ಚಿತ್ರದುರ್ಗ ಸೆ. 21
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಬಿಜೆಪಿ ನಗರಮಂಡಲದವತಿಯಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರವನ್ನು ಭಾನುವಾರ ಗೋಪಾಲಪುರ ಮುಖ್ಯ ರಸ್ತೆಯಲ್ಲಿನ ದರ್ಜಿಕಾಲೋನಿ 2ನೇಕ್ರಾಸ್ ಹತ್ತಿರದ ಶ್ರೀ ಸ್ಪೂರ್ತಿಸರ್ಕಲ್‍ಬಳಿ ಶಿವಶಕ್ತಿ ಆಸ್ಪತ್ರೆ ಹತ್ತಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ನೆರವೇರಿಸಿದ್ದು, ಮೋದಿಯವರು ದೇಶದ ಪ್ರಧಾನ ಮಂತ್ರಿಯಾದ ಮೇಲೆ ದೇಶಕ್ಕೆ ಒಂದು ಕಳೆ ಬಂದಿದೆ ಈ ಹಿಂದೆ ನಮ್ಮ ದೇಶದಿಂದ ಪ್ರಧಾನ ಮಂತ್ರಿಗಳು ಹೊರ ದೇಶಕ್ಕೆ ಹೋದರೆ ಅಲ್ಲಿ ಬರ ಮಾಡಿಕೊಳ್ಳು ಆ ದೇಶದ ಯಾರೂ ಒಬ್ಬರು ಬರುತ್ತಿದ್ದರು ಅದರೆ ಈಗ ನಮ್ಮ ದೇಶದ ಪ್ರಧಾನ ಮಂತ್ರಿ ಬೇರೆ ದೇಶಕ್ಕೆ ಹೋದರೆ ಅಲ್ಲಿನ ದೇಶದ ಪ್ರಧಾನ ಮಂತ್ರಿಗಳೇ ಏರ್ ಪೋರ್ಟ್ ಗೆ ಬಂದು ಕರೆದುಕೊಂಡು ಹೋಗುತ್ತಾರೆ, ಇದು ನಮ್ಮ ಪ್ರಧಾನಿಯ ಗತ್ತು, ದೇಶದಲ್ಲಿ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ಬೇರೆ ದೇಶದವರು ಸಹಾ ನಮ್ಮ ದೇಶದ ಪ್ರಧಾನ ಮಂತ್ರಿಯ ಮಾತನ್ನು ಕೇಳುತ್ತಿದ್ದಾರೆ, ಏನಾದರೂ ಬೇರೆ ದೇಶಗಳ ಮಧ್ಯೆ ಕಲಹ ನಡೆದರೆ ನಮ್ಮ ದೇಶದ ಪ್ರಧಾನ ಮಧ್ಯಸ್ಥಿಕೆಯಲ್ಲಿ ಮಾತುಕಥೆ ನಡೆಯುವುದರ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುತ್ತದೆ ಎಂದರು.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಸೆ. 17 ರಿಂದ ಅ. 2ರವರೆಗೆ ಸೇವಾ ಪಾಕ್ಷಿಕ 2025ರ ಅಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಬಿಜೆಪಿವತಿಯಿಂದ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ರಕ್ತದಾನ ಶಿಬಿರ ಆರೋಗ್ಯ ಶಿಬಿರ, ಸಸಿ ನಡೆವಿಕೆ, ಸ್ವಚ್ಚತೆ, ಮೋದಿಯವರ ಜೀವನ ಚರಿತೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ, ಪ್ರಬುದ್ದರ ಗೋಷ್ಟಿ, ಸಾಕ್ಷ್ಯಚಿತ್ರ ವೀಕ್ಷಣೆ, ಪುಸ್ತಕ ವಿತರಣೆ, ಮೋದಿ ವಿಕಾಸ ಮ್ಯಾರಥಾನ್ ಕ್ರೀಡೆ ಹಾಗೂ ಚಿತ್ರಕಲಾ ಸ್ಪರ್ದೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ನಗರಾಧ್ಯಕ್ಷರಾದ ಹೆಚ್.ಎನ್. ಲೋಕೇಶ್, ಪ್ರಧಾನ ಕಾರ್ಯದರ್ಶಿ ಬಸವೇಶ್ ಎಂ.ಎಸ್. ಲೀಲಾವತಿ ಎಸ್.ಶಶಿಧರ್, ಯುವ ಮೋರ್ಚಾ ಅಧ್ಯಕ್ಷ ಎಂ.ವಸಂತ ಆಚಾರ್, ಎಸ್.ಜೆ.ರವಿಕುಮಾರ್ ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಿಕಾ ಲೋಕನಾಥ್, ನಗರ ಮಂಡಲದ ಸೋಷಿಯಲ್ ಮೀಡಿಯಾದ ಅಣ್ಣಪ್ಪ, ನಗರ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಕವಿತಾ, ಪ್ರಧಾನ ಕಾರ್ಯದರ್ಶಿಗಳಾದ ಸುಮ ಕಮ್ಮಲಮ್ಮ ನಗರಸಭಾ ಅಧ್ಯಕ್ಷರಾದ ಅನಿತಾ ರಮೇಶ್ ಕರವೇ ಅಧ್ಯಕ್ಷರಾದ ಟಿ.ರಮೇಶ್, ಕವನ ರಾಘವೇಂದ್ರ, ರಜನಿ ಲೇಪಣ್ಣ. ನಗರ ಉಪಾಧ್ಯಕ್ಷ ಪಲ್ಲವಿ ಪ್ರಸನ್ನ, ಮಹಾಂತೇಶ್ ಯಾದವ್, ನಗರ ಉಪಾಧ್ಯಕ್ಷ ಲಿಂಗರಾಜು, ರವಿಕುಮಾರ್ ದೀಪು, ಮಾಧುರಿ ಗೀರೀಶ್, ಯುವ ಮೋರ್ಚಾದ ಪದಾಧಿಕಾರಿಗಳಾದ ಕಾರ್ತಿಕ್, ಬಾಲಾಜಿ, ಶರತ್ ಆಕಾಶ್, ನೀತಿಶ್, ದೇವರಾಜು, ಆಣ್ಣಪ್ಪ, ಮಲ್ಲಿಕಾರ್ಜನ್ ಭಾಗವಹಿಸಿದ್ದರು.
ಈ ತಪಾಸಣಾ ಶಿಬಿರದಲ್ಲಿ ಬಿ.ಪಿ. ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಡೆಸಿದ್ದು, ಇದರ ಪ್ರಯೋಜನವನ್ನು ಗೋಪಾಲಪುರ ರಸ್ತೆಯ ಸುತ್ತಮುತ್ತಲಿನ ನಾಗರಿಕರು ಸದುಪಯೋಗ ಪಡಿಸಿಕೊಂಡಿದ್ದಾರೆ.
Views: 144