Ram Charan’s Wife Upasana: ರಾಮ್ ಚರಣ್ ಪತ್ನಿ ಉಪಾಸನಾ, ಸೋಮವಾರ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುಟ್ಟ ಕಂದಮ್ಮನ ಆಗಮದಿಂದ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

ಹೈದರಾಬಾದ್: ರಾಮ್ ಚರಣ್ ಪತ್ನಿ ಉಪಾಸನಾ ಸೋಮವಾರ (ಜೂನ್ 19) ರಾತ್ರಿ ಜುಬ್ಲಿ ಹಿಲ್ಸ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ . 2012 ಜೂನ್ 14ರಂದು ಉಪಾಸನಾ, ರಾಮ್ ಚರಣ್ ತೇಜ ಹೈದರಾಬಾದ್ ಹೊರವಲಯದಲ್ಲಿರುವ ಮೊಯಿನಾಬಾದ್ ಫಾರಂ ಹೌಸ್‍ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಮದುವೆಯಾಗಿ 11 ವರ್ಷಗಳ ನಂತರ ಉಪಾಸನಾ ಮಗುವಿಗೆ ಜನ್ಮ ನೀಡಿರುವುದು ಮೆಗಾಸ್ಟಾರ್ ಚಿರಂಜೀವಿ,ಕುಟುಂಬಸ್ಥರಿಗೆ ಹಾಗೂ ಅವರ ಫ್ಯಾನ್ಸ್ ಗೆ ಸಂತಸ ತಂದಿದೆ. ಈಗಾಗಲೇ ಮೆಗಾಸ್ಟಾರ್ ಚಿರಂಜೀವಿ ಹೆಣ್ಣು ಮಕ್ಕಳಿಬ್ಬರಿಗೂ ಹೆಣ್ಣು ಮಗುವಿದ್ದರಿಂದ ರಾಮ್ ಚರಣ್ ಪತ್ನಿ ಉಪಾಸನಾಗೆ ಗಂಡು ಮಗು ಆಗಬೇಕೆಂದು ಹೆಚ್ಚಿನವರ ಹಾರೈಕೆ ಆಗಿತ್ತು.
ನೀರಿಕ್ಷೆ ಸ್ವಲ್ಪ ಹುಸಿಯಾಗಿದೆ. ಯಾವ ಮಗು ಆದರೂ ಮಕ್ಕಳೆಂದರೆ ಎಲ್ಲವೂ ಒಂದೇ ಅದರರಲ್ಲಿ ಗಂಡು ಹೆಣ್ಣು ಎಂಬ ಬೇಧವಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಮ್‌ಚರಣ್ ಹಾಗೂ ಉಪಾಸನಾ ತಾವು ತಂದೆ ತಾಯಿ ಆಗುತ್ತಿರುವ ಸಂತೋಷದ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಅಂದಿನಿಂದ ಇಬ್ಬರ ಕುಟುಂಬದವರು ಮುದ್ದು ಕಂದಮ್ಮನ್ನು ಬರ ಮಾಡಿಕೊಳ್ಳಲು ಕಾತರದಿಂದ ಕಾಯುತಿದ್ದ ಘಳಿಗೆ ಇಂದು ಸಮಯ ಬಂದಿದೆ. ಹೆರಿಗೆ ಬಳಿಕ ತಾಯಿ ಹಾಗೂ ಮಗುಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.