ನವರಾತ್ರಿಗೆ ‘ಭೈರಾದೇವಿ’ ರಿಲೀಸ್​​: ಅಘೋರಿಯಾದ ರಾಧಿಕಾ ಕುಮಾರಸ್ವಾಮಿ.

‘ಸ್ವೀಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಿರುವ ರಾಧಿಕಾ ಕುಮಾರಸ್ವಾಮಿ ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿದ್ದಾರೆ. ಈಗಾಗಲೇ ಶಮಿಕಾ ಎಂಟರ್‌ಪ್ರೈಸಸ್ ಮೂಲಕ ರಾಧಿಕಾ ಅವರು 3 ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಮಯಂತಿ ಸಿನಿಮಾ ಬಳಿಕ ಭೈರಾದೇವಿ ಸಿನಿಮಾದಲ್ಲಿ ರಾಧಿಕಾ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಸ್ಯಾಂಡಲ್​ವುಡ್​​ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೈಲರ್​ ಹಾಗೂ ರಿಲೀಸ್​ ಡೇಟ್​ ಈವೆಂಟ್ ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್​​ನಲ್ಲಿ ಇತ್ತೀಚೆಗೆ ನಡೆಯಿತು.

ಟ್ರೈಲರ್​​ ಹಾರರ್​​ ಜೊತೆಗೆ ದೈವದ ಕಥೆ ಒಳಗೊಂಡಿದ್ದು, ಎರಡು ಶೇಡ್​​ನಲ್ಲಿ ರಾಧಿಕಾ ಅಭಿನಯಿಸಿದ್ದಾರೆ. ರಮೇಶ್ ಅರವಿಂದ್, ಅನು ಪ್ರಭಾಕರ್, ರಂಗಾಯಣ ರಘು, ರವಿಶಂಕರ್​​, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ‌ ಸಿನಿಮಾದಲ್ಲಿದೆ. ಈ ಹಿಂದೆ ಆರ್‌ಎಕ್ಸ್​​ ಸೂರಿ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀ ಜೈ, ಭೈರಾದೇವಿ ಚಿತ್ರಕ್ಕೂ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ.

ಟ್ರೈಲರ್ ರಿಲೀಸ್ ಮಾಡಿ ಬಳಿಕ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, “ಈ ಸಿನಿಮಾ ಮಾಡಲು ಕಾರಣ ರಮೇಶ್ ಅರವಿಂದ್ ಸರ್​. ನನಗೆ ಭೈರಾದೇವಿ ಗೆಟಪ್ ಹಾಕಿದಾಗ ತಲೆ ಎತ್ತುವುದಕ್ಕೂ ಕೂಡ ಆಗಿರಲಿಲ್ಲ. ಕೊನೆಗೆ ನಮ್ಮ ನಿರ್ದೇಶಕರು ಶ್ರೀ ಜೈ, ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬಂದ ಮೇಲೆ ತಲೆ ನೋವು ಹೋಯಿತು. ಸಿನಿಮಾಗೆ ಶೂಟಿಂಗ್​ನಿಂದ ಹಿಡಿದು ಬಿಡುಗಡೆಯವರೆಗೂ ನಾನು ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ನೋಡದಿದ್ದರೆ ನಾನು ಮತ್ತೆ ಸಿನಿಮಾ ಮಾಡುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು.

ರಮೇಶ್ ಅರವಿಂದ್ ಮಾತನಾಡಿ, ಚಿತ್ರ ನೋಡಲು ನಾನು ಕೂಡ ಉತ್ಸುಕನಾಗಿದ್ದೇನೆ. ಆಪ್ತಮಿತ್ರ ಸಿನಿಮಾದಲ್ಲಿ ಸೌಂದರ್ಯ ಅವರಂತೆ ರಾಧಿಕಾ ಕುಮಾರಸ್ವಾಮಿ ಪಾತ್ರ ತುಂಬಾ ವಿಭಿನ್ನವಾಗಿದೆ ಎಂದರು.

ಶ್ರೀ ಜೈ ಅವರು ನಿರ್ದೇಶಿಸಿರುವ ಚಿತ್ರವನ್ನು ರವಿರಾಜ್​ ನಿರ್ಮಾಣ ಮಾಡಿದ್ದು, ಯಾದವ್​ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಸಂಕಲನವಿದೆ. ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರ್​ ಅಡಿಯಲ್ಲಿ ಭೈರಾದೇವಿ, ಅಜಾಗ್ರತ ಚಿತ್ರಗಳು ನಿರ್ಮಾಣವಾಗಿವೆ. ‘ಭೈರಾದೃವಿ’ ಅಕ್ಟೋಬರ್​ 3ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

Source : https://www.etvbharat.com/kn/!entertainment/radhika-kumaraswamy-starrer-bhairadevi-releases-on-october-3-karnataka-news-kas24092201812

 

Leave a Reply

Your email address will not be published. Required fields are marked *