Ram Navami 2024: ರಾಮ ನವಮಿ ಹಬ್ಬವನ್ನ ಏಕೆ ಆಚರಿಸಲಾಗುತ್ತೆ? ಇಲ್ಲಿದೆ ಮಹತ್ವ, ಪೂಜಾ ವಿಧಿ-ವಿಧಾನ.

ರಾಮ ನವಮಿ (Ram Navami) ಹಬ್ಬವನ್ನ (Festival) ಪ್ರತಿ ವರ್ಷ ಹಿಂದೂಗಳು (Hindu)  ಆಚರಿಸುವ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಏಪ್ರಿಲ್ 17 ರ ಬುಧವಾರದಂದು (Wednesday) ರಾಮ ನವಮಿ ಹಬ್ಬವನ್ನ ಆಚರಿಸಲಾಗುತ್ತದೆ. ಈ ಹಬ್ಬವು ಭಗವಾನ್ ರಾಮನ ಜನ್ಮದಿನವನ್ನ ಸೂಚಿಸುತ್ತದೆ. ಈ ದಿನ ಭಕ್ತರು ದೇವಸ್ಥಾನಗಳಿಗೆ (Temple) ಭೇಟಿ ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ, ಪ್ರಾರ್ಥನೆ, ಉಪವಾಸ, ಆಧ್ಯಾತ್ಮಿಕ ಪ್ರವಚನಗಳನ್ನು ಕೇಳುತ್ತಾರೆ ಮತ್ತು ಭಜನೆಗಳು ಅಥವಾ ಕೀರ್ತನೆಗಳನ್ನು ಹಾಡುತ್ತಾರೆ. ಕೆಲವು ಭಕ್ತರು ತೊಟ್ಟಿಲಲ್ಲಿ ರಾಮನ ವಿಗ್ರಹವನ್ನ ಇಟ್ಟು ಮಗುವಿನಂತೆ ಪೂಜೆ ಸಲ್ಲಿಸುತ್ತಾರೆ. ಇನ್ನು ಈ ವರ್ಷ ರಾಮ ನವಮಿಯನ್ನ ಯಾವಾಗ ಆಚರಿಸಲಾಗುತ್ತದೆ? ಇದರ ಹಿಂದಿನ ಮಹತ್ವವೇನು ಎಂಬುದು ಇಲ್ಲಿದೆ. 

ಯಾವಾಗ ರಾಮ ನವಮಿ?
ರಾಮನವಮಿಯನ್ನ ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನ ಚೈತ್ರ ಮಾಸದ ಶುಕ್ಲ ಪಕ್ಷದ ಹಂತದಲ್ಲಿ ಒಂಬತ್ತನೇ ದಿನ ಅಥವಾ ನವಮಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ, ಹಬ್ಬವನ್ನು ಏಪ್ರಿಲ್ 17 ರ ಬುಧವಾರದಂದು ಆಚರಿಸಲಾಗುತ್ತದೆ. ಈ ಹಬ್ಬವು ಪ್ರತಿ ವರ್ಷ ಚೈತ್ರ ನವರಾತ್ರಿ ಉತ್ಸವಗಳ ಅಂತಿಮ ದಿನದ ಶುಭ ಸಮಯ ಎಂದು ಪರಿಗಣಿಸಲಾಗುತ್ತದೆ. ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಚೈತ್ರ ನವರಾತ್ರಿಯ ಒಂಬತ್ತನೇ ದಿನದಂದು ಮಾ ದುರ್ಗಾ ಮತ್ತು ಅವಳ ಅವತಾರ ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ.

ಶುಭ ಮುಹೂರ್ತ ಹೀಗಿದೆ
ರಾಮ ನವಮಿ ದಿನ ಬುಧವಾರ ಮುಹೂರ್ತ ಇದ್ದು, ಬೆಳಗ್ಗೆ 11:03 ರಿಂದ ಮಧ್ಯಾಹ್ನ 13:38ರ ತನಕ ಇದೆ. ಹಾಗೆಯೇ, ನವಮಿ ತಿಥಿಯೂ ಏಪ್ರಿಲ್​ 16ರಂದು 13:23 ರಂದು ಆರಂಭವಾಗುತ್ತದೆ. ಇನ್ನು 15:14 ಏಪ್ರಿಲ್ 17, 2024 ರಂದು ನವಮಿ ತಿಥಿ ಮುಗಿಯುತ್ತದೆ.

ರಾಮ ನವಮಿ ಆಚರಣೆ ಹಿಂದಿನ ಇತಿಹಾಸ
ರಾಮ ನವಮಿಯು ಭಗವಾನ್ ರಾಮನ ಜನ್ಮವನ್ನು ಆಚರಿಸುವ ದಿನವಾಗಿದೆ. ನಂಬಿಕೆಗಳ ಪ್ರಕಾರ ಸರ್ವಾಂಗೀಣ ಗುಣಾಭಿರಾಮನಾದ ಶ್ರೀರಾಮನು ಚೈತ್ರ ಶುದ್ಧ ನವಮಿ, ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ, ನಿಖರವಾಗಿ ಅಭಿಜಿತ್ ಮುಹೂರ್ತದಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಗೆ, ಅಂದರೆ ಮಧ್ಯದಲ್ಲಿ ಜನಿಸಿದನು. ಈ ದಿನವನ್ನ ಅದ್ಧೂರಿಯಾಗಿ ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತದೆ. ಇನ್ನು ರಾಮ ನವಮಿಯು ಪ್ರಪಂಚದಾದ್ಯಂತದ ಹಿಂದೂಗಳಲ್ಲಿ ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಶ್ರೀರಾಮನ ದೈವಿಕ ಅವತಾರವಾದ ವಿಷ್ಣುವಿನ ಏಳನೇ ಅವತಾರವನ್ನು ಪೂಜಿಸುವ ದಿನವಾಗಿದೆ.

ಶ್ರೀರಾಮನವಮಿಯ ಮಹತ್ವ: ಮರ್ಯಾದ ಪುರುಷೋತ್ತಮ ಶ್ರೀರಾಮನ ಆರಾಧನೆಯ ದಿನ. ಶ್ರೀರಾಮಚಂದ್ರ ಹುಟ್ಟಿದ ದಿನವನ್ನು ಶ್ರೀರಾಮನವಮಿಯಾಗಿ ಆಚರಿಸಲಾಗುತ್ತದೆ. ಈ ದಿನ ಎಲ್ಲಾ ರಾಮಮಂದಿರ, ಆಂಜನೇಯನ ಗುಡಿಗಳಲ್ಲಿ ವಿಶೇಷ ಪೂಜೆ, ರಾಮನಾಮ ಸ್ಮರಣೆ ಮಾಡಲಾಗುತ್ತದೆ. ಶ್ರೀರಾಮನವಮಿ ಹಿಂದೂಗಳ ಧಾರ್ಮಿಕ ಹಬ್ಬಗಳಲ್ಲಿ ಪ್ರಮುಖವಾದದ್ದಾಗಿದೆ. ಶ್ರೀರಾಮನವಮಿಯನ್ನು ಚೈತ್ರ ಮಾಸದ ಶುಕ್ಲ ಪಕ್ಷ 9ನೇ ದಿನದಂದು ಆಚರಿಸಲಾಗುತ್ತದೆ.

ರಾಮ ನವಮಿಯನ್ನು ದೇಶದಾದ್ಯಂತ ಬಹಳ ಹುರುಪು ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ, ಭಕ್ತರು ರಾಮಾಯಣ ಮತ್ತು ಶ್ರೀಮದ್ ಭಾಗವತದಂತಹ ಗ್ರಂಥಗಳ ಓದುತ್ತಾರೆ. ಈ ದಿನ ಸೀತಾ ಮಾತೆ, ಲಕ್ಷ್ಮಣ ಮತ್ತು ಹನುಮಂತನನ್ನು ಪೂಜಿಸಲಾಗುತ್ತದೆ.

ರಾಮನವಮಿ ದಿನದಂದು ಹಲವು ಕಡೆ ಕೋಸಂಬರಿ, ಪಾನಕ, ಮಜ್ಜಿಗೆಯನ್ನು ಹಂಚಲಾಗುತ್ತದೆ. ಇದು ಐಕ್ಯತೆಯ ಸಂಕೇತವಾಗಿದೆ. ಎಲ್ಲರೂ ಒಟ್ಟಾಗಿ ಸೇರಿ ಬದುಕೋಣ ಎಂಬ ಮಹತ್ವವನ್ನು ಸಾರುತ್ತದೆ. ಶ್ರೀರಾಮನವಮಿ ಆಚರಣೆಯನ್ನು 9 ದಿನಗಳ ಆಚರಣೆಯಾಗಿ ಮಾಡಲಾಗುತ್ತದೆ. ನವಮಿಯಂದು ಶ್ರೀರಾಮನ ಪಟ್ಟಾಭಿಷೇಕದಂತೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಪೂಜೆಯನ್ನ ಹೇಗೆ ಮಾಡಬೇಕು?

ರಾಮ ನವಮಿಯ ದಿನದಂದು , ಒಂದು ಬಟ್ಟಲಿನಲ್ಲಿ ಗಂಗಾಜಲ ತೆಗೆದುಕೊಂಡು ರಾಮ್ ರಕ್ಷಾ ಮಂತ್ರವನ್ನು ಹಾಗೂ ‘ಓಂ ಶ್ರೀ ಹ್ರೀ ಕ್ಲೀಂ ರಾಮಚಂದ್ರಾಯ ಶ್ರೀ ನಮಃ’ ಎಂದು 108 ಬಾರಿ ಜಪಿಸಿ. ಅದನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಸಿಂಪಡಿಸಿ. ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಭಾರತವನ್ನು ಹೊರತುಪಡಿಸಿ, ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ಹಿಂದೂಗಳಲ್ಲಿ ಹಬ್ಬವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ.

Source : https://kannada.news18.com/news/astrology/ram-navami-2024-here-is-the-date-and-significance-ssd-1656605.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *