ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 6: ಬದಲಾದ ಪಿಯು ಪ್ರಶ್ನೆ ಪತ್ರಿಕೆ, ಪರಿಣಾಮಕಾರಿ ಬೋಧನೆ,ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ,ಪ್ರಶ್ನೆ ಪತ್ರಿಕೆ ತಯಾರಿಕೆ,ನೀಲಿನಕ್ಷೆ ಮತ್ತು ಫಲಿತಾಂಶ ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಈ ಕಾರ್ಯಗಾರಗಳು ಹೆಚ್ಚು
ಸಹಕಾರಿಯಾಗಿವೆ ಎಂದು ಚಿತ್ರದುರ್ಗ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಆರ್.ಪುಟ್ಟಸ್ವಾಮಿ ತಿಳಿಸಿದರು.
ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ ಉಪನ್ಯಾಸಕರ
ವೇದಿಕೆಯ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಇಲಾಖೆಯು ಕಳೆದ
ವರ್ಷ ಹೊಸ ಪ್ರಶ್ನೆ ಪತ್ರಿಕೆ ಮಾದರಿಯನ್ನು ಪರಿಚಯಿಸಿ ವಿದ್ಯಾರ್ಥಿಗಳು 100 ಅಂಕಗಳ ಬದಲಿಗೆ 80 ಅಂಕಗಳಿಗೆ ಮಾತ್ರ ಪರೀಕ್ಷೆ
ಬರೆಯಲು ಅನುವು ಮಾಡಿಕೊಟ್ಟಿದೆ. ಅಸೈನ್ಮೆಂಟ್‍ಗೆ ಹತ್ತು ಅಂಕಗಳು ಹಾಗೂ ಅರ್ಧವಾರ್ಷಿಕ, ಕಿರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ
ಅಂಕಗಳನ್ವಯ ಹತ್ತು ಅಂಕಗಳನ್ನು ನಿಗಧಿಗೊಳಿಸಿ ಒಟ್ಟು ಇಪ್ಪತ್ತು ಅಂಕಗಳನ್ನು ಅಂತರಿಕ ಅಂಕಗಳನ್ನಾಗಿಸಿದೆ ಎಂದ ಅವರು
ಕಾರ್ಯಾಗಾರಗಳಲ್ಲಿ ಉಪನ್ಯಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ಆಯಾ ಕಾಲೇಜಿನ ಆಡಳಿತ ಮಂಡಳಿ ಮತ್ತು
ಪ್ರಾಂಶುಪಾಲರುಗಳು ಕ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ಜರುಗುವ ಕಾರ್ಯಗಾರಗಳಲ್ಲಿ ಭಾಗವಹಿಸದ ಕಾಲೇಜಿನ
ಪ್ರಾಂಶುಪಾಲರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ. ಆರ್. ಮಲ್ಲೇಶ್ ಮಾತನಾಡುತ್ತಾ ಪಿಯು
ಫಲಿಶಾಂಶ ಸುಧಾರಣೆಯಲ್ಲಿ ವಿಷಯವಾರು ವೇದಿಕೆಗಳು ಪ್ರಯೋಗಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕು ಎಂದು
ತಿಳಿಸಿ ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯತ್ವ ಪಡೆಯಲು ಇದೇ ನವೆಂಬರ್ 7ನೇ
ತಾರೀಖು ಕೊನೆಯ ದಿನವಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು
ಅನ್‍ಲೈನ್ ಮೂಲಕ ಸದಸ್ಯತ್ವ ಪಡೆಯುವ ಮೂಲಕ ಸಂಘಕ್ಕೆ ಶಕ್ತಿ ತುಂಬಲು ಈ ಮೂಲಕ ಕೋರಿದೆ. ಮುಂದಿನ ದಿನಗಳಲ್ಲಿ ಜರುಗುವ
ಉಪನ್ಯಾಸಕರ ಚುನಾವಣೆಗೆ ಮತದಾನ ಮಾಡಲು ಸದಸ್ಯತ್ವ ಕಡ್ಡಾಯಗೊಳಿಸಿದೆ ಎಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಎಸ್.ದೇವೇಂದ್ರಪ್ಪ ಮಾತಾನಾಡಿ ಪ್ರತಿ ಉಪನ್ಯಾಸಕರು ಶಿಸ್ತು, ಸಮಯ ಪ್ರಜ್ಞೆ ಹಾಗೂ
ಡ್ರಸ್‍ಸೆನ್ಸ್‍ನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿ ಉಪನ್ಯಾಸಕರಾಗಲು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಎಂ.ಕೆ
ವಹಿಸಿದ್ದರು. ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಅನುಪ್ ಥಾಮಸ್ ಎಸ್ ಡಿಬಿ, ಉಪನ್ಯಾಸಕರಾದ
ದಿವಾಕರ್,ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಬೆಂಗಳೂರಿನ ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲರು ಹಾಗೂ ಸಂಪನ್ಮೂಲವ್ಯಕ್ತಿ ಮಹಾಬಲೇಶ್ವರ ತುಂಗಾ ರವರು ಉಪನ್ಯಾಸ ನೀಡಿದರು.
ಡಾನ್ ಬಾಸ್ಕೋ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಾರ್ಥನಾ ಗೀತೆಗೆ ಭರತನಾಟ್ಯ ಮಾಡಿದರು. ಉಪನ್ಯಾಸಕಿ ಶ್ರೀಮತಿ
ದೀಪಿಕಾ ಎನ್.ಜೆ ಸ್ವಾಗತಿಸಿದರು, ಹಿರಿಯ ಉಪನ್ಯಾಸಕರಾದ ಮಲ್ಲಿಕಾರ್ಜುನ ವಂದಿಸಿದರು, ಉಪನ್ಯಾಸಕಿ ಶ್ರೀಮತಿ ಮಹಾದೇವಿ
ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಾಣಿಜ್ಯ ಶಾಸ್ರದ ಉಪನ್ಯಾಸಕರು
ಭಾಗವಹಿಸಿದರು.