
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಚಿತ್ರದುರ್ಗ : ದೇವಾಲಯ ಸಂವರ್ಧನ ಸಮಿತಿ ಹಾಗೂ ಪತಾಂಜಲಿ ಯೋಗ ಸಮಿತಿ ವತಿಯಿಂದ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು,ಚಿತ್ರದುರ್ಗ ನಗರದ ದವಳಗಿರಿ ಬಡವನಹಳ್ಳಿ ಇರುವ ಕರ್ನಾಟಕ ಕಿವಿ ಮತ್ತು ಗಂಟಲು ಆಸ್ಪತ್ರೆಯಲ್ಲಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣಾ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರಾದ ತೊಳಜಾಕ್ಷಿ ಬಾಯಿ ಮಾತನಾಡಿ ತಪಸ್ಮಾ ಶಿಬಿರವನ್ನು ಮಾಡಿದ ಉದ್ದೇಶ ಬ್ರೆಸ್ಟ್ ಕ್ಯಾನ್ಸರ್ ಸರ್ವೆಕಲ್ ಕ್ಯಾನ್ಸರ್ ತಪಾಸಣೆ ಮಾಡಲಾಯಿತು ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅತಿ ಹೆಚ್ಚಾಗಿ ಕಾಣುತ್ತಿದೆ ಈ ರೋಗವನ್ನು ತಡೆಗಟ್ಟಲು 16 ರಿಂದ 46 ವಯಸ್ಸಿನ ಸ್ತ್ರೀ ಹಾಗೂ ಪುರುಷರು ಲಸಿಕೆ ಹಾಕಿಸಿಕೊಳ್ಳಬೇಕು. ನಾನು ಉಚಿತ ಶಿಬಿರದಲ್ಲಿ 120 ಸ್ತ್ರೀಯರಲ್ಲಿ ಡಯಾಬಿಟಿಕ್ 20 ಹನೇಮಿಯಾ 8 ಪರ್ಸೆಂಟ್ ಕಂಡುಬಂದಿದೆ ಇದರ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ. ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಗಿಡ ಮರಗಳನ್ನು ಕಡಿದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ ನಗರಗಳಲ್ಲಿ ಮನೆಗೊಂದು ಗಿಡ ಬಳಸಿದರೆ ಆರೋಗ್ ಚೆನ್ನಾಗಿರುತ್ತದೆ ತಪಾಸಣಾ ಶಿಬಿರ ಆ ಯೋಜನೆ ಮಾಡಿದ್ದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಡಾಕ್ಟರ್ ತೊಲಜಾಕ್ಷಿ ಬಾಯಿ ಹಾಗೂ ಡಾಕ್ಟರ್ ಪ್ರಮೋದ್ ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಆಯೋಜಕರಾದ ಸದಸ್ಯರುಗಳಾದ ಜಿಎಂ ಲವಕುಮಾರ್ ಗುರುಮೂರ್ತಿ ಶ್ರೀಕಾಂತ ರಘು ಶ್ರೀನಿವಾಸ್ ದಯಾನ ನಾಯಕ್ ಆಡಿಟರ್ ರಂಗಣ್ಣ ಶಶಿಕಿರಣ್ ಮುನಿಯಪ್ಪ ಕೆಂಚವಿರಪ್ಪ ಈಶ್ವರಪ್ಪ ರಾಜಣ್ಣ ಕಾಂತರಾಜ್ ಮುರುಗೇಶಣ್ಣ ಪೊಲೀಸ ರಘು ಹಾಗೂ ಯೋಗ ಸಮಿತಿ ಹಾಗೂ ದೇವಾಲಯ ಸಮಿತಿಯ ಸದಸ್ಯರುಗಳು ಇದ್ದರು.