Ram Navami 2024: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ.

ಅಯೋಧ್ಯೆ, ಏ.17: ಮಂದಿರ ನಿರ್ಮಾಣವಾದ ನಂತರ ಇದೆ ಮೊದಲ ಬಾರಿ ಅಯೋಧ್ಯೆಯಲ್ಲಿ ರಾಮನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಹಿಂದೆ ವಿಜ್ಞಾನಿಗಳು ಅಯೋಧ್ಯೆಯಲ್ಲಿ ಸೂರ್ಯರಶ್ಮಿಯ ಪ್ರಯೋಗವನ್ನು ಮಾಡಿದ್ದಾರೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI), ರೂರ್ಕಿಯ ಹಿರಿಯ ವಿಜ್ಞಾನಿಗಳ ಪ್ರಕಾರ, ಯೋಜಿತ ಈ ಸೂರ್ಯರಶ್ಮಿಯು 58 ಮಿ.ಮೀ. ಗಾತ್ರವನ್ನು ಹೊಂದಿದ್ದು, ರಾಮ ಲಲ್ಲಾನ ಹಣೆಯ ಮೇಲೆ ತಿಲಕದಂತೆ ಪ್ರಜ್ವಲಿಸಲಿದೆ ಎಂದು ಹೇಳಿದ್ದಾರೆ.

 ಅಯೋಧ್ಯೆ ರಾಮಮಂದಿರದಲ್ಲಿ(Ayodhya Ram Mandir) ರಾಮಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಕೋಟ್ಯಾಂತರ ಭಕ್ತ ಆಸೆಯಂತೆ, 500 ವರ್ಷಗಳ ಹೋರಾಟದ ಫಲವಾಗಿ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಕೂಡ ನಡೆದಿತ್ತು. ಇದೀಗ ರಾಮ ಮಂದಿರ ನಿರ್ಮಾಣವಾದ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕನ್ನಡಿಗಳು ಮತ್ತು ಮಸೂರಗಳನ್ನು ಒಳಗೊಂಡಿರುವ ಒಂದು ದೀರ್ಘವಧಿಯ ಕಾರ್ಯವಿಧಾನವಾಗಿದೆ. ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI), ರೂರ್ಕಿಯ ಹಿರಿಯ ವಿಜ್ಞಾನಿಗಳ ಪ್ರಕಾರ, ಯೋಜಿತ ಈ ಸೂರ್ಯರಶ್ಮಿಯು 58 ಮಿ.ಮೀ. ಗಾತ್ರವನ್ನು ಹೊಂದಿದ್ದು, ರಾಮ ಲಲ್ಲಾನ ಹಣೆಯ ಮೇಲೆ ತಿಲಕದಂತೆ ಪ್ರಜ್ವಲಿಸಲಿದೆ. ಇದು ಸುಮಾರು ಮೂರರಿಂದ ಮೂರೂವರೆ ನಿಮಿಷಗಳು ಮೂಡಲಿದೆ. ಎರಡು ನಿಮಿಷಗಳ ಪೂರ್ಣ ಪ್ರಕಾಶ ರಾಮನ ಮೇಲೆ ಬೀಳಲಿದೆ ಎಂದು ಹೇಳಿದರು.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಈ ಹಿಂದೆ ಹೇಳಿರುವಂತೆ ಸೂರ್ಯರಶ್ಮಿ ರಾಮನನ್ನು ಸ್ಪರ್ಶ ಮಾಡುವ ಸಮಯದಲ್ಲಿ ರಾಮ ಭಕ್ತರಿಗೆ ಮಂದಿರದೊಳಗೆ ಅವಕಾಶ ನೀಡಲಾಗುವುದು. ದೇವಾಲಯದ ಟ್ರಸ್ಟ್‌ನಿಂದ ಸುಮಾರು 100 ಎಲ್‌ಇಡಿ ಸ್ಕ್ರೀನ್‌ಗಳನ್ನು ಹಾಕಲಾಗುತ್ತಿದೆ ಮತ್ತು ಸರ್ಕಾರದಿಂದ 50 ರಾಮನವಮಿ ಆಚರಣೆ ಲೈವ್​​​​ ಸ್ಕ್ರೀನ್​​ ನೋಡಲಾಗುವುದು ಎಂದು ಹೇಳಿದ್ದಾರೆ.

Source : https://tv9kannada.com/national/ram-navami-2024-sunrays-touch-balaramas-forehead-at-ayodhya-ram-mandir-national-news-akp-817315.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *