ಹಿರಿಯೂರು /ಯರಬಳ್ಳಿ: ಡಿ.03
ಮಕ್ಕಳಲ್ಲಿ ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಪೋಷಣ್ ಅಭಿಯಾನದಡಿಯಲ್ಲಿ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯಲ್ಲಿ ಬುಧವಾರ ಮಕ್ಕಳಿಗಾಗಿ ಪೌಷ್ಟಿಕಾಹಾರ ಮಾಹಿತಿ ಹಾಗೂ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ಮಾತನಾಡಿ “ಉತ್ತಮ ಪೌಷ್ಟಿಕಾಂಶವು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅತ್ಯಗತ್ಯ. ಇದು ಅವರ ಕಲಿಕೆಯ ಸಾಮರ್ಥ್ಯ ಮತ್ತು ತರಗತಿಯ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಮಕ್ಕಳು ಪೌಷ್ಟಿಕಾಂಶಯುಕ್ತ ತರಕಾರಿ ಹಣ್ಣುಗಳನ್ನು ಸೇವಿಸುವಂತೆ ಪ್ರೇರೇಪಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ “ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪೌಷ್ಟಿಕಾಂಶವುಳ್ಳ ವಿವಿಧ ಸೊಪ್ಪು ತರಕಾರಿಗಳು ಧಾನ್ಯಗಳು , ಮೊಟ್ಟೆ ಇನ್ನೂ ಅನೇಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಪ್ರದರ್ಶನದ ಮೂಲಕ ತೋರಿಸಿ ವಿವರಿಸಲಾಯಿತು.
ಶಾಲಾ ಸಹಶಿಕ್ಷಕರಾದ ದರ್ಶನ್, ಮಾರುತಿ, ಶಾರದಮ್ಮ, ಅನಸೂಯಮ್ಮ, ಶಂಷಾದ್ ಬೇಗಂ,ಹಾಗೂ ಲಿಂಗರಾಜ್, ದೈಹಿಕ ಶಿಕ್ಷಕ ರಾಜಪ್ಪ, ಸಮಾಜ ಸೇವಕ ರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು .
Views: 25