ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 04 ಹೊಳಲ್ಕೆರೆ ಪಟ್ಟಣದಲ್ಲಿ ಕರ್ನಾಟಕ ಫ್ಯಾಮಿಲ್ಸಿ ಅಸೋಸಿಯೇಷನ್ವತಿಯಿಂದ ಸಾರ್ವಜನಿಕರಿಗಾಗಿ ಮನೋರಂಜನಾ ಕೇಂದ್ರವನ್ನು ಕಾನೂನು ಪ್ರಕಾರವಾಗಿ ನಡೆಸುತ್ತಿದ್ದರು ಸಹಾ ಪೋಲಿಸರು ವಿನಾ ಕಾರಣ ತೊಂದರೆಯನ್ನು ನೀಡುತ್ತಿದ್ದಾರೆ, ಯಾವುದೇ
ಕಾರಣವನ್ನು ನೀಡದೇ ನಮ್ಮಲ್ಲಿ ಆಟವನ್ನು ಆಡುವ ಸದಸ್ಯರನ್ನು ತಪಾಸಣೆಗೆ ಒಳಪಡಿಸಿ ಅವರನ್ನು ಮುಜುರಗಕ್ಕೆ ಈಡು
ಮಾಡುತ್ತಿದ್ದಾರೆ ಎಂದು ಕರ್ನಾಟಕ ಫ್ಯಾಮಿಲ್ಸಿ ಅಸೋಸಿಯೇಷನ್ನ ಅಧ್ಯಕ್ಷರಾದ ನಾಗರಾಜು ಪೋಲಿಸರ ವಿರುದ್ದ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಪೂರ್ವಪರ
ಮಾಹಿತಿಯನ್ನು ನೀಡದೇ ಕ್ಲಬ್ನಲ್ಲಿ ಆಟವಾಡುತ್ತಿದವರನ್ನು ಪೊಲೀಸ್ವ್ಯಾನ್ನಲ್ಲಿ ಹತ್ತಿಸಿಕೊಂಡು ಗಾಂಜಾ ಸೇವನೆ ಮಾಡಿದ್ದಾರೆ
ಎಂದು ಆರೋಪಿಸಿ ಜಿಲ್ಲಾಸ್ಪತ್ರೆಗೆ ಕರೆದು ತಂದು ತಪಾಸಣೆಗೆ ಒಳಪಡಿಸಿದ್ದಾರೆ.. ಇದರಲ್ಲಿ ಯಾರು ಸಹ ಗಾಂಜಾ ಸೇವನೆ ಮಾಡಿಲ್ಲ.
ಅದಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಲಾಗಿದೆ ನಾವು
ಕ್ಲಬ್ಗೆ ಸಂಬಂಧಪಟ್ಟಂತೆ ಕಾನೂನು ಪ್ರಕಾರವಾಗಿ ಎಲ್ಲಾ ರೀತಿಯಾದಂತಹ ದಾಖಲಾತಿಗಳನ್ನು ಹೊಂದಿದ್ದೇವೆ ಎಂದರು.
ಕಾನೂನು ಪ್ರಕಾರ ಎಲ್ಲಾ ದಾಖಲಾತಿಗಳು ಇದ್ದರೂ ಸಹ ಪೊಲೀಸÀರು 2-3 ದಿನಕ್ಕೊಮ್ಮೆ ನಮ್ ಕ್ಲಬ್ಗೆ ಬಂದು ಸರ್ಚ್ ವಾರೆಂಟ್
ಇಲ್ಲದೆ ಕ್ಲಬ್ನಲ್ಲಿ ರಮ್ಮಿ ಆಟವಾಡುತ್ತಿದ್ದವರನ್ನು ಅಂದರ್ ಬಾಹರ್ ಆಡುತ್ತಿದ್ದೀರಿ ಎಂದು ಆರೋಪಿಸಿ ವ್ಯಾನ್ ನಲ್ಲಿ ಹತ್ತಿಸಿಕೊಂಡು
ಹೋಗುತ್ತಿದ್ದಾರೆ. ನಮ್ಮ ಕ್ಲಬ್ನಲ್ಲಿ ಏನಾದರೂ ತೊಂದರೆ ಇದ್ದರೆ ಲಿಖಿತವಾಗಿ ಮಾಹಿತಿ ಕೊಡಿ ಎಂದು ಪೊಲೀಸ್ ಇಲಾಖೆಗೆ
ಕೇಳಿದರು ಸಹ ಯಾವುದೇ ರೀತಿಯಾದಂತಹ ಮಾಹಿತಿಯನ್ನು ನೀಡದೇ ತೊಂದರೆ ನೀಡುತ್ತಿದ್ದಾರೆ ಎಂದು ನಾಗರಾಜ್
ಆರೋಪಿಸಿದ ನಾಗರಾಜ್, ದುಡ್ಡು ಹಾಕಿ ರಮ್ಮಿ ಆಡೋದು ಅಪರಾಧವಲ್ಲ ಎಂದು ಹೈಕೋರ್ಟ್ ತಿಳಿಸಿದೆ ಇಷ್ಠಾದರೂ ಸಹಾ
ಪೋಲಿಸನವರು ವಿನಾ ಕಾರಣ ನಮ್ಮ ಕ್ಲಬ್ ಮೇಲೆ ಧಾಳಿಯನ್ನು ಮಾಡುತ್ತಿದ್ದಾರೆ, ಇದ್ದಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲ
ಬೇಕಾದ ತೆರಿಗೆಯನ್ನು ಕಟ್ಟಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಯವರು ನನ್ನ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿದ್ದು ಅವುಗಳು ಸುಳ್ಳು ಪ್ರಕರಣಗಳೆಂದು ಹೈಕೋರ್ಟ್
ವಜಾ ಮಾಡಿದೆ.ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 29 ಕ್ಲಬ್ ಗಳಿದ್ದು ಹೊಳಲ್ಕೆರೆ ತಾಲ್ಲೂಕಿನಲ್ಲಿ ನಮ್ಮ ಕ್ಲಬ್ ಸೇರಿದಂತೆ ಇತರೆ 7
ಕ್ಲಬ್ಗಳಿವೆ. ಆದರೆ ಅವುಗಳನ್ನು ಬಿಟ್ಟು ನಮ್ಮ ಕ್ಲಬ್ ಮೇಲೆ ದಾಳಿ ಮಾಡುವ ಮೂಲಕ ಆಟವಾಡಲು ಬಂದಂತಹ ಜನರನ್ನು
ಹೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ನಮ್ಮ ಕ್ಲಬ್ ಮೇಲೆ ಯಾವುದೇ ಸಾರ್ವಜನಿಕ ದೂರು ಸಹ ಇರುವುದಿಲ್ಲ. ಇಷ್ಟಿದ್ದರೂ ಸಹ
ಪೊಲೀಸ್ ನವರು ನಮ್ಮ ಕ್ಲಬ್ ಮೇಲೆ ವಿನಾಕಾರಣ ದಾಳಿ ಮಾಡುವ ಮೂಲಕ ನಮ್ಮ ಕ್ಲಬ್ನ ಸದಸ್ಯರನ್ನು ಹೆದರಿಸುತ್ತಿದ್ದಾರೆ ಎಂದು
ಪೋಲಿಸರವರ ಮೇಲೆ ಕಿಡಿ ಕಾರಿದರು.
ಕಾನೂನು ಪ್ರಕಾರವಾಗಿ ಮನರಂಜನೆಗಾಗಿ ಹೊಳಲ್ಕೆರೆಯಲ್ಲಿ ಕ್ಲಬ್ನ್ನು ನಡೆಸುತ್ತಿದ್ದು ಪೋಲಿಸ್ ನವರು ವಿನಹ ಕಾರಣ ತೊಂದರೆ
ನೀಡುತ್ತಿದ್ದಾರೆ. ಪೋಲಿಸ್ನವರ ಈ ನಡೆಯನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಕ್ಲಬ್ನ ಸದಸ್ಯರೊಂದಿಗೆ ಕ್ಲಬ್ನಿಂದ ಹೊಳಲ್ಕೆರೆ
ಪಟ್ಟಣದ ತಹಶೀಲ್ದಾರ್ ಕಛೇರಿವರೆಗೆ ಪಾದಯಾತ್ರೆ ಮಾಡಿ ತಹಶೀಲ್ದಾರ್ ರವರಿಗೆ ನಮಗೆ ಆಗುತ್ತಿರು ಅನ್ಯಾಯದ ಬಗ್ಗೆ ಮನವಿ
ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.