10, 20, 50, 100, 200 ಮತ್ತು 500 ರೂಪಾಯಿ ನೋಟುಗಳ ಬಗ್ಗೆ RBI ಹೊಸ ನಿಯಮ !

Currency Notes Update:ನಿಮ್ಮ ಬಳಿ ಕೂಡಾ ಹರಿದ ನೋಟುಗಳಿದ್ದರೆ ಏನು ಮಾಡಬೇಕು? ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ನಿಯಮಗಳನ್ನು ಹೊರಡಿಸಿದೆ. 

Currency Notes Update : ಭಾರತದಲ್ಲಿ ಕಾಗದದ ನೋಟುಗಳನ್ನು ಬಳಸಲಾಗುತ್ತದೆ. ಆದ್ದರಿಂದ ಅವುಗಳು ಕೊಳಕಾಗುವುದು ಹರಿಯುವುದು ಬಹಳ ಸಾಮಾನ್ಯ. ಎಷ್ಟೋ ಬಾರಿ ಬ್ಯಾಂಕ್ ಎಟಿಎಂನಿಂದ ಹಣ ತೆಗೆಯಲು ಹೋದಾಗಲೂ ಹರಿದ ನೋಟುಗಳು ಹೊರಬರುತ್ತವೆ. ನೋಟಗಳು ಸ್ವಲ್ಪ ಹರಿದರೂ ಯಾರು ಕೂಡಾ ಅದನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಳಿ ಕೂಡಾ ಅಂಥಹ ನೋಟುಗಳಿದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ನಿಯಮಗಳನ್ನು ಹೊರಡಿಸಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೊಳಕಾದ, ಹರಿದ ನೋಟುಗಳಿಗೆ  ವಿನಿಮಯದ ಸೌಲಭ್ಯವನ್ನು ಒದಗಿಸುವಂತೆ ಭಾರತದ ಪ್ರತಿಯೊಂದು ಬ್ಯಾಂಕ್ ಗೆ ಆದೇಶಿಸಿದೆ. ಅದರ ಜೊತೆಗೆ ಆ ನೋಟುಗಳ ಮೌಲ್ಯವನ್ನು ನಿರ್ಧರಿಸಲು ಕೂಡಾ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳ ಬಗ್ಗೆ  ಎಲ್ಲರಿಗೂ ತಿಳಿದಿರಲೇಬೇಕು. 

ವಿನಿಮಯವನ್ನು ಯಾರೂ ನಿರಾಕರಿಸುವಂತಿಲ್ಲ : 
ಆರ್‌ಬಿಐನಿಂದ ಬಂದಿರುವ ಮಾಹಿತಿಯ ಪ್ರಕಾರ, ನಿಮ್ಮ ಬಳಿಯೂ  ಹರಿದ ಅಥವಾ ಕೊಳಕಾದ ನೋಟುಗಳಿದ್ದರೆ, ಗಾಬರಿಯಾಗುವ ಅಗತ್ಯವಿಲ್ಲ. ಇಂತಹ ನೋಟುಗಳನ್ನು ಸ್ವೀಕರಿಸಲು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಆರ್‌ಬಿಐ (ನೋಟ್ ರೀಫಂಡ್) ನಿಯಮಗಳ ಅಡಿಯಲ್ಲಿ, ಇಂಥಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ರಿಫಂಡ್ ನೋಟಿನ ಸ್ಥಿತಿಯ ಮೇಲೆ  ಅವಲಂಬಿತ : 
ನಿಷ್ಪ್ರಯೋಜಕ ನೋಟುಗಳನ್ನು ದೇಶದಾದ್ಯಂತ RBI ಕಚೇರಿಗಳು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ,  ಮರುಪಾವತಿಯು ನೋಟಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಬ್ಯಾಂಕ್ ಖಾತೆ ತೆರೆಯುವ ಅಗತ್ಯವಿಲ್ಲ : 
ಡಿಬಿಎಸ್ ಬ್ಯಾಂಕ್ ಇಂಡಿಯಾದ ಗ್ರಾಹಕ ಬ್ಯಾಂಕಿಂಗ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥ ಪ್ರಶಾಂತ್ ಜೋಶಿ ಪ್ರಕಾರ, ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯಕ್ಕಾಗಿ ಖಾತೆಯನ್ನು ತೆರೆಯುವ ಅಗತ್ಯವಿಲ್ಲ. ತನ್ನ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಮೂಲಕ ಯಾವಾಗ ಬೇಕಾದರೂ ಈ ಕೆಲಸ ಮಾಡಬಹುದು. ಈ ಸೇವೆಯನ್ನು ಎಲ್ಲಾ ಕೆಲಸದ ದಿನಗಳಲ್ಲಿ  ಮಾಡಬಹುದು. 

ವಿರೂಪಗೊಂಡ ನೋಟು ಎಂದರೇನು ? :  ಕರೆನ್ಸಿ ನೋಟಿನ ಒಂದು ಭಾಗ ಕಾಣೆಯಾದಾಗ ಅಥವಾ ನೋಟು ಎರಡಕ್ಕಿಂತ ಹೆಚ್ಚು ತುಂಡುಗಳಾಗಿದ್ದಾಗ ಅದನ್ನು ಮ್ಯುಟಿಲೇಟೆಡ್ ಎಂದು ಕರೆಯಲಾಗುತ್ತದೆ ಎಂದು ಸೌತ್ ಇಂಡಿಯನ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮತ್ತು ಬ್ಯಾಂಕಿಂಗ್ ಆಪರೇಷನ್ ಗ್ರೂಪ್ ಮುಖ್ಯಸ್ಥ ಶಿವರಾಮನ್ ಕೆ ಹೇಳಿದ್ದಾರೆ.

ಇಂಥಹ ನೋಟುಗಳ ಮೌಲ್ಯ ಎಷ್ಟು? :
ಕೊಳಕು ಮತ್ತುಹರಿದ ನೋಟುಗಳ ಮೌಲ್ಯವನ್ನು RBI ನಿರ್ಧರಿಸುತ್ತದೆ.  ನೋಟಿನ ಮೌಲ್ಯವು ನೋಟಿನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಗ್ರಾಹಕರು ನೋಟಿನ ಮೌಲ್ಯವನ್ನು ಪೂರ್ಣ, ಅರ್ಧ ಮೊತ್ತವನ್ನು ಪಡೆಯಬಹುದು. ಕೆಲವೊಮ್ಮೆ ಏನೂ ಸಿಗದೇ ಕೂಡಾ ಇರಬಹುದು.  ನೋಟು ಕಡಿಮೆ ಮ್ಯುಟಿಲೇಟೆಡ್ ಆಗಿದ್ದರೆ ಸರಿಯಾದ ಬೆಲೆಯನ್ನು ಪಡೆಯಬಹುದು. ತುಂಬಾ ಹಾನಿಗೊಳಗಾಗಿದ್ದರೆ, ಅರ್ಧದಷ್ಟು ಬೆಲೆಯನ್ನು ಪಡೆಯಬಹುದು ಅಥವಾ ಪಡೆಯದೇ ಇರಬಹುದು. 

50 ರೂ.ಗಿಂತ ಕಡಿಮೆ ಮೌಲ್ಯದ ನೋಟುಗಳಿಗೆ ನಿಯಮ : 
RBI ನಿಯಮಗಳ ಪ್ರಕಾರ, ನಾವು 50 ರೂ.ಗಿಂತ ಕಡಿಮೆ ಮೌಲ್ಯದ ನೋಟುಗಳ ಬಗ್ಗೆ ಹೇಳುವುದಾದರೆ ನಿಮ್ಮ ಬಳಿಯಿರುವ ನೋಟು 50 ಪ್ರತಿಶತ ಅಥವಾ ಅದಕ್ಕಿಂತ ಕಡಿಮೆ ಹಾನಿಯಾಗಿದ್ದರೆ ಪೂರ್ಣ ಮೌಲ್ಯವನ್ನು ಪಡೆಯಬಹುದು. ಅದೇ ರೀತಿ ನೋಟು ಶೇಕಡಾ 50 ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದರೆ, ಒಂದು ರೂಪಾಯಿಯೂ ಸಿಗದಿರುವ ಸಾಧ್ಯತೆಯಿದೆ. 

RBI ನಿಯಮಗಳೇನು ಗೊತ್ತಾ? : 
ಆರ್‌ಬಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ 2000 ರೂಪಾಯಿ ನೋಟಿನ ಉದ್ದ 16.6 ಸೆಂ.ಮೀ, ಅಗಲ 6.6 ಸೆಂ.ಮೀ ಮತ್ತು ವಿಸ್ತೀರ್ಣ 109.56 ಚದರ ಸೆಂಟಿಮೀಟರ್. ನಿಮ್ಮ ನೋಟು 88 ಚದರ ಸೆಂಟಿಮೀಟರ್ ಆಗಿದ್ದರೆ, ನೀವು ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ಇದಲ್ಲದೆ, ನಿಮ್ಮ ನೋಟು 44 ಚದರ ಸೆಂಟಿಮೀಟರ್ ಆಗಿದ್ದರೆ ಅರ್ಧದಷ್ಟು ಮರುಪಾವತಿಯನ್ನು ಮಾತ್ರ ನೀಡಲಾಗುತ್ತದೆ. 

500 ರೂಪಾಯಿ ನೋಟಿನ ನಿಯಮವೇನು? : 
ಅದೇ ಸಮಯದಲ್ಲಿ, 500 ರೂ ನೋಟಿನ ಉದ್ದ 15 ಸೆಂ, ಅಗಲ 6.6 ಸೆಂ ಮತ್ತು ವಿಸ್ತೀರ್ಣ 99 ಚದರ ಸೆಂಟಿಮೀಟರ್. ಅಂತಹ ಸಂದರ್ಭದಲ್ಲಿ, 500 ರೂ ನೋಟಿನ ಗಾತ್ರವು 80 ಚದರ ಸೆಂಟಿಮೀಟರ್ ಆಗಿದ್ದರೆ, ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ, ಆದರೆ ಅದು 40 ಚದರ ಸೆಂಟಿಮೀಟರ್ ಆಗಿದ್ದರೆ, ಅರ್ಧದಷ್ಟು ಮರುಪಾವತಿಯನ್ನು ನೀಡಲಾಗುತ್ತದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/business/rbi-rules-about-10-20-50-100-200-and-500-rupees-mutilated-notes-157556

Leave a Reply

Your email address will not be published. Required fields are marked *