ಪುಷ್ಪ.. ಪುಷ್ಪ.. ಪುಷ್ಪ.. ತೆರೆ ಮೇಲೆ ಪುಷ್ಪರಾಜನ ಅಬ್ಬರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ದಿ ರೂಲ್ (Pushpa 2 The Rule) ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ದಿನವೇ ಸಿನಿಮಾ ಸೂಪರ್ ಹಿಟ್ ಎನ್ನುವ ಮಾತುಗಳು ಕೇಳಿ ಬರ್ತಿದೆ.

ಸುಮಾರು 3 ವರ್ಷಗಳಿಂದ ಪುಷ್ಪ ಬ್ಲಾಕ್ ಬಸ್ಟರ್ ಹಿಟ್ನ (Block Buster Hit) ಸೀಕ್ವೆಲ್ ಗಾಗಿ ದೇಶಾದ್ಯಂತ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ರು. ಪುಷ್ಪ 2 ಸಿನಿಮಾ ಇದೀಗ ತೆರೆಗೆ ಬಂದಿದ್ದು, ಪುಷ್ಪರಾಜ್ ಮ್ಯಾನರಿಸಂ ಮತ್ತು ಡೈಲಾಗ್‌ಗಳು ಮಾಸ್, ಕ್ಲಾಸ್ ಹಾಗೂ ಯೂತ್ ಎಲ್ಲರಿಗೂ ಇಷ್ಟವಾಗಿದೆ. ಮೊದಲ ದಿನ (First Day Collection) ಪುಷ್ಪ ಸಿನಿಮಾ ಗಳಿಸಿದ್ದೆಷ್ಟು?
ಪುಪ್ಪರಾಜ್ ಅಬ್ಬರ ಜೋರೋ ಜೋರು!
ಪುಷ್ಪ 2 ಸಿನಿಮಾದಲ್ಲಿ ನಾಯಕನಾಗಿ ಅಲ್ಲು ಅರ್ಜುನ್, ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ನಿರ್ದೇಶಕ ಸುಕುಮಾರ್ ಮೂರು ವರ್ಷಗಳ ಪರಿಶ್ರಮ ತೆರೆ ಮೇಲೆ ಕಾಣ್ತಿದೆ. ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು. ಪುಷ್ಪನ ಮಾಸ್ ಡೈಲಾಗ್ ಗಳಿಗೆ ಅಭಿಮಾನಿಗಳು ಶಿಳ್ಳೆ ಹೊಡೀತಿದ್ದಾರೆ. ಜೊತೆಗೆ ಮಸ್ತ್ ಆಕ್ಷನ್ ಸೀನ್ ಗಳು ಥಿಯೇಟರ್ ನನ್ನೇ ನಡುಗಿಸಿದೆ.
ಮುಂಗಡ ಬುಕ್ಕಿಂಗ್ನಲ್ಲೇ 125 ಕೋಟಿ!
ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ಪುಷ್ಪ 2 ದಿ ರೂಲ್ ಭಾರೀ ಲಾಭ ಗಳಿಸುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಭವಿಷ್ಯ ನುಡಿದಿದ್ರು. ಅಲ್ಲು ಅರ್ಜುನ್ ಅವರ ಆಕ್ಷನ್ ಡ್ರಾಮಾ ಮುಂಗಡ ಬುಕಿಂಗ್ ಮೂಲಕ ಪುಷ್ಪ 2 ಮೊದಲ ದಿನದಲ್ಲಿ ವಿಶ್ವದಾದ್ಯಂತ ರೂ.125 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ.
ಕೆಜಿಎಫ್, ಬಾಹುಬಲಿ, ಕಲ್ಕಿ ಹಿಂದಿಕ್ಕಿದ ಪುಷ್ಪ!
ಬ್ಲಾಕ್ಡ್ ಸೀಟ್ ಗಳು ಸೇರಿದಂತೆ ಪುಷ್ಪ 2 ವಿಶ್ವಾದ್ಯಂತ ಮೊದಲ ದಿನದ ಮುಂಗಡ ಬುಕಿಂಗ್ ಸಂಗ್ರಹ ರೂ.105.67 ಕೋಟಿ. ಇದರೊಂದಿಗೆ, ಕೆಜಿಎಫ್ 2, ಬಾಹುಬಲಿ 2 ಮತ್ತು ಕಲ್ಕಿ 2898 AD ಅನ್ನು ಹಿಂದಿಕ್ಕಿ ಬುಕ್ ಮೈ ಶೋನಲ್ಲಿ 1 ಮಿಲಿಯನ್ ಟಿಕೆಟ್‌ಗಳನ್ನು ಸೇಲ್ ಮಾಡಿದ ಚಿತ್ರ ಎಂಬ ಮತ್ತೊಂದು ದಾಖಲೆಯನ್ನು ಪುಷ್ಪ 2 ಸೃಷ್ಟಿಸಿದೆ. ಮೊದಲ ದಿನ, ಭಾರತದಲ್ಲಿ ಪುಷ್ಪ 2 ಗಾಗಿ ಸುಮಾರು 31,76,479 ಟಿಕೆಟ್‌ಗಳು ಮಾರಾಟವಾಗಿವೆ.
ಮೊದಲ ದಿನವೇ ಭರ್ಜರಿ ಕಲೆಕ್ಷನ್
ಪುಷ್ಪ 2 ಬುಧವಾರ ರಾತ್ರಿ 9:30ಕ್ಕೆ ಪ್ರೀಮಿಯರ್ ಆಗಿದೆ. ಪುಷ್ಪ 2 ದಿ ರೂಲ್ ಗುರುವಾರ (ಡಿಸೆಂಬರ್ 5) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎಲ್ಲಾ ಭಾಷೆಗಳಲ್ಲಿ ಮೊದಲ ದಿನ ಭಾರತದಲ್ಲಿ ನಿವ್ವಳ ಕಲೆಕ್ಷನ್ 41.54 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಮೆರಿಕಾದಲ್ಲಿ, ಪುಷ್ಪಾ 2 ಪ್ರೀಮಿಯರ್ ಪ್ರದರ್ಶನಗಳೊಂದಿಗೆ $ 3.2 ಮಿಲಿಯನ್ (ರೂ. 29 ಕೋಟಿ 65 ಲಕ್ಷ 90 ಸಾವಿರ) ಗಳಿಸಿತು.
250 ಕೋಟಿಗೂ ಹೆಚ್ಚು ಕಲೆಕ್ಷನ್
ಮುಂಗಡ ಬುಕಿಂಗ್, ಆಫ್ ಲೈನ್ ಟಿಕೆಟ್‌ಗಳ ಕಲೆಕ್ಷನ್ ಎಲ್ಲಾ ಸೇರಿ ಪುಷ್ಪ 2 ಚಿತ್ರ ಮೊದಲ ದಿನವೇ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. RRR ಮೊದಲ ದಿನವೇ 223 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಓಪನಿಂಗ್ ದಾಖಲೆ ನಿರ್ಮಿಸಿದೆ.
ಬುಕ್ ಮೈ ಶೋ ಸಿನಿಮಾಸ್ ಸಿಒಒ ಆಶಿಶ್ ಸಕ್ಸೇನಾ ಮಾತನಾಡಿ, “ಪುಷ್ಪ 2: ದಿ ರೂಲ್ ಅಧಿಕೃತವಾಗಿ ಇತಿಹಾಸವನ್ನು ಮರುಬರೆದಿದೆ. ಇದು ಮುಂಗಡ ಮಾರಾಟದಲ್ಲಿ 3 ಮಿಲಿಯನ್ ಟಿಕೆಟ್‌ಗಳನ್ನು ದಾಟಿದೆ.