ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರಿಗೆ ಹೋಗುವ ಬಸ್‍ಗೆ ಬೇಡಿಕೆ ಹೆಚ್ಚಾಗಿದೆ. ಮಾಮೂಲಿ ಬಸ್ ಹೊರತು ಪಡಿಸಿ ಕರಾವಳಿ ಭಾಗಕ್ಕೆ ಹೆಚ್ಚುವರಿ 300 ಬಸ್ ಬುಕ್ಕಿಂಗ್ ಆಗಿವೆ.

ಬೆಂಗಳೂರು: ಏಪ್ರಿಲ್ 26 ರಂದು ಕರ್ನಾಟಕದ (Karnataka) ಮೊದಲ ಹಂತದ ಲೋಕ ಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಮತದಾನಕ್ಕಾಗಿ ಬೆಂಗಳೂರಿನಿಂದ ಊರಿಗೆ ತೆರಳಲು ಜನರು ಸಜ್ಜಾಗಿದ್ದಾರೆ. ಏಪ್ರಿಲ್ 25ರ ರಾತ್ರಿ ಊರಿಗೆ ತೆರಳಲು ಸಜ್ಜಾಗಿದ್ದು, ಖಾಸಗಿ ಬಸ್‍ಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರಿಗೆ ಹೋಗುವ ಬಸ್‍ಗೆ (Bus) ಬೇಡಿಕೆ ಹೆಚ್ಚಾಗಿದೆ. ಮಾಮೂಲಿ ಬಸ್ ಹೊರತು ಪಡಿಸಿ ಕರಾವಳಿ ಭಾಗಕ್ಕೆ ಹೆಚ್ಚುವರಿ 300 ಬಸ್ ಬುಕ್ಕಿಂಗ್ ಆಗಿವೆ.
ಖಾಸಗಿ ಬಸ್‍ಗೆ ಡಿಮ್ಯಾಂಡ್
ಪ್ರಮುಖವಾಗಿ 7 ಜಿಲ್ಲೆಗಳಿಗೆ ಹೆಚ್ಚುವರಿ ಬಸ್‍ಗಳನ್ನು ಒದಗಿಸುವಂತೆ ಡಿಮ್ಯಾಂಡ್ ಬಂದಿದೆ. ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಖಾಸಗಿ ಬಸ್ ದರ ಒನ್ ಟು ಡಬಲ್ ಏರಿಕೆಯಾಗಿದೆ.
ಅತ್ತ ಸ್ವಯಂ ಪ್ರೇರಿತವಾಗಿ ಜನ ಊರಿಗೆ ತೆರಳಲು ಬಸ್ ಬುಕ್ ಮಾಡ್ತಿದ್ದಾರೆ.
ಯಾವ ಜಿಲ್ಲೆಗೆ ಎಷ್ಟು ಬಸ್
1. ಬೆಂಗಳೂರು- ಮಂಗಳೂರು 350 ಖಾಸಗಿ ಬಸ್
2. ಬೆಂಗಳೂರು – ಉಡುಪಿ 150 ಖಾಸಗಿ ಬಸ್
3. ಬೆಂಗಳೂರು – ಚಿಕ್ಕಮಗಳೂರು 65 ಖಾಸಗಿ ಬಸ್
4. ಬೆಂಗಳೂರು-ಹಾಸನ 70 ಖಾಸಗಿ ಬಸ್
5. ಬೆಂಗಳೂರು- ಚಿತ್ರದುರ್ಗ 201 ಖಾಸಗಿ ಬಸ್
6. ಬೆಂಗಳೂರು- ಮೈಸೂರು 100 ಖಾಸಗಿ ಬಸ್
7. ಬೆಂಗಳೂರು- ಚಾಮರಾಜನಗರ 50 ಖಾಸಗಿ ಬಸ್
ಖಾಸಗಿ ಬಸ್ ಗೆ ಡಿಮ್ಯಾಂಡ್
ಬೆಂಗಳೂರು- ಮಂಗಳೂರು ಸಾಮಾನ್ಯ ದಿನದ ದರ ₹500- ₹1000
ಏಪ್ರಿಲ್ 25ರ ದರ ₹1600- ₹1950
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹950
ಏಪ್ರಿಲ್ 25 ದರ ₹1650-₹1950
ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇಂದಿನ ದರ ₹1100-₹1600
ಬೆಂಗಳೂರು-ಹಾಸನ
ಸಾಮಾನ್ಯ ದಿನದ ದರ ₹650 ₹850
ಏಪ್ರಿಲ್ 25 ದರ ₹1200-₹1600
ಬೆಂಗಳೂರು- ಚಿತ್ರದುರ್ಗ
ಸಾಮಾನ್ಯ ದಿನದ ದರ ₹450- ₹650
ಏಪ್ರಿಲ್ 25 ದರ ₹800-₹1200
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1