ತಾಯಿ ಸ್ವರೂಪಿಯಾದ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಉಮೇಶ ಕಾರಜೋಳ .   

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 03 : ನಿಸರ್ಗ ಸಹ ತಾಯಿ ಸ್ವರೂಪಿ. ಹೀಗಾಗಿ ಪರಿಸರ ರಕ್ಷಣೆ ಆದ್ಯ ಕರ್ತವ್ಯ, ನಿತ್ಯದ ಕಾಯಕವಾಗಬೇಕು ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಉಮೇಶ ಕಾರಜೋಳ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಕಾಶವಾಣಿಯಲ್ಲಿ ಪ್ರಸಾರವಾಗುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ  ಪರಿಸರ ಕಾಳಜಿ ಕುರಿತು ಹೇಳಿದ್ದು, ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ವಾರ್ಡ್ ನಂ. 31 ರ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ ಕಾಲೋನಿ ಕ್ಷೇಮಾಬಿವೃದ್ಧಿ ಸಂಘದವತಿಯಿಂದ ಸಸಿಗಳನ್ನು ನೆಡುವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಹೆತ್ತ ತಾಯಿ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ, ಹೆತ್ತ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ನಮಗೆ ಉಸಿರು ನೀಡಿರುವ ಪರಿಸರವನ್ನು ರಕ್ಷಿಸುವ ಪವಿತ್ರ ಕಾಯಕ ಕೈಗೊಳ್ಳುವಂತೆ ಪ್ರಧಾನಿ ಮೋದಿಜಿ ಕರೆ ನೀಡಿದ್ದಾರೆ. ನಿಸರ್ಗ ಸಹ ತಾಯಿ ಸ್ವರೂಪಿ. ಹೀಗಾಗಿ ಪರಿಸರ ರಕ್ಷಣೆ ಆದ್ಯ ಕರ್ತವ್ಯ, ನಿತ್ಯದ ಕಾಯಕವಾಗಬೇಕು ಎಂದರು. ಕೇವಲ ಸಸಿ ನೆಟ್ಟರೆ ಸಾಲದು, ಅವುಗಳನ್ನು ಪೋಷಿಸುವುದು ಅಷ್ಟೇ ಮುಖ್ಯ, ಮಾನವನ ಪರಿಸರ ವಿರೋಧಿ ಚಟುವಟಿಕೆಗಳಿಂದ ಪರಿಸರ ಹಾನಿಯಾಗುತ್ತಿದೆ, ಇದರಿಂದ ನಿರಫರಾಧಿ ಉಳಿದ ಜೀವಿಗಳಿಗೂ ತೊಂದರೆಯಾಗುತ್ತಿದೆ. ಸಸಿ ನೆಡುವುದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಗಿಡಗಳಿಗೆ ನೀರುಣಿಸುವುದು, ಎಲೆಗಳಿಗೆ ರೋಗ ತಾಕಿದೆಯೇ ಎಂದು ಪರೀಕ್ಷಿಸುವುದು, ಇತರರಿಗೂ ಸಸಿ ನೆಡಿ ಎಂದು ಹೇಳುವುದು ಸಹ ಪರಿಸರ ರಕ್ಷಣೆ ಭಾಗವೇ ಎಂದರು.

ಈ ಸಂದರ್ಭದಲ್ಲಿ ಡಾ.ರವಿಪ್ರಕಾಶ್ ರೆಡ್ಡಿ, ರಮೇಶ್, ಪಾಂಡುರಂಗ ರೆಡ್ಡಿ, ಬಿ. ಎಂ ಪಾಲಯ್ಯ, ತಿಮ್ಮೇಶ. ಆದರ್ಶ. ತಿರುಮಲಾಕ್ಷಿ,  ಅನಿತಾ, ಸುಧಾ, ಸುಮಿತ್ರಮ್ಮ ಹಾಗೂ ಕಾಲೋನಿಯ ನಿವಾಸಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *