ರಾಜ್ಯೋತ್ಸವ ಪ್ರಶಸ್ತಿ 2023 ವಿಜೇತರ ಪಟ್ಟಿ: 2023ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳೂ ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾದವರ ವಿವರ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 31: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು (Rajyotsava Award 2023 Winners List) ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. 10 ಸಂಘ ಸಂಸ್ಥೆಗಳೂ ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜಾನಪದ ಕ್ಷೇತ್ರದಲ್ಲಿ ಹುಸೇನಾಬಿ ಬುಡೆನ್ ಸಾಬ್ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿರಲಿದೆ.
ಸಮಾಜಸೇವೆ ಕ್ಷೇತ್ರದಲ್ಲಿ 5 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪಾ ನಾಯಕ್, ನಿಜಗುಣಾನಂದ ಸ್ವಾಮೀಜಿ, ಜಿ.ನಾಗರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಡಳಿತ ಕ್ಷೇತ್ರದಲ್ಲಿ ಜಿ.ವಿ.ಬಲರಾಮ್ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ ಅವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ. ನಾಗಣ್ಣ, ಹೆಚ್.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಮೂವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದ್ರು ಪ್ರಶಸ್ತಿ ವಿಜೇತರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಟಿ.ಎಸ್. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರವಾರು ಪಟ್ಟಿಯನ್ನು ಇಲ್ಲಿ ನೀಡಲಾಗಿದೆ;
ಚಲನಚಿತ್ರ ಕ್ಷೇತ್ರದಲ್ಲಿ ಇವರಿಗೆಲ್ಲ ರಾಜ್ಯೊತ್ಸವ ಪ್ರಶಸ್ತಿ
- ಡಿಂಗ್ರಿ ನಾಗರಾಜ್
- ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)
ರಂಗಭೂಮಿ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
- ಎ.ಜಿ. ಚಿದಂಬರ ರಾವ್ ಜಂಬೆ
- ಪಿ. ಗಂಗಾಧರ ಸ್ವಾಮಿ
- ಹೆಚ್.ಬಿ.ಸರೋಜಮ್ಮ
- ತಯ್ಯಬಖಾನ್ ಎಂ.ಇನಾಮದಾರ
- ಡಾ.ವಿಶ್ವನಾಥ್ ವಂಶಾಕೃತ ಮಠ
- ಪಿ.ತಿಪ್ಪೇಸ್ವಾಮಿ
ಸಂಗೀತ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
- ಡಾ.ನಯನ ಎಸ್.ಮೋರೆ
- ಲೀಲಾ ಎಂ ಕೊಡ್ಲಿ
- ಶಬ್ಬೀರ್ ಅಹಮದ್
- ಡಾ.ಎಸ್ ಬಾಳೇಶ ಭಜಂತ್ರಿ
ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ
- ಟಿ.ಶಿವಶಂಕರ್
- ಕಾಳಪ್ಪ ವಿಶ್ವಕರ್ಮ
- ಮಾರ್ಥಾ ಜಾಕಿಮೋವಿಚ್
- ಪಿ.ಗೌರಯ್ಯ
ಯಕ್ಷಗಾನ & ಬಯಲಾಟ ಕ್ಷೇತ್ರ
- ಅರ್ಗೋಡು ಮೋಹನದಾಸ ಶೆಣೈ
- ಕೆ. ಲೀಲಾವತಿ ಬೈಪಾಡಿತ್ತಾಯ
- ಕೇಶಪ್ಪ ಶಿಳ್ಳಿಕ್ಯಾತರ
- ದಳವಾಯಿ ಸಿದ್ದಪ್ಪ
ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
- ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
- ಶಿವಂಗಿ ಶಣ್ಮರಿ
- ಮಹದೇವು
- ನರಸಪ್ಪಾ
- ಶಕುಂತಲಾ ದೇವಲಾಯಕ
- ಎಚ್.ಕೆ ಕಾರಮಂಚಪ್ಪ
- ಶಂಭು ಬಳಿಗಾರ
- ವಿಭೂತಿ ಗುಂಡಪ್ಪ
- ಚೌಡಮ್ಮ
ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ
- ಹುಚ್ಚಮ್ಮ ಬಸಪ್ಪ ಚೌದ್ರಿ
- ಚಾರ್ಮಾಡಿ ಹಸನಬ್ಬ
- ಕೆ.ರೂಪ್ಲಾ ನಾಯಕ್
- ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
- ನಾಗರಾಜು.ಜಿ
ಆಡಳಿತ ಕ್ಷೇತ್ರ
- ಬಲರಾಮ್, ತುಮಕೂರು
ವೈದ್ಯಕೀಯ ಕ್ಷೇತ್ರ
- ಡಾ.ಸಿ. ರಾಮಚಂದ್ರ, ಬೆಂಗಳೂರು
- ಡಾ.ಪ್ರಶಾಂತ್, ದ.ಕನ್ನಡ
ಸಾಹಿತ್ಯ ಕ್ಷೇತ್ರ
- ಪ‌್ರೊ. ಸಿ.ನಾಗಣ್ಣ, ಚಾಮರಾಜನಗರ
- ಸುಬ್ಬು ಹೊಲೆಯಾರ್, ಹಾಸನ
- ಸತೀಶ್ ಕುಲಕರ್ಣಿ, ಹಾವೇರಿ
ಶಿಕ್ಷಣ ಕ್ಷೇತ್ರ
ರಾಮಪ್ಪ, ರಾಯಚೂರು ಕೆ.ಚಂದ್ರಶೇಖರ್, ಕೋಲಾರ ಕೆ.ಟಿ. ಚಂದ್ರು, ಮಂಡ್ಯ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1