Bharat Ratnaದ್ರಾವಿಡ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ಆಟಗಾರ, ಅವರು ಭಾರತ ತಂಡದ ಯಶಸ್ಸಿನಲ್ಲಿ ಆಟಗಾರನಾಗಿ, ಕೋಚ್ ಆಗಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಲೆಜೆಂಡರಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಭಾರತ ತಂಡದ ಮುಖ್ಯ ಕೋಚ್ ಆಗಿ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಎರಡನೇ ಬಾರಿಗೆ ಟಿ20 ವಿಶ್ವಕಪ್ಗೆ ಮುತ್ತಿಕ್ಕುವ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಅಲ್ಲದೆ ಸುಮಾರು 11 ವರ್ಷಗಳ ಬಳಿಕ ಟೀಂ ಇಂಡಿಯಾ (Team India) ಐಸಿಸಿ ಟ್ರೋಫಿಯನ್ನು (ICC Trophy) ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. ಭಾರತ ತಂಡ ಚಾಂಪಿಯನ್ ಆಗುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರ ಕೋಚ್ ಹುದ್ದೆ ಅವಧಿಯೂ ಕೂಡ ಮುಗಿದಿದೆ. 15 ವರ್ಷಗಳಿಗೂ ಹೆಚ್ಚು ಭಾರತ ತಂಡವನ್ನು ಪ್ರತಿನಿಧಿಸಿ, ಅಂಡರ್ 19 ವಿಶ್ವಕಪ್, ಟಿ20 ವಿಶ್ವಕಪ್ ಗೆಲ್ಲಿಸುವಲ್ಲಿ ಯಶಸ್ವಿಯಾಗಿರುವ ದ್ರಾವಿಡ್ಗೆ ಭಾರತ ರತ್ನ ನೀಡಿ ಗೌರವಿಸಿದರೆ ಇಳ್ಳೆಯದು ಎಂದು ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ದ್ರಾವಿಡ್ ಸಾಧನೆ ಸ್ಮರಿಸಿದ ಗವಾಸ್ಕರ್
” ದ್ರಾವಿಡ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ಆಟಗಾರ, ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದ ಮೂವರು ನಾಯಕರಲ್ಲಿ ಇವರೂ ಒಬ್ಬರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಅಧ್ಯಕ್ಷರಾಗಿ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದಾರೆ.
ದ್ರಾವಿಡ್ಗೆ ಭಾರತ ರತ್ನ ಪಡೆಯುವ ಅರ್ಹತೆ ಇದೆ
ಭಾರತ ಹಿರಿಯರ ತಂಡದ ತರಬೇತುದಾರರಾಗಿಯೂ ಅವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಕೆಲವು ನಾಯಕರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿದೆ. ಸಮಾಜಕ್ಕೆ ಅವರ ಸೇವೆಗಾಗಿ ಈ ಗೌರವ ನೀಡಲಾಗಿದೆ. ಈಗ ದ್ರಾವಿಡ್ ಸಾಧಿಸಿದ ಗುರಿಗಳು ಎಲ್ಲಾ ವಿಭಾಗಗಳನ್ನೂ ರಂಜಿಸಿದೆ. ಆದ್ದರಿಂದಲೇ ದ್ರಾವಿಡ್ ದೇಶದ ಅತ್ಯುನ್ನತ ಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಿಶ್ವಾರ್ಥ ಆಟಗಾರ
ದ್ರಾವಿಡ್ ಅವರು ಮುಖ್ಯ ಕೋಚ್ ಆಗಿ ಆಟಗಾರರನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಎಂದಿಗೂ ಸ್ವಾರ್ಥದಿಂದ ಆಡಲಿಲ್ಲ. ತಂಡದ ಹಿತಾಸಕ್ತಿಯೇ ಮುಖ್ಯ ಎಂದು ಭಾವಿಸಿದ್ದ ಆಟಗಾರ ಅವರು. ಒಂದು ವೇಳೆ ವಿಕೆಟ್ ಬಿದ್ದರೆ ದಿನದ ಅಂತ್ಯದಲ್ಲೂ ಒಂಟಿಯಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದವರು. ಎಲ್ಲರೂ ನೈಟ್ ವಾಚ್‌ಮ್ಯಾನ್ ಎಂದು ಕರೆಯುತ್ತಿದ್ದರು. ಆದರೆ, ಅವರ ವಿಷಯದಲ್ಲಿ ಆ ಮಾತು ಸರಿಯಲ್ಲ. ಯಾವುದೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆ ಅಂತಿಮ ಸೆಷನ್ಗಳಲ್ಲಿ ಆಡಲು ಆಸಕ್ತಿ ತೋರುವುದಿಲ್ಲ. ಆದರೆ ದ್ರಾವಿಡ್ ಇದಕ್ಕೆ ಲೆಕ್ಕಿಸುತ್ತಿರಲಿಲ್ಲ. ಈ ಬಾರಿ ವಿಶ್ವಕಪ್‌ನಲ್ಲೂ ಭಾರತ ಕಠಿಣ ಪರಿಸ್ಥಿತಿ ಎದುರಿಸಿತ್ತು. ಆಗಲೂ ಅವರು ಸದ್ದಿಲ್ಲದೆ ಆಟಗಾರರನ್ನು ಮುನ್ನಡೆಸಿದ ರೀತಿ ಚೆನ್ನಾಗಿತ್ತು ಎಂದು ಸುನಿಲ್ ಗವಾಸ್ಕರ್ ಪ್ರಶಂಸಿಸಿದ್ದಾರೆ.