ದಾರೆ.
The post ಏಪ್ರಿಲ್ 9ರಂದು ಮೈಸೂರಿಗೆ ಬರುವ ಪ್ರಧಾನಿ ಮೋದಿ ಆ ಸ್ಪೆಷಲ್ ದಂಪತಿಯನ್ನು ಭೇಟಿ ಮಾಡದೆ ಹೋಗಲ್ಲ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/8fQj53O
via IFTTT
Views: 0