ವೋಟ್ ಬ್ಯಾಂಕ್ ಅಲ್ಲ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ

ಯಾದಗಿರಿ : ಬಿಜೆಪಿಯ ಆದ್ಯತೆ ಅಭಿವೃದ್ಧಿಯೇ ಹೊರತು ಮತ ಬ್ಯಾಂಕ್ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಒಟ್ಟು 10,863 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹಿಂದಿನ ಸರ್ಕಾರಗಳು ಕಣ್ಣು ಮುಚ್ಚಿ, ಅಭಿವೃದ್ಧಿ ಮತ್ತು ಜನಜೀವನಕ್ಕೆ ಶ್ರಮಿಸುವಲ್ಲಿ ವಿಫಲವಾಗಿರುವುದರಿಂದ ಈ ಪ್ರದೇಶವು ಹಿಂದುಳಿದಿದೆ ಎಂದು ಹೇಳಿದರು.

ಹಿಂದಿನ ಸರಕಾರಗಳು ಕಡೆಗಣಿಸಿದ್ದ ಹಿಂದುಳಿದ ಜಿಲ್ಲೆಗಳಲ್ಲಿ ನಮ್ಮ ಸರ್ಕಾರದಿಂದ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ತಂದಿದ್ದೇವೆ.

3.5 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಪ್ರಾರಂಭವಾದಾಗ, 18 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಂದು, ದೇಶದ ಸುಮಾರು 11 ಕೋಟಿ ಗ್ರಾಮೀಣ ಕುಟುಂಬಗಳು ನಲ್ಲಿ ನೀರನ್ನು ಪಡೆಯುತ್ತಿವೆ ಎಂದು ಪ್ರಧಾನಿ ಮೋದಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಹೇಳಿದರು.

The post ವೋಟ್ ಬ್ಯಾಂಕ್ ಅಲ್ಲ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/WhNjPDK
via IFTTT

Leave a Reply

Your email address will not be published. Required fields are marked *