ಮಹಾರಾಣಿ ಯೆಸುಬಾಯಿ ಅವತಾರದಲ್ಲಿ ರಶ್ಮಿಕಾ ಮಿಂಚು; ವಿಕ್ಕಿ ಕೌಶಲ್‌ ಜತೆಗಿನ ‘ಛಾವಾ’ ಚಿತ್ರದ ಪೋಸ್ಟರ್‌ ಔಟ್‌.

Rashmika Mandanna: ಟಾಲಿವುಡ್‌ನ ʼಪುಷ್ಪ 2ʼ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಚಿತ್ರ ‘ಛಾವಾ’ದ ಪೋಸ್ಟರ್‌ ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ. ವಿಕ್ಕಿ ಕೌಶಲ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ಫೆ. 14ರಂದು ತೆರೆ ಕಾಣಲಿದೆ.

ಮುಂಬೈ: ಕಳೆದ ತಿಂಗಳು ವಿಶ್ವಾದ್ಯಂತ ತೆರೆಕಂಡ ಟಾಲಿವುಡ್‌ ಕಮರ್ಶಿಯಲ್‌ ಚಿತ್ರಗಳ ನಿರ್ದೇಶಕ ಸುಕುಮಾರ್‌ (Sukumar)-ಅಲ್ಲು ಅರ್ಜುನ್‌ (Allu arjun)-ರಶ್ಮಿಕಾ ಮಂದಣ್ಣ(Rashmika Mandanna) ಕಾಂಬಿನೇಷನ್‌ನ ‘ಪುಷ್ಪ 2’ (Pushpa 2) ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. ರಿಲೀಸ್‌ ಆಗಿ ಒಂದೂವರೆ ತಿಂಗಳಾಗಿದ್ದು, ಈಗಲೂ ಕೋಟಿ ಕೋಟಿ ರೂ. ದೋಚುತ್ತಿದೆ. ಜಾಗತಿಕವಾಗಿ 1,700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. 2021ರಲ್ಲಿ ತೆರೆಕಂಡ ‘ಪುಷ್ಪ’ ಚಿತ್ರದ ಸೀಕ್ವೆಲ್‌ ಆಗಿರುವ ಇದು ಕನ್ನಡ, ತೆಲುಗು ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಮೋಡಿ ಮಾಡಿದೆ. ಈ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಒಂದರ ಹಿಂದೆ ಒಂದರಂತೆ ಬಾಲಿವುಡ್‌ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಅವರ ಮುಂಬರುವ ಹಿಂದಿ ಸಿನಿಮಾ ʼಛಾವಾʼ (Chhaava)ದ ಪೋಸ್ಟರ್‌ ಇದೀಗ ರಿಲೀಸ್‌ ಆಗಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ (Vicky Kaushal) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ತೆರೆ ಮೇಲೆ ಮೊದಲ ಬಾರಿ ಒಂದಾಗುತ್ತಿರುವ ಚಿತ್ರ ʼಛಾವಾʼ. ಈ ಚಿತ್ರದಲ್ಲಿ ರಶ್ಮಿಕಾ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀರೆ ಸುತ್ತಿ, ಮೈತುಂಬಾ ಒಡೆವೆ ತೊಟ್ಟು ಥೇಟ್‌ ರಾಣಿಯಂತೆ ಕಂಗೊಳಿಸಿದ್ದು, ಫ್ಯಾನ್ಸ್‌ ಫಿದಾ ಆಗಿದ್ದಾರೆ. ನ್ಯಾಷನ್‌ ಕ್ರಶ್‌ ಎನ್ನುವುದನ್ನು ಮತ್ತೊಮ್ಮೆ ಪ್ರೂವ್‌ ಮಾಡಿದ್ದಾರೆ ಎಂದು ಹಲವರು ಹಾಡು ಹೊಗಳಿದ್ದಾರೆ.

Source : https://vishwavani.news/latest-news/rashmika-mandanna-looks-majestic-as-maharani-yesubai-in-chhaava-32022.html

Leave a Reply

Your email address will not be published. Required fields are marked *