Prithvi Shaw Selfie Row:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆಗೆ ಯತ್ನಿಸಿದ್ದ ಸುಂದರಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

Sapna Gill Sent To 4-Day Police Custody

ಮುಂಬೈ: ಸೆಲ್ಫಿ ನಿರಾಕರಿಸಿದ್ದಕ್ಕೆ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ (Prithvi Shaw )ಮೇಲೆ ದಾಳಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ​ ಸಪ್ನಾ ಗಿಲ್(Sapna Gill)​ ಅವರನ್ನ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಫೆಬ್ರವರಿ 20ರ ವರೆಗೆ ಪೊಲೀಸ್ ಕಸ್ಟಡಿಗೆ (Police Custody) ನೀಡಿ ಅಂಧೇರಿ ನ್ಯಾಯಾಲಯ ಇಂದು(ಫೆಬ್ರವರಿ 17) ಆದೇಶಿಸಿದೆ.

ಇದನ್ನೂ ಒದಿ: ಪೃಥ್ವಿ ಶಾ ಮೇಲೆ ದಾಳಿಗೆ ಯತ್ನಿಸಿದ ಆರೋಪ ಹೊತ್ತಿರುವ ಸಪ್ನಾ ಗಿಲ್ ಯಾರು ಗೊತ್ತಾ?

ಉಪನಗರ ಸಾಂತಾಕ್ರೂಜ್‌ನ ಐಷಾರಾಮಿ ಹೋಟೆಲ್‌ನ ಹೊರಗೆ ಬುಧವಾರ ಮುಂಜಾನೆ ಈ ಘಟನೆ ನಡೆದಿತ್ತು. ಗುರುವಾರ ಸಂಜೆ ಸಪ್ನಾ ಗಿಲ್ ಅವರನ್ನು ಓಶಿವಾರ ಪೊಲೀಸರು ಬಂಧಿಸಿದ್ದು, ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಮತ್ತು ಇತರ ಆರು ಮಂದಿ ವಿರುದ್ಧ ಗಲಭೆ ಮತ್ತು ಸುಲಿಗೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಠಾಕೂರ್ ಮತ್ತು ಗಿಲ್ ಹೋಟೆಲ್‌ನಲ್ಲಿ ಸೆಲ್ಫಿಗಾಗಿ ಪೃಥ್ವಿ ಶಾ ಅವರನ್ನು ಸಂಪರ್ಕಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ ಪೃಥ್ವಿ ಶಾ ಅವರೊಂದಿಗೆ ಗಿಲ್ ಮತ್ತು ಠಾಕೂರ್ ಅನುಚಿತವಾಗಿ ವರ್ತಿಸಿದ್ದರು. ಅವರಿಬ್ಬರು ಮದ್ಯದ ನಶೆಯಲ್ಲಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

source https://tv9kannada.com/sports/cricket-news/cricketer-prithvi-shaw-selfie-row-influencer-sapna-gill-sent-to-4-day-police-custody-rbj-au58-522045.html

Views: 0

Leave a Reply

Your email address will not be published. Required fields are marked *