Ravindra Jadeja: ಸಿಕ್ಸ್, ಫೋರ್ ಸಿಡಿಸಿ ಪತಿ ಪಂದ್ಯ ಗೆಲ್ಲಿಸುತ್ತಿದ್ದಂತೆ ಕಣ್ಣೀರಿಟ್ಟ ರವೀಂದ್ರ ಜಡೇಜಾ ಪತ್ನಿ: ವಿಡಿಯೋ

Ravindra Jadeja: ಸಿಕ್ಸ್, ಫೋರ್ ಸಿಡಿಸಿ ಪತಿ ಪಂದ್ಯ ಗೆಲ್ಲಿಸುತ್ತಿದ್ದಂತೆ ಕಣ್ಣೀರಿಟ್ಟ ರವೀಂದ್ರ ಜಡೇಜಾ ಪತ್ನಿ: ವಿಡಿಯೋ

ಯಾರೂ ಊಹಿಸಲಾಗದ ರೀತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023 Final) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮಳೆಯ ನಡುವೆ ನಡೆದ ಪಂದ್ಯದಲ್ಲಿ ಸಿಎಸ್​ಕೆ ಡಕ್ವರ್ತ್ ಲುಯಿಸ್ ನಿಯಮದ ಪ್ರಕಾರ 5 ವಿಕೆಟ್​ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು. ಈ ಮೂಲಕ ಚೆನ್ನೈ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ಸಿಎಸ್​ಕೆ ಗೆಲ್ಲಲು ಮುಖ್ಯ ಕಾರಣ ರವೀಂದ್ರ ಜಡೇಜಾ (Ravindra Jadeja). ಅಂತಿಮ ಹಂತದಲ್ಲಿ ಕ್ರೀಸ್​ಗೆ ಬಂದು ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು.

ಕೊನೆಯ ಓವರ್​ನಲ್ಲಿ ಚೆನ್ನೈ ಗೆಲುವಿಗೆ 13 ರನ್​ ಬೇಕಿತ್ತು. ರವೀಂದ್ರ ಜಡೇಜಾ, ಶಿವಂ ದುಬೆ ಕ್ರೀಸ್​ನಲ್ಲಿದ್ದರು. ಮೋಹಿತ್​ ಶರ್ಮಾ ಬೌಲರ್ ಆಗಿದ್ದರು. ಮೊದಲ ಎಸೆತ ಡಾಟ್​ ಆದರೆ, ಮುಂದಿನ ಮೂರು ಎಸೆತದಲ್ಲಿ ಬಂದಿದ್ದು ತಲಾ ಒಂದೊಂದು ರನ್ ಮಾತ್ರ. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ತಂಡದ ಗೆಲುವಿಗೆ 10 ರನ್​ಗಳು ಬೇಕಾಗಿದ್ದವು. ಇದು ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಅಲ್ಲದೆ ಈ ಪಂದ್ಯವನ್ನು ಸಿಎಸ್​ಕೆ ಕಳೆದುಕೊಂಡಿತು ಎಂದೇ ಎಲ್ಲರು ನಂಬಿದ್ದರು. ಆದರೆ, ಆಲ್​ರೌಂಡರ್ ರವೀಂದ್ರ ಜಡೇಜಾ ಜಾದೂ ಮಾಡಿದಂತೆ 5ನೇ ಎಸೆತವನ್ನು ಸಿಕ್ಸರ್​ ಬಾರಿಸಿದರೆ, ಕೊನೆಯ ಎಸೆತವನ್ನು ಬೌಂಡರಿ ಬಾರಿಸಿ ರೋಚಕ ಜಯ ತಂದುಕೊಟ್ಟರು.

IPL 2023: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತ ಚೆನ್ನೈ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅದರಲ್ಲೂ ಪಂದ್ಯ ವೀಕ್ಷಿಸಲು ಬಂದಿದ್ದ ರವೀಂದ್ರ ಜಡೇಜಾ ಅವರ ಪತ್ನಿ ರವೀಬಾ ಜಡೇಜಾ ಖುಷಿಯಿಂದ ಕಣ್ಣೀರಿಟ್ಟರು. ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಬಂದು ಜಡೇಜಾ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಖುಷಿಯಲ್ಲಿ ಜಡೇಜಾ ಮಗಳು ಕೂಡ ಪಾಲ್ಗೊಂಡಿದ್ದರು. ಇಲ್ಲಿದೆ ನೋಡಿ ಆ ವಿಡಿಯೋ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಜಡೇಜಾ, “ಇದು ನನ್ನ ತವರೂರು, ಇಲ್ಲಿ ಪ್ರಶಸ್ತಿ ಜಯಿಸಿರುವುದು ತುಂಬಾ ಖುಷಿ ತಂದಿದೆ. ಮಳೆ ಬಂದರೂ ತಡರಾತ್ರಿವರೆಗೆ ಕಾದು ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಅದ್ಭುತ. ಸಿಎಸ್​ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಗೆಲುವನ್ನು ಎಂ.ಎಸ್. ಧೋನಿಗೆ ಅರ್ಪಿಸುತ್ತೇನೆ. ಪಂದ್ಯದಲ್ಲಿ ನಾನು ಜವಾಬ್ದಾರಿ ಅರಿತು ಕಾದು ಆಟವಾಡಿದೆ. ಯಾವುದೇ ಕಟ್ಟ ಹೊಡೆತಕ್ಕೆ ಮಾರು ಹೋಗಲಿಲ್ಲ. ಮೋಹಿತ್​ ಶರ್ಮಾ ನಿಧಾನವಾಗಿ ಬೌಲಿಂಗ್​ ಮಾಡುತ್ತಿದ್ದುದನ್ನು ಗಮನಿಸಿದ್ದೆ. ಇದನ್ನು ಅರಿತು ನಾನು ಅಂತಿಮ ಹಂತದಲ್ಲಿ ಉತ್ತಮ ಹೊಡೆತ ಬಾರಿಸಲು ಸಾಧ್ಯವಾಯಿತು,” ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ravindra-jadeja-wife-rivaba-jadeja-seen-having-tears-in-her-eyes-when-jadeja-hits-6-and-4-in-last-two-balls-vb-590046.html

Leave a Reply

Your email address will not be published. Required fields are marked *