ಸೆ.11ರಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮುಷ್ಕರ: ಈ ಪ್ರದೇಶದ ಶಾಲೆಗಳಿಗೆ ರಜೆ ಘೋಷಣೆ

Private transport strike in Bengaluru: ಖಾಸಗಿ ವಾಹನ ಸೇವೆಗಳು ಹೆಚ್ಚು ಅಗತ್ಯವಿರುವುದರಿಂದ ಅವರ ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ವಿನಂತಿಯೊಂದಿಗೆ ನಾವು ಬಂದ್‌ಗೆ ನಮ್ಮ ನೈತಿಕ ಬೆಂಬಲವನ್ನು ನೀಡಿದ್ದೇವೆ.

  • ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳ ಕಾರ್ಯನಿರ್ವಹಣೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.
  • ಖಾಸಗಿ ಸಾರಿಗೆ ಮುಷ್ಕರವು ಸೆಪ್ಟೆಂಬರ್ 11 ರಂದು ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು
  • ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲವು ಶಾಲೆಗಳು ರಜೆ ಘೋಷಿಸಿವೆ

Private transport strike in Bengaluru: ಸೋಮವಾರ ಅಂದರೆ ಸೆಪ್ಟೆಂಬರ್ 11ರಂದು ಫೆಡರೇಶನ್ ಆಫ್ ಪ್ರೈವೇಟ್ ಟ್ರಾನ್ಸ್‌’ಪೋರ್ಟ್ ಅಸೋಸಿಯೇಷನ್ ಬಂದ್‌ಗೆ ಕರೆ ನೀಡಿರುವುದರಿಂದ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳ ಕಾರ್ಯನಿರ್ವಹಣೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ನಗರದಲ್ಲಿ ಸಾರಿಗೆಗಾಗಿ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲವು ಶಾಲೆಗಳು ರಜೆ ಘೋಷಿಸಿವೆ. ಇನ್ನು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಸಹ ಬಂದ್‌’ಗೆ ಬೆಂಬಲವನ್ನು ನೀಡಿದ್ದರೂ ಕೂಡ ಅದರ ಎಲ್ಲಾ ಸದಸ್ಯ ಶಾಲೆಗಳಿಗೆ ರಜೆ ಘೋಷಿಸಿಲ್ಲ.

“ಖಾಸಗಿ ಸಾರಿಗೆ ಮುಷ್ಕರವು ಸೆಪ್ಟೆಂಬರ್ 11 ರಂದು ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು” ಎಂದು ಅಸೋಸಿಯೇಷನ್ ​​ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ, “ಕೆಲವು ಶಾಲೆಗಳು ರಜೆ ಘೋಷಿಸಿರುವುದರಿಂದ, ಪೋಷಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಎಲ್ಲಾ ಶಾಲೆಗಳಿಗೆ ಸಾರ್ವತ್ರಿಕ ರಜೆ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಖಾಸಗಿ ವಾಹನಗಳನ್ನು ಬಳಸಿ ಪ್ರಯಾಣಿಸುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ” ಎಂದು ಹೇಳಿದ್ದಾರೆ.

ನಿರ್ದಿಷ್ಟ ದಿನದಂದು ಮಕ್ಕಳನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ವ್ಯವಸ್ಥೆ ಮಾಡುವಂತೆ ಪಾಲಕರಿಗೆ ಕುಮಾರ್ ವಿನಂತಿಸಿದ್ದಾರೆ.

“ಖಾಸಗಿ ವಾಹನ ಸೇವೆಗಳು ಹೆಚ್ಚು ಅಗತ್ಯವಿರುವುದರಿಂದ ಅವರ ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ವಿನಂತಿಯೊಂದಿಗೆ ನಾವು ಬಂದ್‌ಗೆ ನಮ್ಮ ನೈತಿಕ ಬೆಂಬಲವನ್ನು ನೀಡಿದ್ದೇವೆ. ಕೆಲವು ಪೋಷಕರು ಶಾಲೆಗಳಿಗೆ ರಜೆ ನೀಡಲು ವಿನಂತಿಸಿದ್ದಾರೆ. ಇನ್ನು ಹಲವಾರು ಉದ್ಯೋಗಸ್ಥ ಪೋಷಕರು, ಸರಿಯಾದ ಸಮಯಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಲು ಮತ್ತು ಬಿಡಲು ಸಾಧ್ಯವಿಲ್ಲ. ಅನಾನುಕೂಲತೆಯನ್ನು ಪರಿಗಣಿಸಿ, ನಾವು ಅಂತಹ ಮಕ್ಕಳಿಗೆ ಅನುಮತಿ ನೀಡಿದ್ದೇವೆ” ಎಂದು ಸೆಂಟ್ರಲ್ ಬೆಂಗಳೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಹೇಳಿದರು.

Source: https://zeenews.india.com/kannada/india/private-transport-strike-in-bengaluru-on-september-11-holiday-declared-for-schools-in-the-region-157385

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshkನಮ್ಮ Facebook page: https://www.facebook.com/samagrasudii

Leave a Reply

Your email address will not be published. Required fields are marked *