ಚಿತ್ರದುರ್ಗ ನ. 21
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದಲ್ಲಿ ನ. 12 ರಿಂದ 16ರವರೆಗೆ ಸ್ವದೇಶಿ ಜಾಗರಣ ಮಂಚ್ ಆಶ್ರಯದಲ್ಲಿ ನಡೆದ ಸ್ವದೇಶಿ ಮೇಳದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಈ ಚಿತ್ರಕಲಾ ಪ್ರದರ್ಶನವನ್ನು ವಿಧಾನ ಪರಿಷತ್‍ನ ಮುಖ್ಯ ಸಚೇತಕರಾದ ರವಿಕುಮಾರ್ ವೀಕ್ಷಣೆ ಮಾಡಿ ಕಲಾವಿದರ ಕೈಚಳಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಚಿತ್ರಕಲಾ ಪ್ರದರ್ಶನದಲ್ಲಿ ಸ್ಥಳಿಯ ಕಲಾವಿದರುಗಳಾದ ಕ್ರಿಯೇಟಿವ್ ವೀರೇಶ್ , ನಾಗರಾಜ್ (ನಾಗುಆಟ್ರ್ಸ್), ಶಾಂತಕುಮಾರ್ ಜವಳಿ, ನಾಗರಾಜ್ ಬೇದ್ರೆ, ನವೀನ್ ಬೇದ್ರೆ, ಮಾರುತಿ ಕೆ, ಶೃತಿ ದೀಕ್ಷಿತ್, ಅಮೂಲ್ಯ, ಕಲಾಕೃತಿಗಳು ,ತೈಲವರ್ಣ, ಜಲವರ್ಣ, ಮಂಡಲಆರ್ಟ್, ಮಾಡ್ರನ್‍ಆರ್ಟ್, ಕ್ರಿಯೇಟಿವ್ ಆರ್ಟ್, ಇನ್ನು ಮುಂತಾದ ನೂರಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡವು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಶಿವಕುಮಾರ್, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 17