Vidarbha vs Kerala: ದೇಶೀಯ ಅಂಗಳದ ಟೆಸ್ಟ್ ಸಮರ ಕೊನೆಯ ಹಂತಕ್ಕೆ ಬಂದು ನಿಂತಿದೆ. ಅದರಂತೆ ಈ ಬಾರಿಯ ರಣಜಿ ಟೂರ್ನಿಯ ಅಂತಿಮ ಪಂದ್ಯದಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗುತ್ತಿದೆ. ವಿದರ್ಭದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಗೆಲ್ಲುವ ತಂಡ ರಣಜಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆ.

ರಣಜಿ ಟೂರ್ನಿಯ ಫೈನಲ್ ಪಂದ್ಯ ಇಂದಿನಿಂದ (ಫೆ.26) ಶುರುವಾಗಲಿದೆ. ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೇರಳ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್ ಪಂದ್ಯಗಳಲ್ಲಿ ವಿದರ್ಭ ತಂಡವು ಬಲಿಷ್ಠ ಮುಂಬೈ ತಂಡವನ್ನು 80 ರನ್ ಗಳಿಂದ ಸೋಲಿಸಿ ಫೈನಲ್ ಗೇರಿತು.
ಮತ್ತೊಂದೆಡೆ ಕೇರಳ ಹಾಗೂ ಗುಜರಾತ್ ನಡುವಿನ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡರೂ, ಮೊದಲ ಇನಿಂಗ್ಸ್ ನಲ್ಲಿನ ಕೇವಲ 2 ರನ್ ಗಳ ಮುನ್ನಡೆಯೊಂದಿಗೆ ಕೇರಳ ತಂಡ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಇಂದಿನಿಂದ ಆರಂಭವಾಗಲಿರುವ ದೇಶೀಯ ಅಂಗಳದ ಟೆಸ್ಟ್ ಸಮರದಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗುತ್ತಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಈ ಪಂದ್ಯವು ಬೆಳಿಗ್ಗೆ 9.30 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಪಂದ್ಯವನ್ನು ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಹಾಟ್ಸ್ಟಾರ್ ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ಲೈವ್ ವೀಕ್ಷಿಸಬಹುದು.
ಉಭಯ ತಂಡಗಳು:
ವಿದರ್ಭ ತಂಡ: ಅಕ್ಷಯ್ ವಾಡ್ಕರ್ (ನಾಯಕ) , ಅಥರ್ವ ತೈಡೆ , ಧ್ರುವ ಶೋರೆ , ಪಾರ್ಥ್ ರೇಖಾಡೆ , ಡ್ಯಾನಿಶ್ ಮಾಲೆವಾರ್ , ಕರುಣ್ ನಾಯರ್ , ಯಶ್ ರಾಥೋಡ್ , ಹರ್ಷ ದುಬೆ , ನಚಿಕೇತ್ ಭೂತೆ , ದರ್ಶನ್ ನಲ್ಕಂಡೆ , ಯಶ್ ಠಾಕೂರ್ , ಅಕ್ಷಯ್ ಸಿದ್ಧೇಶ್ ವಖರೆ , ಅಕ್ಷಯ್ ಕರ್ಣೆವಾರ್, ಶುಭಂ ಕಾಪ್ಸೆ , ಅಮನ್ ಮೊಖಡೆ , ಮಂದರ್ ಮಹಾಲೆ , ಯಶ್ ಕದಂ , ಪ್ರಫುಲ್ ಹಿಂಗೆ , ಉಮೇಶ್ ಯಾದವ್.
ಕೇರಳ ತಂಡ: ಸಚಿನ್ ಬೇಬಿ (ನಾಯಕ) , ಮೊಹಮ್ಮದ್ ಅಝರುದ್ದೀನ್ (ವಿಕೆಟ್ ಕೀಪರ್) , ಅಕ್ಷಯ್ ಚಂದ್ರನ್ , ರೋಹನ್ ಕುನ್ನುಮ್ಮಳ್ , ವರುಣ್ ನಾಯನಾರ್ , ಜಲಜ್ ಸಕ್ಸೇನಾ , ಸಲ್ಮಾನ್ ನಿಝಾರ್ , ಅಹಮ್ಮದ್ ಇಮ್ರಾನ್ , ಆದಿತ್ಯ ಸರ್ವತೆ , ಎಂಡಿ ನಿಧೀಶ್ , ನೆಡುಮಂಕುಹಿ ಬಾಸಿಲ್ , ಬಾಸಿ ಥಂಪಿ , ವಿಷ್ಣು ವಿನೋದ್, ಬಾಬಾ ಅಪರಜಿತ್, ಫಾಝಿಲ್ ಫನೂಸ್, ವತ್ಸಲ್ ಗೋವಿಂದ್ , ಶೋನ್ ರೋಜರ್ , ವೈಶಾಖ್ ಚಂದ್ರನ್ , ಕೃಷ್ಣ ಪ್ರಸಾದ್ , ಆನಂದ್ ಕೃಷ್ಣನ್ , ಕೆ ಎಂ ಆಸಿಫ್.
Source: https://tv9kannada.com/sports/cricket-news/ranji-trophy-2025-final-vidarbha-vs-kerala-zp-983479.html