ಚಿತ್ರದುರ್ಗ | ಕೇಂದ್ರ ಗೃಹ ಸಚಿವ ಅಮಿತ್‍ಷಾ  ಹೇಳಿಕೆ ವಿರುದ್ದ ಸಾಮಾಜಿಕ ಸಂಘರ್ಷ ಸಮಿತಿಯಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 21: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಹೆಸರು ಜಪಿಸುವ ಬದಲು ದೇವರ ಸ್ಮರಣೆ ಮಾಡಿದರೆ ಸ್ವರ್ಗ
ಪ್ರಾಪ್ತಿಯಾಗುತ್ತದೆಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‍ಷಾ ವಿರುದ್ದ ಸಾಮಾಜಿಕ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ
ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಸಿ.ಕೆ.ಮಹೇಶ್ ದೇಶದ ಐಕ್ಯತೆಗೆ ಪೆಟ್ಟು ಕೊಡುವಂತ ಮಾತುಗಳನ್ನಾಡಿರುವ
ಅಮಿತ್‍ಷಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು, ಮಹಿಳೆಯರನ್ನು ದಿಕ್ಕುತಪ್ಪಿಸಲು ಹೊರಟಂತಿದೆ.
ಬ್ರಾಹ್ಮಣ್ಯ ಆಳ್ವಿಕೆ ಆರಂಭದಲ್ಲಿ ನಮ್ಮ ದೇಶ ವಿಭಜನೆಯಾಯಿತು. ಈಗ ಮತ್ತೊಮ್ಮೆ ಅಂತಹ ಆಳ್ವಿಕೆ ಶುರುವಾಗುವ
ವಾತಾವರಣವಿದೆ. ಅಖಂಡ ಭಾರತ ಉಳಿಯಬೇಕಾಗಿರುವುದರಿಂದ ಎಲ್ಲರೂ ಒಗ್ಗೂಡಬೇಕಿದೆ ಎಂದರು.

ಅಮಿತ್‍ಷಾ ಹೇಳಿಕೆ ದೇವರು, ಧರ್ಮದ ಹೆಸರಿನಲ್ಲಿ ಹೊಸ ಚಿಂತನೆ, ಚಳುವಳಿಗೆ ಬುನಾದಿ ತೋಡಿದಂತೆ ಕಾಣುತ್ತಿದೆ. ಕಾಂಗ್ರೆಸ್
ಅಂಬೇಡ್ಕರ್‍ರವರನ್ನು ಚುನಾವಣೆಯಲ್ಲಿ ಸೋಲಿಸಿತು ಎಂದು ಕೋಮುವಾದಿ ಬಿಜೆಪಿ. ಅಪ ಪ್ರಚಾರದಲ್ಲಿ ತೊಡಗಿರುವುದರ ವಿರುದ್ದ
ದಲಿತರು ಜಾಗೃತಿಗೊಳ್ಳಬೇಕಿದೆ. ಬ್ರಾಹ್ಮಣ್ಯ ಸಿದ್ದಾಂತದ ವಿರುದ್ದ ನಮ್ಮ ಹೋರಾಟವಿರಬೇಕೆಂದು ಹೇಳಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಅಮಿತ್‍ಷಾ ರಾಜಿನಾಮೆಗೆ
ಒತ್ತಾಯಿಸಿದರು. ಸಾಮಾಜಿಕ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಡಿ.ದುರುಗೇಶ್,
ಎಂ.ರಾಮಾಂಜನೇಯ, ಆರ್.ರಾಮಲಿಂಗಪ್ಪ, ಕೆ.ಕೃಷ್ಣಮೂರ್ತಿಡಿ.ಯಲ್ಲಪ್ಪ, ಹೊಳೆಯಪ್ಪ, ಹನುಮಂತಪ್ಪ ದುರ್ಗ,
ನ್ಯಾಯವಾದಿಗಳಾದ ಡಿ.ವೆಂಕಟೇಶ್, ಎಲ್.ಸುರೇಶ್, ದಲಿತ ಮುಖಂಡ ಬಿ.ರಾಜಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ
ಭಾಗವಹಿಸಿದ್ದರು.

Leave a Reply

Your email address will not be published. Required fields are marked *