ಚಿತ್ರದುರ್ಗ,ಅ.22: ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರೈಸಿ, ಜಿಲ್ಲೆಗೆ ನೀರು ಹಾಯಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯು ತುಂಬಾ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡು, ಬರನಾಡು ಎಂದೇ ಖ್ಯಾತಿಪಡೆದಿದ್ದು,
ಸಮಯಕ್ಕೆ ಸರಿಯಾಗಿ ಮಳೆ ಇರುವುದಿಲ್ಲ. ಮಳೆ ಬಂದು ಅತಿವೃಷ್ಟಿಯಾಗಿ ಬೆಳೆ ನಷ್ಟವಾಗಿ ರೈತರು ಕಂಗಾಲಾಗುತ್ತಿದ್ದಾರೆ. ಬೇಸಿಗೆ ಬೆಳೆಗೆ
ನೀರು ಇಲ್ಲ. ವರ್ಷಕ್ಕೆ ಒಂದೇ ಬೆಳೆ ತೆಗೆಯಲು ರೈತರು ಮಳೆಯನ್ನೆ ಆಶ್ರಯ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭದ್ರ
ಮೇಲ್ದಂಡೆ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಗೆ ವರದಾನವಾಗಿದೆ. ಆದರೆ ನೀರನ್ನು ತರಲು ಸುಮಾರು 10-15 ವರ್ಷಗಳಿಂದ ಬರೀ
ಚಾನಲ್ ಮಾಡುತ್ತಾ ಬರಲಾಗಿದೆ. ಇಲ್ಲಿಯವರೆಗೂ ನೀರು ಹರಿಸಲು ಜಿಲ್ಲೆಯ ಯಾವ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ
ಸಚಿವರು, ಸಂಸದರು ಸೇರಿದಂತೆ ಯಾವುದೇ ರಾಜಕೀಯ ನಾಯಕರಾಗಲೀ ಧ್ವನಿ ಎತ್ತದೇ ಇರುವುದು ನೋಡಿದರೆ ಚಿತ್ರದುರ್ಗ ಜಿಲ್ಲೆಯ
ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆರೋಪಿಸಿದರು.
ರಾಜಕೀಯ ನಾಯಕರು ಕೇವಲ ಚುನಾವಣೆ ಬಂದಾಗ ಜಿಲ್ಲೆಯ ಜನರಿಗೆ, ರೈತರಿಗೆ ರೈತರ ಪರ ನಾವಿದ್ದೇವೆ ಎಂದು ಆಶ್ವಾಸನೆಗಳನ್ನು
ಕೊಟ್ಟು ಗೆದ್ದು ಕುರ್ಚಿಗಾಗಿ ಪೈಪೋಟಿ ನಡೆಸುವುದೇ ಒಂದು ವಿಶೇಷವೆನಿಸಿದೆ. ಅಷ್ಟು ಬಿಟ್ಟರೆ ಬೇರೆಯಾವುದೇ
ಪ್ರಯೋಜನವಾಗಿರುವುದಿಲ್ಲ. ಗೆದ್ದ ಮೇಲೆ ಶಾಸಕರ, ಮಂತ್ರಿಗಳ ಮನೆಗೆ ರೈತರು ಅಡ್ಡಾಡುವುದೇ ಒಂದು ಕೆಲಸವಾಗಿದೆ. ಆದ್ದರಿಂದ
ಜಿಲ್ಲೆಯ ಎಲ್ಲಾ ಶಾಸಕರು. ಸಂಸದರು. ಮಂತ್ರಿಗಳು ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಇನ್ನು ಹೆಚ್ಚಿನ
ಅನುದಾನವನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆ ಮಾಡಿಸಿ, 2024 ರ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ, ಭದಾ
ನೀರು ಚಿತ್ರದುರ್ಗ ಜಿಲ್ಲೆಗೆ ಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್, ರಾಜ್ಯ ಸಂಘಟನಾ
ಕಾರ್ಯದರ್ಶಿ ಆಶೋಕ್, ರಾಜ್ಯ ಮಹಿಳಾ ಅಧ್ಯಕ್ಷರಾದ ಆಶಾ, ರೈತ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಮಹಿಳಾ ರೈತ ಘಟಕದ
ಅಧ್ಯಕ್ಷರಾದ ಆಶ್ವಿನಿ, ಜಿಲ್ಲಾಧ್ಯಕ್ಷರಾದ ರವಿಕುಮಾರ್ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕ, ಉಪಾಧ್ಯಕ್ಷರಾದ ಲಕ್ಷ್ಮೀ, ಯುವ
ಘಟಕ ಮಹಿಳಾ ರಾಜ್ಯಾಧ್ಯಕ್ಷರಾದ ಗೀತಾಂಜಲಿ, ಲಿಂಗಾವರಹಟ್ಟಿ ಲಕ್ಷ್ಮೀಕಾಂತ, ಸೈಯದ್ ಆಲಿ, ಓಬಳೇಶ್, ಓಬಣ್ಣ, ಸತೀಶ್,
ಸೇರಿದಂತೆ ಇತರರು ಭಾಗವಹಿಸಿದ್ದರು.