Ration card rules : ಸೆ.30 ರೊಳಗೆ ಈ ಕೆಲಸ ಮಾಡದೇ ಹೋದಲ್ಲಿ ಪಡಿತರ ಚೀಟಿಯನ್ನು ನಕಲಿ ಎದ್ನು ಪರಿಗಣಿಸಿ ಡಿಲೀಟ್ ಮಾಡಲಾಗುವುದು.

Ration card rules : ಪಡಿತರ ಚೀಟಿ ಮೂಲಕ ಸರ್ಕಾರವು ಒದಗಿಸುವ ಉಚಿತ ಅಥವಾ ಸಬ್ಸಿಡಿ ಪಡಿತರ ಯೋಜನೆಯ ಲಾಭ ಪಡೆಯುತ್ತಿದ್ದರೆ ಈ ಸುದ್ದಿ ಓದಲೇ ಬೇಕು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ದೇಶದ ಎಲ್ಲಾ ರಾಜ್ಯಗಳ ಬಡವರಿಗೆ ಉಚಿತ ಪಡಿತರವನ್ನು ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಪಡಿತರ ಚೀಟಿ ಪರಿಶೀಲನೆ ಕಾರ್ಯ ಬಹಳ ದಿನಗಳಿಂದ ನಡೆಯುತ್ತಿದೆ.
ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡುವುದು ಅವಶ್ಯಕ :
ಇದರ ಅಡಿಯಲ್ಲಿ ಪಡಿತರ ಚೀಟಿದಾರ ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿ ಮತ್ತು ಆಧಾರ್ ಲಿಂಕ್ ಮಾಡುವಂತೆ ಕೋರಲಾಗಿದೆ. ಸೆಪ್ಟೆಂಬರ್ 30 ರೊಳಗೆ ಆಧಾರ್ – ರೇಶನ್ ಕಾರ್ಡ್ ಲಿಂಕ್ ಆಗದೆ ಹೋದಲ್ಲಿ ಪಡಿತರ ಚೀಟಿಯನ್ನು ನಿಷ್ಕ್ರಿಯಗೊಳಿಸಲಾಗುವುದು.
ಇಲ್ಲವಾದಲ್ಲಿ ಪಡಿತರ ಚೀಟಿ ಡಿಲೀಟ್ ಆಗುವುದು :
ಈಗ ಇಂತಹ ಪರಿಸ್ಥಿತಿಯಲ್ಲಿ ಸೆ.30 ರವರೆಗೆ ಆಧಾರ್‌ನೊಂದಿಗೆ ಪಡಿತರ ಚೀಟಿ ಲಿಂಕ್ ಮಾಡದಿರುವ ಪಡಿತರ ಚೀಟಿಯನ್ನು ನಕಲಿ ಎಂದು ಪರಿಗಣಿಸಿ ಡಿಲೀಟ್ ಮಾಡಲಾಗುವುದು. ಇದಾದ ಬಳಿಕ ಸಂಬಂಧಿಸಿದ ಪಡಿತರ ಚೀಟಿಯ ದತ್ತಾಂಶ ಲಭ್ಯವಾಗದಿದ್ದರೆ ಸರ್ಕಾರದಿಂದ ವಿತರಣೆಯಾಗುವ ಉಚಿತ ಪಡಿತರದ ಲಾಭ ಪಡೆಯುವುದು ಸಾಧ್ಯವಾಗುವುದಿಲ್ಲ. ಈ ಸಂಬಂಧ ಬಿಹಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೂರೈಕೆ ಕಚೇರಿಗಳಿಗೆ ಆದೇಶ ಹೊರಡಿಸಲಾಗಿದೆ. ಇದಾದ ಬಳಿಕ ರಾಜ್ಯದಲ್ಲಿ ಅಭಿಯಾನ ನಡೆಸುವ ಮೂಲಕ ಪಡಿತರ ಚೀಟಿದಾರರ ಆಧಾರ್ ಸೀಡಿಂಗ್ ಮಾಡುವಂತೆ ಕೋರಲಾಗಿದೆ.
ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, ಪಡಿತರ ಚೀಟಿಯಲ್ಲಿ ನಮೂದಿಸಿರುವ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಹಿರಿಯ ಸದಸ್ಯರಿಂದ ಪುಟ್ಟ ಮಗುವಿನವರೆಗೂ ಪ್ರತಿಯೊಬ್ಬರ ಆಧಾರ್ ಸಂಖ್ಯೆಯನ್ನು ನೀಡುವುದು ಅವಶ್ಯಕ. ಪಡಿತರ ಚೀಟಿಯನ್ನು ಡಿಲೀಟ್ ಆಗದಂತೆ ನೋಡಿಕೊಳ್ಳಲು, ಸಂಬಂಧಪಟ್ಟ ಡೀಲರ್ ಅಥವಾ ಬ್ಲಾಕ್ ಪೂರೈಕೆ ಶಾಖೆಗೆ ಅರ್ಜಿಯೊಂದಿಗೆ ಆಧಾರ್ ಸಂಖ್ಯೆಯನ್ನು ನೀಡಬಹುದು.