ನವದೆಹಲಿ: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಯಾತ್ರೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ತನ್ನ ಗಡ್ಡವನ್ನು ತೆಗೆಯದೆ ಹಾಗೇ ಬಿಟ್ಟಿದ್ದರು. ಯಾತ್ರೆ ಮುಗಿದರೂ ಕೂಡ ಇನ್ನು ಗಡ್ಡ ತೆಗೆದಿರಲಿಲ್ಲ. ಯಾಕೆ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಇದೀಗ ರಾಹುಲ್ ಗಾಂಧಿ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.
ಸದ್ಯ ರಾಹುಲ್ ಗಾಂಧಿ ಲಂಡನ್ ಟೂರ್ ನಲ್ಲಿದ್ದಾರೆ. ಗಡ್ಡ ಟ್ರಿಮ್ ಮಾಡಿದ್ದು, ಸ್ಮಾರ್ಟ್ ಆಗಿ ರೆಡಿಯಾಗಿದ್ದಾರೆ. ಸೂಟು, ಬೂಟು ಹಾಕಿ ಹೊಸ ಲುಕ್ ನಲ್ಲಿ ತಮ್ಮ ಫ್ರೆಂಡ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಅಲ್ಲಿ ಕೆಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ಗೆ ಭೇಟಿ ನಿಡೀದ್ದರು. ಅಲ್ಲಿನ ವಿದ್ಯಾರ್ಥಿಗಳಿಗೆ ಕೇಳಿ, ಕಲಿಯುವುದಿ ಎಂಬ ಟಾಪಿಕ್ ಮೇಲೆ ತರಬೇತಿ ನೀಡಿದ್ದಾರೆ.
ಬ್ರಿಟನ್ ನಲ್ಲಿ ಹಲವಾರು ಭಾರತೀಯರನ್ನು ಭೇಟಿ ಮಾಡಿದ್ದಾರೆ. ಅಲ್ಲಿನ ಮಕ್ಕಳಿಗೆ ಇನ್ನಷ್ಟು ಉಪನ್ಯಾಸ ಮಾಡಿದ್ದಾರೆ. ಪ್ರಜಾಪ್ರಭುತ್ವ, ಅಧಿವೇಶನ, ಭಾರತ ಮತ್ತು ಚೀನಾ ನಡುವಿನ ಸಂಬಂಧ, ಭಾರತ್ ಜೋಡೋ ಯಾತ್ರೆ ಹೀಗೆ ಅನರೆಕ ವಿಚಾರಗಳ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳ ಬಳಿ ಚರ್ಚಿಸಿದ್ದಾರೆ.
The post ಭಾರತ್ ಜೋಡೋ ಯಾತ್ರೆಯ ಗಡ್ಡಕ್ಕೆ ಕತ್ತರಿ ಹಾಕಿದ ರಾಹುಲ್ ಗಾಂಧಿ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/4A8DNOz
via IFTTT