Southern Railway Recruitment 2023: ಈ ನೇಮಕಾತಿ ಮೂಲಕ 234 ಸಹಾಯಕ ಲೋಕೋ ಪೈಲಟ್, 361 ತಂತ್ರಜ್ಞರು, 168 ಜೂನಿಯರ್ ಇಂಜಿನಿಯರ್, 27 ಗಾರ್ಡ್/ಟ್ರೇನ್ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
![](https://samagrasuddi.co.in/wp-content/uploads/2023/08/image-111.png)
ನವದೆಹಲಿ: ದಕ್ಷಿಣ ರೈಲ್ವೆಯ ರೈಲ್ವೆ ನೇಮಕಾತಿ ಕೋಶ(RRC)ದಲ್ಲಿ ಖಾಲಿ ಇರುವ 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಮೂಲಕ ಸಹಾಯಕ ಲೋಕೋ ಪೈಲಟ್, ತಂತ್ರಜ್ಞರು, ಜೂನಿಯರ್ ಇಂಜಿನಿಯರ್ ಮತ್ತು ಗಾರ್ಡ್/ಟ್ರೇನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ (RPF/RPSF ಹೊರತುಪಡಿಸಿ) ಆನ್‌ಲೈನ್ ಮೋಡ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಈ ನೇಮಕಾತಿ ಮೂಲಕ 234 ಸಹಾಯಕ ಲೋಕೋ ಪೈಲಟ್, 361 ತಂತ್ರಜ್ಞರು, 168 ಜೂನಿಯರ್ ಇಂಜಿನಿಯರ್, 27 ಗಾರ್ಡ್/ಟ್ರೇನ್ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 10ನೇ/ಐಟಿಐ/ಡಿಪ್ಲೊಮಾ/ಪದವಿ ಉತ್ತೀರ್ಣರಾಗಿರಬೇಕು.
ವಯೋಮಿತಿ: UR: 18 – 42 ವರ್ಷಗಳು, OBC: 18 – 45 ವರ್ಷಗಳು ಮತ್ತು SC/ST: 18 ರಿಂದ 47 ವರ್ಷಗಳು
ಆಯ್ಕೆ ವಿಧಾನ: ರೈಲ್ವೇ ನೇಮಕಾತಿ ಸೆಲ್ ದಕ್ಷಿಣ ರೈಲ್ವೆ ನೇಮಕಾತಿ ಪ್ರಕ್ರಿಯೆಯನ್ನು CBT, ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‍ಸೈಟ್ sr.indianrailways.gov.inಗೆ ಭೇಟಿ ನೀಡಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ – 30.07.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30.08.2023
ಅರ್ಜಿ ಸಲ್ಲಿಸುವುದು ಹೇಗೆ?
- sr.indianrailways.gov.in ವೆಬ್‌ಸೈಟ್‌ಗೆ ಹೋಗಿ
- ‘GDCE for Southern Railway’ ಅಧಿಸೂಚನೆಯನ್ನು ಹುಡುಕಿ
- ಅಧಿಸೂಚನೆಯು ತೆರೆಯುತ್ತದೆ ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ನೀವು ಅರ್ಹ ಅಭ್ಯರ್ಥಿಯಾಗಿದ್ದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮುಂದುವರೆಯಿರಿ
- ಮೇಲೆ ಹೇಳಿದ ಪೋಸ್ಟ್‌ಗಳಿಗೆ ಆನ್‌ಲೈನ್‌ನಲ್ಲಿ Apply ಲಿಂಕ್ ಹುಡುಕಿ ಮತ್ತು ಕ್ಲಿಕ್ ಮಾಡಿ
- ನೀವು ಹೊಸ ಬಳಕೆದಾರರಾಗಿದ್ದರೆ, ನೀವು ನೋಂದಣಿ ಮಾಡಿಕೊಳ್ಳಬೇಕು ಇಲ್ಲದಿದ್ದರೆ ನೀವು ನಿಮ್ಮ ಖಾತೆಗೆ ಲಾಗಿನ್ ಆಗಬಹುದು ನಂತರ Apply ಮಾಡಿ
- ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ.
- ಅಂತಿಮವಾಗಿ submit ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿನಮೂನೆಯ ಪ್ರಿಂಟ್ ತೆಗೆದುಕೊಳ್ಳಿರಿ