ಭೀಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಇ-ಸ್ವತ್ತು ಹಾಗೂ ಖಾತೆ ಬದಲಾವಣೆ : ಆರ್.ರಮೇಶ್ ಆರೋಪ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 25 : ಭೀಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಇ-ಸ್ವತ್ತು ಹಾಗೂ ಖಾತೆಯನ್ನು ಬದಲಾವಣೆ ಮಾಡಿಕೊಡುವುದರ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂ.ಗಳ ಮೋಸವನ್ನು ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭೀಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಅಧೀನಕ್ಕೆ ಒಳಪಟ್ಟು ಸೈಟುಗಳು ಹಾಗೂ ಮೈನ್ಸ್ ಅಂಡ್ ಮಿನರಲ್ಸ್ ಕಂಪನಿಗೆ ಅಕ್ರಮವಾಗಿ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ. ಇದ್ದಲ್ಲದೆ ಗ್ರಾಮ ಪಂಚಾಯಿತಿಗೆ ಸೇರಿದ ಸಿ.ಎ .ನಿವೇಶನವನ್ನು ಅಕ್ರಮವಾಗಿ ಬಸವರಾಜಪ್ಪ ಎಂಬುವವರ ಹೆಸರಿಗೆ ಇ-ಸ್ವತ್ತು ಖಾತೆಯನ್ನು ಮಾಡಿ ಕೊಟ್ಟಿದ್ದಾರೆ. ಭೀಮಸಮುದ್ರದಲ್ಲಿ ಸಂಘದ ಮಹಿಳೆಯರ ಹೊಲವನ್ನು ಖರೀದಿ ಮಾಡಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿ ಅದರಲ್ಲಿ ಪಂಚಾಯಿತಿಗೆ 4 ನಿವೇಶನಗಳನ್ನು ಬಿಟ್ಟಿದ್ದಾರೆ ಇದನ್ನು ಸಹಾ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿ ಮಾಡಿ ಇ-ಸ್ವತ್ತುಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ತಾ.ಪಂ. ಮತ್ತು ಜಿ.ಪಂ. ಅಧಿಕಾರಿಗಳಿಗೆ ದೂರು ನೀಡಿದರು ಸಹಾ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನಗಳಲ್ಲಿ ಕೆಲವನ್ನು ಪಂಚಾಯಿತಿಯ ಅಧಿಕಾರಿಯೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದ್ದಲ್ಲದೆ ಸುಮಾರು  59 ಎಕರೆ ಭೂಮಿಯನ್ನು ಕಡಿಮೆ ವೆಚ್ಚದಲ್ಲಿ ಮಿನರಲ್ ಎಂಟರ್ ಪ್ರೈಸಸ್‌ಗೆ ನೀಡಲಾಗಿದೆ ಇದರಿಂದ ಸರ್ಕಾರಕ್ಕೆ ಬರುವ ಆದಾಯಕ್ಕ ಖೋತವಾಗಿದೆ. ಇದಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೆಲಸಕ್ಕೆ ಗೈರಾದ ಸಮಯದಲ್ಲಿ  ಸಭೆಯನ್ನು ನಡೆಸಿದ್ದಾರೆ. ಆದರೆ ಹಾಜರಾತಿ ಪುಸ್ತಕದಲ್ಲಿ ಪಿಡಿಓರವರು ಅಂದಿನ ದಿನದಂದು ಸಿಎಲ್ ಹಾಕಿದ್ದಾರೆ,ಎಂದು ಪಂಚಾಯಿತಿಯ ಹಾಜರಿ ಪುಸ್ತಕದಲ್ಲಿ ನಮೂದಾಗಿದೆ ಇದರಿಂದ ಇದನ್ನು ಬೇಕು ಎಂತಲೆ ದುರುದ್ದೇಶದಿಂದ ಮಾಡಿದ್ದಾರೆ ಕೋಟ್ಯಾಂತರ ರೂ ಬೆಲೆ ಬಾಳುವ ಪಂಚಾಯತಿಯ ಆಸ್ತಿಯನ್ನು ಕಡಿಮೆ ದರಕ್ಕೆ ನೀಡಿದ್ದಾರೆ ಇದು ಅಕ್ರಮವಾಗಿ ನಡೆದಿದೆ ಎಂದು ರಮೇಶ್ ಆರೋಪಿಸಿದ್ದು ಇದರ ಬಗೆಗೆ ತನಿಖೆಯನ್ನು ನಡೆಸಬೇಕಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಹಾಗೂ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಗೋಷ್ಟಿಯಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಉಮೇಶ್, ಸದಸ್ಯರಾದ ಧರ್ಮೇಂದ್ರ ನಾಯ್ಕ್ ಹಾಜರಿದ್ದರು.

Leave a Reply

Your email address will not be published. Required fields are marked *