ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 01 : ಭ್ರಷ್ಟಚಾರ, ದುರ್ನಡತೆ ಮತ್ತು ಸುಲಿಗೆ ಮುಂತಾದ ಕ್ರಿಮಿನಲ್ ಕೇಸ್‍ನಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ರವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರಿಯಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಲು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಜನತಾದಳ (ಜಾತ್ಯಾತೀತ) ಒತ್ತಾಯಿಸಿದೆ.
ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಜೆಡಿಎಸ್‍ನ
ಮುಖಂಡರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದರು. ದಾರಿಯುದ್ದಕ್ಕೂ ಭ್ರಷ್ಠ
ಚಂದ್ರಶೇಖರರವರ ವಿರುದ್ದವಾಗಿ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ.ಎಂ ಎಂ.ಚಂದ್ರಶೇಖರ್‍ರವರು ಕರ್ನಾಟಕ ರಾಜ್ಯದಲ್ಲಿ ಸೇವೆ
ಸಲ್ಲಿಸುತ್ತಿರುವ ಭಾರತೀಯ ಪೊಲೀಸ್ ಸೇವೆಗೆ ಸೇರಿರುವ ಪೊಲೀಸ್ ಅಧಿಕಾರಿದ್ದು, ಮೂಲತಃ ಹಿಮಾಚಲ ಪ್ರದೇಶ ಐ.ಪಿ.ಎಸ್ ಕೇಡರ್‍ಗೆ
ಸೇರಿದವರಾಗಿದ್ದು, ತದನಂತರ ತನ್ನ ಪತ್ನಿಯ ಅನಾರೋಗ್ಯ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ರಾಜಕೀಯ ಪ್ರಭಾವವನ್ನು ಬೀರಿ
ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು ಕರ್ನಾಟಕ ಐ.ಪಿ.ಎಸ್ ಕೇಡರ್‍ನಲ್ಲಿ ವಿಲೀನಗೊಂಡಿದರೆ, ಪ್ರಮುಖ ಆಯಾಕಟ್ಟಿನ ಮತ್ತು
ಆರ್ಥಿಕವಾಗಿ, ಸದೃಢಗೊಳ್ಳುವಂತಹ ಭ್ರಷ್ಟ ಅಧಿಕಾರಿಯಾಗಿ ಬೆಂಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕಮೀಷನ್‍ರಾಗಿ
ವಲಯದ ಐ.ಜಿ.ಪಿ ಆಗಿ ಕರ್ತವ್ಯ ನಿರ್ವಹಿಸಿ ಭೂಗಳ್ಳರಿಗೆ, ವ್ಯಾಪಾರಸ್ಥರಿಗೆ, ಸಮಾಜಘಾತುಕರಾಗಿ, ಭ್ರಷ್ಟರ ಜೊತೆಗೆ ಭೂಗತ ಪಾತಕರ
ಜೊತೆಗೆ ಶಾಮೀಲಾಗಿ ನೂರಾರು ಪ್ರಕರಣಗಳನ್ನು ತನಿಖೆ ಮಾಡದೆ ಭ್ರಷ್ಟ ಅಧಿಕಾರಿಯಾಗಿರುತ್ತಾರೆ. ಎಷ್ಟೋ ಉದ್ಯಮಿಗಳ ಮೇಲೆ ಸುಳ್ಳು
ಪ್ರಕರಣಗಳನ್ನು ದಾಖಲಿಸಿ ಸಾಮಾನ್ಯ ನಾಗರೀಕರನ್ನು ಎದರಿಸಿ, ಬೆದರಿಸಿದ್ದಾರೆ ಎಂದು ದೂರಿದ್ದಾರೆ.
ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ ವಿಜಯ ಟಾಟಾ, ಇವರ ವಿರುದ್ಧ ಸುಮಾರು 500 ಪ್ರಕರಣಗಳು
ದಾಖಲಾಗಿದ್ದು, ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಅಧಿಕಾರಿಗಳ ನಿರ್ದೇಶನ ನೀಡಿರುವುದಾಗಿ ಸದರಿಯವರ ವಿರುದ್ಧ 2500
ಮೊಕದ್ದಮೆಗಳು ಇದ್ದರೂ ಸಹ ಯಾವುದೇ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಅನೇಕ ಪ್ರಕರಣಗಳಲ್ಲಿ ಅನೇಕ ಪೊಲೀಸ್
ಅಧಿಕಾರಿಗಳನ್ನು ತನ್ನ ಅಧಿಕಾರ ದರ್ಪದಿಂದ ಡಿವೈಎಸ್‍ಪಿ, ಪಿ.ಎಸ್.ಐ ಗಳ ಮೂಲಕ ಸುಳ್ಳು ಪ್ರಕರಣಗಳನ್ನು ದಾಖಲಿಸಿ.
ಲಪಾಟಿಯಿಸಿದ್ದಾರೆ. ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರು ಬೆಂಗಳೂರು
ನಗರದಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ ರಾಜ್ಯಪಾಲರು ಲೋಕಾಯುಕ್ತ ಕಛೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ
ಮಾಹಿತಿ ಮತ್ತು ವಿಚಾರಣೆಯನ್ನು ಬಯಸಿದ್ದಾರೆ. ಈ ಸಂಗತಿ ಬಯಲಾಗಿದ್ದು, ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದ ಹಿನ್ನಲೆಯನ್ನು
ಗಮನದಲ್ಲಿಟ್ಟುಕೊಂಡು ಈ ಮಾಹಿತಿ ರಾಜ್ಯ ಭವನದಿಂದ ಸೋರಿಕೆಯಾಗಿದೆ ಎನ್ನುವ ಆರೋಪವನ್ನು ಏರಿ ರಾಜ್ಯಪಾಲರ ಕಛೇರಿ ಮೇಲೆ
ತನಿಖೆ ನಡೆಸುವ ದರ್ಪ ಮೆರೆದಿದ್ದ, ಎಂ.ಚಂದ್ರಶೇಖರ್, ಲೋಕಾಯುಕ್ತ ಎ.ಡಿ.ಜಿ.ಪಿ ವಿರುದ್ಧ ಮಾತನಾಡಿದ್ದರು. ಭ್ರಷ್ಟಚಾರ ಮತ್ತು ಲಂಚ
ನಿರ್ಮೂಲನೆ ಬಗ್ಗೆ ತನಿಖೆ ನಡೆಸುವ ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲ ಸುಲಿಗೆಕೋರ ಮತ್ತು ಭ್ರಷ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ
ಎಂದು ಆರೋಪ ಮಾಡಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿಗಳಾದ ಡಿ.ಯಶೋಧರ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ರವರ ಆರೋಪಗಳನ್ನು
ಗಮನದಲ್ಲಿಟ್ಟುಕೊಂಡು ಎಂ.ಚಂದ್ರಶೇಖರರವರು ಎಸ್.ಎ.ಟಿ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ
ಅಸಧ್ಯ ಮತ್ತು ಅವಾಚ್ಯ ಶಬ್ದಗಳಾದ ಹಂದಿಗಳ ಜೊತೆ ಗುದ್ದಾಡಬೇಡಿ, ಏಕೆಂದರೆ ಹಂದಿಗಳಂತೆ ನೀವು ಕೊಳಕಾಗುತ್ತೀರಿ ಎಂಬ
ನುಡಿಗಳನ್ನು ಬಳಸಿದ್ದಾರೆ. ಎ.ಡಿ.ಜಿ.ಪಿ ಎಂ.ಚಂದ್ರಶೇಖರ್‍ರವರು ಸರ್ಕಾರದ ಕೆಲಸವನ್ನು ದುರುಪಯೋಗ ಪಡಿಸಿಕೊಂಡು ಉನ್ನತ
ಮಟ್ಟದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೋಕಾಯುಕ್ತ ಇಲಾಖೆಗೆ ಅವಮಾನ ಮಾಡಿರುವ ಭ್ರಷ್ಟ ಅಧಿಕಾರಿಯನ್ನು ಕೇಂದ್ರ
ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮಕೈಗೊಂಡು ಇವರನ್ನು ಭಾರತೀಯ ಸೇವೆಯನ್ನು ಅಮಾನತುಗೊಳಿಸಿ ಇವರ ವಿರುದ್ಧ
ತನಿಖೆ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ,ಜಿಲ್ಲಾ ಉಪಾಧ್ಯಕ್ಷರಾದ ವೀರಣ್ಣ, ತಾಲ್ಲೂಕು ಅಧ್ಯಕ್ಷರಾದ ಸಣ್ಣ ತಿಮ್ಮಣ್ಣ ಯುವ
ಘಟಕದ ಜಿಲ್ಲಾಧ್ಯಕ್ಷರಾದ ಪ್ರತಾಪ್ ಜೋಗಿ ಕಾರ್ಯಾಧ್ಯಕ್ಷರಾದ ಜಿ.ಬಿ.ಶೇಖರ್ ನಗರಸಭೆ ಸದಸ್ಯರಾದ ದೀಪು, ನಸರುಲ್ಲಾ ವಿದ್ಯಾರ್ಥಿ
ಘಟಕ ಜಿಲ್ಲಾಧ್ಯಕ್ಷ ಅಬು ವೀರಭದ್ರಣ್ಣ ಕರಿಬಸಪ್ಪ ಮಂಜಣ್ಣ ರುದ್ರಣ್ಣ ಸೇರಿದಂತೆ ಜೆಡಿಎಸ್ ನ ಪದಾಧಿಕಾರಿಗಳು ಅಭಿಮಾನಿಗಳು
ಹಿತೈಷಿಗಳು ಪ್ರತಿಬಟೆಯಲ್ಲಿ ಭಾಗವಹಿಸಿದ್ದರು.