
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 21 : ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮಕ್ಕಳಿಗೆ ತಮ್ಮ ಗುರಿಯನ್ನು ಬಾಲ್ಯದಲ್ಲಿಯೇ ಮೂಡಿಸಿ. ಅದಕ್ಕೆ
ಪುಷ್ಠಿಕೊಡುವಂತಹ ಕಾರ್ಯಕ್ರಮವನ್ನು ಇತ್ತೀಚೇಗೆ ಚಿತ್ರದುರ್ಗ ನಗರದ ಶ್ರೀ ಪಾಶ್ರ್ವನಾಥ ಶಾಲೆಯ ಆವರಣದಲ್ಲಿ ಸಂಭ್ರಮದಿಂದ
ಆಚರಿಸಲಾಯಿತು.

1 ರಿಂದ 5 ನೇ ತರಗತಿಯ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ವಿವಿಧರೀತಿಯ ಧರಿಸಿ ತಾವು ಬೆಳೆದು ದೊಡ್ಡವರಾದ ಮೇಲೆ
ಜೀವನದಲ್ಲಿ ಯಾವ ವೃತ್ತಿಯನ್ನು ಆಯ್ತು ಕೊಳ್ಳುತ್ತೇವೆಂದು ತಮ್ಮ ಅದ್ಭುತವಾದ ಅಭಿನಯ ಮತ್ತು ಭಾಷಣವನ್ನು ಮಾಡುವ ಮೂಲಕ
ನೆರೆದಿದ್ದವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮಚಂದ್ ಸುರಾನ, ಕಾರ್ಯದರ್ಶಿಗಳಾದ ಸುರೇಶ್‍ಕುಮಾರ್ ಸಿಸೋಡಿಯಾ,
ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ನಾಜಿಮಾ ಸ್ವಾಲೆಹಾ ಪ್ರೌಡಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ವಿಜಯಲಕ್ಷ್ಮೀ ಹಾಗೂ ಮುಖ್ಯೋಪಾಧ್ಯಾನಿಯಾದ ಶ್ರೀಮತಿ ಶಾಂತಕುಮಾರಿ ಹಾಗೂ ಬೋಧಕ ಬೋಧಕೇತರ ವರ್ಗ ಹಾಗೂ
ಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.