ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ 22 : ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕರ ಆಸ್ಪತ್ರೆ ನಿರ್ದೇಶಕ ಯುವರಾಜ್‍ರನ್ನ ಕೆಲಸದಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧಿಗ ಯುವಸೇನೆವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಮಾಧಿಗ ಯುವಸೇನೆ ವತಿಯಿಂದ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಓಬವ್ವ ವೃತ್ತದಿಂದ ಜಿಲ್ಲಾಧಿಕಾರಿ
ಕಚೇರಿವರೆಗೆ ಮೆರವಣಿಗೆ ಮೂಲಕ ಬಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿಯನ್ನು
ಸಲ್ಲಿಸಲಾಯಿತು.
ಚಿತ್ರದುರ್ಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕರ ಆಸ್ಪತ್ರೆ ನಿರ್ದೇಶಕರಾದ ಯುವರಾಜ್ ರವರನ್ನು ಡಾಕ್ಟರ್‍ಗಳ
ನೇಮಕಾತಿಯಲ್ಲಿ ಲಕ್ಷಾಂತರ ಅವ್ಯವಹಾರ ಮಾಡಿದ್ದಾರೆ ಮತ್ತು ನೇಮಕಾತಿಯನ್ನು ಸರಿಯಾಗಿ ಮಾಡಿರುವುದಿಲ್ಲ ಹಾಗೂ
ಅಭ್ಯರ್ಥಿಗಳಿಂದ ತಲಾ ಒಬ್ಬರಿಂದ ಲಕ್ಷಾಂತರ ರೂ.ಗಳನ್ನು ಲಂಚವನ್ನು ಪಡೆದು ಅವ್ಯವಹಾರವಾಗಿರುವ ಶಂಕೆಯಿದೆ ಹಾಗೂ
ಯಾವುದೇ ಕೆಲಸಕ್ಕೆ ಹಣ ಕೊಟ್ಟವರಿಗೆ ಕೆಲಸ ಮಾಡುವ ಪ್ರವೃತ್ತಿ ಇವರದ್ದು ಮತ್ತು ಇವರು ಬಿಜೆಪಿಯ ಏಜೆಂಟ್ ಆಗಿರುವುದರಿಂದ
ಇವರು ಬಿಜೆಪಿಯವರ ತಳಕ್ಕೆ ತಕ್ಕಂತೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಇವರು
ಭ್ರಷ್ಟನಾಗಿದ್ದು, ಇವರನ್ನು ಕೂಡಲೇ ಅಮಾನತು ಮಾಡಿ ಲೋಕಾಯುಕ್ತರಿಂದಾಗಲೀ ಅಥವಾ ಸಿಐಡಿ ಇಂದ ತನಿಖೆಯನ್ನು ನಡೆಸಿ
ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಲಾಯಿತು.
ನೇಮಕಾತಿ ಸಂದರ್ಭದಲ್ಲಿ ಯಾರು ನೇಮಕಾತಿ ಮಾಡಿಕೊಳ್ಳಬೇಕು ಯಾರು ನೇಮಕಾತಿ ಮಾಡಿಕೊಳ್ಳಬಾರದು ಸರ್ಕಾರದ
ಆದೇಶಗಳನ್ನು ಗಾಳಿಗೆ ತೂರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಬರೀ ಅವ್ಯವಹಾರ ಮಾಡಿರುತ್ತಾರೆ. ಆದ್ದರಿಂದ ಇವರನ್ನು
ಮಾಡಿರುವ ನೇಮಕಾತಿಯನ್ನು ರದ್ದುಪಡಿಸಿ ಹೊಸ ನೇಮಕಾತಿಯನ್ನು ಮಾಡಿ ಡಾಕ್ಟರ್‍ಗಳಿಗೆ ನ್ಯಾಯ ದೊರಕಿಸಿಕೊಡಬೇಕು ತನಿಖೆ
ಮುಗಿಯುವ ಇವನನ್ನು ಆಮಾನತಿನಲ್ಲಿ ಇರಿಸಬೇಕು. ಸಾರ್ವಜನಿಕವಾಗಿ ಇಂತಹ ಅಧಿಕಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು
ಬರುವುದರಿಂದ ಇವರು ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಅನುವು ಮಾಡಿಕೊಡದೆ ಕೂಡಲೇ ಇವರನ್ನು ಅಮಾನತು ಮಾಡಿ,
ತನಿಖೆ ಮಾಡಿ ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ರಾಜಣ್ಣ ವಹಿಸಿದ್ದರು. ಓಬಳಮ್ಮ, ತಿಪ್ಪೇಸ್ವಾಮಿ, ಸಂತೋಷ್, ಸಿದ್ದಪ್ಪ, ರುದ್ರಮುನಿ, ವೆಂಕಟೇಶ್,
ಶಿವಕುಮಾರ್, ನಾಗಬೂಷಣ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1