ವಾಲ್ಮೀಕಿ ಸಮುದಾಯ ನಿಂದನೆ ವಿವಾದ: ಚಿತ್ರದುರ್ಗದಲ್ಲಿ ಪ್ರತಿಭಟನೆ.

ಚಿತ್ರದುರ್ಗ ಆ. 20 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನಾಯಕ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ್ ಕತ್ತಿಯವರನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಅವರ ಮೇಲೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ, ಡಿವೈಎಸ್‍ಪಿಯವರಿಗೆ ದೂರು ನೀಡಿದ ಚಿತ್ರದುರ್ಗ ನಾಯಕ ಸಮಾಜ ಸರ್ಕಾರವನ್ನು ಆಗ್ರಹಿಸಿದೆ. 


ಬೆಳಗಾವಿ ಬಿ.ಕೆ ಮಾಡೆಲ್ ಹೈಸ್ಕೂಲ್ ಮೈದಾನ ಡಿಸಿಸಿ ಬ್ಯಾಂಕಿನ ಚುನಾವಣಾ ಮತದಾನ ಪ್ರಕ್ರಿಯೆ ನಡೆಯು ತ್ತಿರುವ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿಯವರು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರನ್ನು ವಾಲ್ಮೀಕಿ ಸಮುದಾಯ ಕುರಿತು ” ಬ್ಯಾಡರ ಸೂಳೆ ಮಕ್ಕಳು” ಎಂಬ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ. 

ಇದರಿಂದ ರಾಜ್ಯಾದಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತೀವ್ರಘಾಸಿ ಆಗಿದೆ ಹಾಗೂ ಭಾವನೆಗಳಿಗೆ ಧಕ್ಕೆ ಆಗಿದೆ ಹಾಗೂ ತೀವ್ರ ಆಘಾತ ವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆ ಡುವ ಸಂಭವವಿದೆ ಇದರಿಂದ ಜಿಲ್ಲೆಯ ಬೇರೆ ಬೇರೆ ಸಮುದಾಯಗಳ ಮಧ್ಯ ತೀವ್ರ ಘರ್ಷಣೆ ಉಂಟಾಗುವ ಸಂಭವವಿದೆ. ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಮಾಡಿರುತ್ತಾನೆ. ಮೇಲು-ಕೀಳು ಭಾವನೆಗಳಿಗೆ ಚಾಲನೆ ನೀಡುವುದರ ಮೂಲಕ ಡಾ ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನವನ್ನು ಅವಮಾನಿಸಿದ್ದು ಅಲ್ಲದೇ ಈಗಾಗಲೇ ಈತನು ಸತತವಾಗಿ ಕೆಳ ಸಮುದಾ ಯಗಳ ಭಾವನೆಗಳಿಗೆ ಘಾಸಿ ಉಂಟುಮಾಡಿರುತ್ತಾರೆ ಎಂದು ದೂರಿದ್ದಾರೆ.


ಈಗ ಸಾಂಕೇತಿಕವಾಗಿ ನಾಯಕ ಸಮುದಾಯ ಪ್ರತಿಭಟನೆಯನ್ನು ಮಾಡುತ್ತಿದೆ ಒಂದು ವಾರದಲ್ಲಿ ರಮೇಶ್ ರವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯವ್ಯಾಪ್ತಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಯಾವುದೇ ಮೇಲ್ವರ್ಗದ ಜನತೆ ತಳ ವರ್ಗದ ಜನರನ್ನು ಜಾತಿ ಹಿಡಿದು ನಿಂದಿಸಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಇದನ್ನು ಉಪಯೋಗಿಸಿಕೊಂಡು ರಮೇಶ್ ಕತ್ತಿಯವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು. 
ರಮೇಶ ಕತ್ತಿಯವರು ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುತ್ತಾನೆ. ಈತನ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಮನವಿ ಮಾಡಲಾಯಿತು.


ಇದಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರಮೇಶ್ ಕತ್ತಿಯವರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು. ಇದೇ ಸಂದರ್ಭದಲ್ಲಿ ನಾಯಕ ಸಮುದಾಯದವರು ಡಿವೈಎಸ್‍ಪಿಯವರಿಗೆ ರಮೇಶ್ ಕತ್ತಿಯವರ ವಿರುದ್ದ ದೂರನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಚಿತ್ರದುರ್ಗ ನಾಯಕ ಸಮಾಜ(ರಿ.)ದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮುಖಂಡರುಗಳಾದ ಗೋಪಾಲಸ್ವಾಮಿ ನಾಯಕ್, ನಗರಸಭಾ ಸದಸ್ಯರಾದ ದೀಪು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಎಸ್.ಟಿ. ಸೆಲ್ ಅಧ್ಯಕ್ಷ ಮಂಜುನಾಥ್, ಅಂಜನಪ್ಪ, ತಿಪ್ಪೇಸ್ವಾಮಿ ಎಟಿಎಸ್, ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ತಿಮ್ಮರಾಜು, ಶೇಖರಪ್ಪ, ರಾಜಪ್ಪ ರಮೇಶ್, ಮಂಜಣ್ಣ, ಸಿದ್ದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 24

Leave a Reply

Your email address will not be published. Required fields are marked *