Pro Kabaddi League season 11: ಪ್ರೊ ಕಬಡ್ಡಿ ಲೀಗ್​ಗೆ ಡೇಟ್ ಫಿಕ್ಸ್: ಗುಮ್ಮೋಕೆ ಬೆಂಗಳೂರು ಬುಲ್ಸ್ ರೆಡಿ.

ಪ್ರೊ ಕಬಡ್ಡಿ ಲೀಗ್​ನ 11ನೇ ಆವೃತ್ತಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಅಕ್ಟೋಬರ್ 18 ರಿಂದ ಶುರುವಾಗಲಿದೆ. ಇನ್ನು ದ್ವಿತೀಯ ಹಂತದ ಪಂದ್ಯಗಳು ನವೆಂಬರ್ 10 ರಿಂದ ಪ್ರಾರಂಭವಾಗಲಿದ್ದು, ತೃತೀಯ ಹಂತದ ಮ್ಯಾಚ್​ಗಳು ಡಿಸೆಂಬರ್ 3 ರಿಂದ ಶುರುವಾಗಲಿದೆ. ಈ ಮೂರು ಹಂತದ ಪಂಧ್ಯಗಳು ಹೈದರಾಬಾದ್, ಪುಣೆ ಹಾಗೂ ನೋಯ್ಡಾದಲ್ಲಿ ನಡೆಯಲಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 11 ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಅಕ್ಟೋಬರ್ 18 ರಿಂದ 11ನೇ ಆವೃತ್ತಿಯ ಕಬಡ್ಡಿ ಕದನ ಶುರುವಾಗಲಿದೆ. ಈ ಬಾರಿ ಕೂಡ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿದ್ದು, ಮೊದಲ ಪಂದ್ಯಕ್ಕೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದ ಆತಿಥ್ಯವಹಿಸಲಿದೆ.

ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್​ ಅನ್ನು ಮೂರು ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಸುತ್ತಿನ ಪಂದ್ಯಗಳು ಹೈದರಾಬಾದ್​ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಇನ್ನು ಮೂರನೇ ಹಂತದ ಪಂದ್ಯಗಳು ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಈ ಬಾರಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ತಂಡದ ಯಾವುದೇ ಪಂದ್ಯಗಳಿರುವುದಿಲ್ಲ.

ಕಳೆದ ಸೀಸನ್ ಪ್ರೊ ಕಬಡ್ಡಿ ಲೀಗ್ ಅನ್ನು 12 ನಗರಗಳಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಫ್ರಾಂಚೈಸಿಗಳು ತಮ್ಮ ತವರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿದ್ದರು. ಆದರೆ ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಟೂರ್ನಿಯನ್ನು ಆಯೋಜಿಸಲು ಪ್ರೊ ಕಬಡ್ಡಿ ಆಯೋಜಕರು ನಿರ್ಧರಿಸಿದ್ದಾರೆ. ಹೀಗಾಗಿ ತವರಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿರುವುದಿಲ್ಲ.

ಇನ್ನು ಬಾರಿ ಬಲಿಷ್ಠ ಪಡೆಯನ್ನು ರೂಪಿಸಿರುವ ಬೆಂಗಳೂರು ಬುಲ್ಸ್ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 6 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಬುಲ್ಸ್​ ಪಡೆಗೆ ಮತ್ತೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಮತ್ತೆ ಹಳೆಯ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ ಬೆಂಗಳೂರು ಬುಲ್ಸ್.

ಬೆಂಗಳೂರು ಬುಲ್ಸ್ ತಂಡ: ಸುಶೀಲ್, ಅಕ್ಷಿತ್, ಮಂಜೀತ್, ಪಂಕಜ್, ಅಜಿಂಕ್ಯ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸೌರಭ್ ನಂದಲ್, ಆದಿತ್ಯ ಪೊವಾರ್, ಲಕ್ಕಿ ಕುಮಾರ್, ಪಾರ್ತೀಕ್, ಅರುಳ್ನಂತಬಾಬು, ರೋಹಿತ್ ಕುಮಾರ್, ಅಕ್ಷಿತ್, ಹಸುನ್ ಥೋಂಗ್‌ಕ್ರುಯಾ, ಚಂದ್ರನಾಯಕ್ ಎಂ, ನಿತಿನ್ ರಾವಲ್.

Source : https://tv9kannada.com/photo-gallery/pkl-11-pro-kabaddi-league-season-to-begin-from-october-18-kannada-news-zp-896174.html

Leave a Reply

Your email address will not be published. Required fields are marked *