ಮದ್ಯಪಾನದ ಪರಿಣಾಮ ಗಂಭೀರ: ಲಿವರ್ ಸಿರೋಸಿಸ್–ಜಾಂಡೀಸ್ ಸಮಸ್ಯೆ, ವಿಧಾನ ಪರಿಷತ್ತಲ್ಲಿ ಧ್ವನಿಯೆತ್ತಿದ ರವಿಕುಮಾರ್–ನವೀನ್.

ಚಿತ್ರದುರ್ಗ ಡಿ. 09

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆಯಾಯಿತು. ಇದರಲ್ಲಿ ಎಂ.ಎಲ್.ಸಿ ರವಿಕುಮಾರ್, ಕೆ.ಎಸ್.ನವೀನ್‍ರವರು ಮದ್ಯಪಾನದಿಂದ ಲಿವಿರ್ ಸಿರೋಸಿಸ್ ಹಾಗೂ ಜಾಂಡೀಸ್ ಬಗ್ಗೆ ಮಾತನಾಡಿದರು.

ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮದ್ಯಪಾನ ಸೇವನೆ ಮಾಡುವ ಶೇ.2.74 ರಷ್ಟು ಜನರು ಲಿವರ್ ಸಿರೋಸಿಸ್ ಹಾಗೂ ಜಾಂಡಿಸ್‍ನಿಂದ ಬಳಲುತ್ತಿದ್ದಾರೆ. ಸರ್ಕಾರ 2025-26ರಲ್ಲಿ ರೂ.43,000 ಕೋಟಿ ಅಬಕಾರಿ ಆದಾಯ ಗುರಿ ನಿಗದಿ ಮಾಡಿದೆ. ನವೆಂಬರ್ ವರೆಗೆ ರೂ.26,615 ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಪ್ರತಿ ವರ್ಷ ವಿಶ್ವದಲ್ಲಿ 15 ಲಕ್ಷ ಜನ ಲಿವರ್ ಸಿರೋಸಿಸ್ ಮೃತಪಟ್ಟರೆ, ಇದರಲ್ಲಿ 10 ಲಕ್ಷ ಜನರು ಭಾರತದವರೇ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಸರ್ಕಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದ ಅಡಿ ಮಾತ್ರ ಲಿವರ್ ಸಿರೋಸಿಸ್‍ಗೆ ಚಿಕಿತ್ಸೆ ನೀಡದೇ, ಮದ್ಯಪಾನದಿಂದ ಉಂಟಾದ ರೋಗಗಳಿಗೆ ಪ್ರತ್ಯೇಕವಾಗಿ ಅಬಕಾರಿ ಆದಾಯ ಶೇ.20 ರಷ್ಟನ್ನು ಈ ಖಾಯಿಲೆಗಳ ಚಿಕಿತ್ಸೆಗೆ ಮೀಸಲು ಇರಿಸಬೇಕು ಎಂದರು.

ಶಾಸಕ ಕೆ.ಎಸ್.ನವೀನ್ ಮಾತನಾಡಿ, ಮದ್ಯಪಾನ ಸಾಮಾಜಿಕ ಪಿಡುಗಾಗಿ ಬದಲಾಗಿದೆ. ದೇಶದ ಜನಸಂಖ್ಯೆಯಲ್ಲಿ 9ನೇ ಸ್ಥಾನದಲ್ಲಿರುವ ರಾಜ್ಯ, ಹಾರ್ಡ್ ಲಿಕ್ಕರ್ ಸೇವನೆಯಲ್ಲಿ ದೇಶಕ್ಕೆ ಮೊದಲನೆ ಸ್ಥಾನದಲ್ಲಿದೆ. ರಾಜ್ಯದಲಿ 6.88 ಕೋಟಿ ಕೇಸ್ ಹಾರ್ಡ್ ಲಿಕ್ಕರ್ ಬಿಕರಿಯಾಗುತ್ತಿದೆ. ಹಳ್ಳಿಗಳಲ್ಲಿ ಅಂಗಡಿಗಳಲ್ಲಿ ಮದ್ಯದೊರೆಯತ್ತಿದೆ. ಸರ್ಕಾರ ಬಾರ್ ಲೈಸೆನ್ಸ್ ಕಡಿವಾಣ ಹಾಕಬೇಕು. ಅಕ್ರಮವಾಗಿ ಮದ್ಯಮಾರಟ ಮಾಡಿದವರ ಲೈಸೆನ್ಸ್ ರದ್ದು ಮಾಡಬೇಕು. ಮದ್ಯಪಾನ ಚಟದಿಂದ 30 ರಿಂದ 40 ವಯಸ್ಸಿನ ಗಂಡುಮಕ್ಕಳಲ್ಲಿ ಲಿವರ್ ಸಿರೋಸಿಸ್ ಖಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯವರ್ಜನ ಕೇಂದ್ರದಲ್ಲಿ 1200 ಜನ ಮದ್ಯವಸನಿಗಳಲ್ಲಿ 600 ಜನರಿಗೆ ಲಿವರ್ ಸಿರೋಸಿಸ್ ಖಾಯಿಲೆ ಕಂಡುಬಂದಿದೆ. ಮದ್ಯ ವಯಸ್ಕರ ಚಿಕ್ಕ ಪುಟ್ಟ ಮಕ್ಕಳನ್ನು ಅನಾಥರಾಗಿಸಿವೆ ಎಂದರು.

Views: 26

Leave a Reply

Your email address will not be published. Required fields are marked *