ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 27 : ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ರಂಗನಪಲೆಯಲ್ಲಿ ಹಿಂದೂ ಭೋವಿ ವಡ್ಡರ ದಲಿತ ಸಮುದಾಯದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯಭೋವಿ (ವಡ್ಡರ) ಮಹಾಸಭಾ (ರಿ)ದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಭೋವಿ ವಡ್ಡರ ಇವರ ಮಹಾಸಭಾದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಹೆಚ್. ಮತ್ತು ಮಹಿಳಾ ಜಿಲ್ಯಾಧ್ಯಕ್ಷರಾದ ಗೀತಾ
ಗೋವೀಂದರಾಜು ಇವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಮತ್ತು ಪುರುಷರ ಜಂಟಿ ಸಮಿತಿಗಳ ಅಧ್ಯಕ್ಷರುಗಳ ಸಾರಥ್ಯದಲ್ಲಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ರಂಗನಪಳ್ಳಿಯಲ್ಲಿ ಯುವತಿಯ ಮೇಲೆ ಆದ ಅತ್ಯಾಚಾರ ಮಾಡಿರುವ ಆರೋಪಿಗಳನ್ನು ಅವರನ್ನು
ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಂತಹ ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಬೇಕೆಂದು ಆಗ್ರಹಿಸಿ
ಕರ್ನಾಟಕ ಭೋವಿ ವಡ್ಡರ ಇವರ ಮಹಾಸಭಾದ ಜಂಟಿ ಸಮಿತಿಗಳ ಮೂಲಕ ಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರಿಗೆ
ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಮನವಿಗೆ ಸ್ಪಂಧಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ
ಎಚ್ಚರಿಸಿದ್ದಾರೆ.