ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ (Jai Hanuman) ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಈಗಾಗಲೇ ಅಧಿಕೃತ ಘೋಷಣೆ ಆಗಿದೆ. ಈ ಬೆನ್ನಲ್ಲೇ, ರಾಣಾ ದಗ್ಗುಬಾಟಿ (Rana Daggubati) ಕೂಡ ಈ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತೆಲುಗಿನ ನಟ ರಾಣಾ ದಗ್ಗುಬಾಟಿ ಅವರು ‘ಜೈ ಹನುಮಾನ್’ ಸಿನಿಮಾ ತಂಡದ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ (Prashanth Varma) ಅವರು ರಿಷಬ್ ಶೆಟ್ಟಿ (Rishab Shetty) ಮತ್ತು ರಾಣಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಜೈ ಜೈ ಹನುಮಾನ್’ ಎಂದು ಅಡಿಬರಹ ನೀಡಿದ್ದಾರೆ. ಪ್ರಶಾಂತ್, ರಿಷಬ್ ಜೊತೆಗಿನ ರಾಣಾ ಫೋಟೋ ಮತ್ತು ಅಡಿಬರಹ ನೋಡಿ ಈ ಸಿನಿಮಾದಲ್ಲಿ ಅವರು ನಟಿಸುವ ಕುರಿತು ಚರ್ಚೆಯಾಗುತ್ತಿದೆ.
ರಾಣಾ ದಗ್ಗುಬಾಟಿ ಅವರು ಚಿತ್ರದಲ್ಲಿ ಶ್ರೀ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಅಧಿಕೃತವಾಗಿ ಘೋಷಿಸುವವರೆಗೂ ಕಾದುನೋಡಬೇಕಿದೆ.
ಇನ್ನೂ ಇತ್ತೀಚೆಗೆ ರಿಷಬ್ ಶೆಟ್ಟಿ ಹನುಮಂತನ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು. ರಿಷಬ್ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ‘ಕಾಂತಾರ’ ಸಿನಿಮಾದ ಬಳಿಕ ಈ ಚಿತ್ರದ ಮೇಲೆಯೂ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.
Source : https://publictv.in/tollywood-actor-rana-daggubati-in-a-crucial-role-in-jai-hanuman
Views: 0