ಚಿತ್ರದುರ್ಗ ಅ. 8
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಮಾಯಣವನ್ನು ಬರೆದಂತಹ ಮಹರ್ಷಿ ವಾಲ್ಮೀಕಿ ಅವರನ್ನು ಒಂದೇ ಜಾತಿಗೆ ಸೀಮಿತ ಮಾಡದಿರಿ ಎಂದು ರಾಜ್ಯ ಬಿಜೆಪಿಯ ಎಸ್.ಟಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಪಾಪೇಶ್ ನಾಯಕ್ ತಿಳಿಸಿದರು.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಮಂಗಳವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮಿಕೀ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ರಾಜಕಾರಣದ ಜೊತೆಗೆ ರಾಜಕೀಯ ಬೆರೆತು ಹೋಗಿದೆ ಜಾತಿಯ ರಾಜಕಾರಣ ತುಂಬಾ ದಿನ ಉಳಿಯುವುದಿಲ್ಲ ಆದರೆ ಅಧಿಕಾರದ ಅವಧಿಯಲ್ಲಿ ಮಾಡಿದಂತಹ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀಜಿ ರಾಜಕೀಯ ವ್ಯಕ್ತಿಲ್ಲ. ಅವರು ನೂರಕ್ಕೆ ನೂರು ಭಾಗ ಆಧ್ಯಾತ್ಮಿಕ ವ್ಯಕ್ತಿ. ರಾಮರಾಜ್ಯದ ಕನಸು ಕಂಡಂತಹ ಮಹಾನ್ ವ್ಯಕ್ತಿಯನ್ನು ನಾವು ಸ್ಮರಿಸುವುದು ಅತ್ಯಂತ ಅವಶ್ಯಕ, ರಾಮಾಯಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರಿಗೆ. ಸ್ವಲ್ಪಮಟ್ಟಿಗಾದರೂ ಧ್ಯಾನ ಯೋಗ ಮೊದಲಾದ ಸಾಧನೆಗಳ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಎಸ್.ಟಿ.ಮೋರ್ಚಾದ ಅಧ್ಯಕ್ಷರಾದ ಪ್ರಸಾದ್ ಬಾಬು, ನಗರದ ಎಸ್.ಟಿ.,ಮಾರ್ಚಾದ ಅಧ್ಯಕ್ಷರಾದ ಚಿನ್ನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರೀ ಗೀರಿಶ್, ನಗರಾದ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಕೆ. ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಕವನ ರಾಘವೇಂದ್ರ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಟಿ.ಮಾರ್ಚಾದ ಪ್ರಧಾನ ಕಾರ್ಯದರ್ಶಿ ಸೋರೇನಹಳ್ಳಿ ನಾಗರಾಜ್, ಸೋಮು, ಪ್ರಕಾಶ್ ರೆಡ್ಡಿ, ರಮೇಶ್, ಲೀಲಾವತಿ, ಭಾರತಿ, ಕವಿತ, ಸುಮಾ, ಕಂಚನ, ಕವಿತ ಜವಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 20