IPL 2023 Playoffs: LSG vs MI ಪಂದ್ಯದ ವೇಳೆ ಕಾಣಿಸಿಕೊಂಡ RCB ಅಭಿಮಾನಿ

IPL 2023 LSG vs MI: ಐಪಿಎಲ್ ಸೀಸನ್​ 16 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಬಿದ್ದಿದೆ. ಇದಾಗ್ಯೂ ಆರ್​ಸಿಬಿ ಅಭಿಮಾನಿಗಳು ಮಾತ್ರ ಐಪಿಎಲ್​​ನಿಂದ ದೂರವಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಚೆನ್ನೈನ ಚೆಪಾಕ್​ ಸ್ಟ್ಟೇಡಿಯಂನಲ್ಲಿ ಕಾಣಿಸಿಕೊಂಡ ಆರ್​ಸಿಬಿ ಫ್ಯಾನ್.ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ವೇಳೆ ಇಡೀ ಸ್ಟೇಡಿಯಂ ಉಭಯ ತಂಡಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಇವರುಗಳ ನಡುವೆ ಆರ್​ಸಿಬಿ ಜೆರ್ಸಿ ತೊಟ್ಟ ಅಭಿಯಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ ಜೊತೆ ಕೂತು ಆರ್​ಸಿಬಿ ಜೆರ್ಸಿ ಧರಿಸಿ ಪಂದ್ಯ ವೀಕ್ಷಿಸುತ್ತಿರುವ ರಾಯಲ್ ಚಾಲೆಂಜರ್ಸ್​ ಅಭಿಮಾನಿಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಮ್ಯಾಚ್ ಯಾರದ್ದೇ  ಇರಲಿ...ತಂಡ ಯಾವುದೇ ಇರಲಿ...ಆರ್​ಸಿಬಿ ಅಭಿಮಾನಿ ಯಾವತ್ತೂ ಆರ್​ಸಿಬಿ ಅಭಿಮಾನಿ. ಅದು ಗೆದ್ದರೂ ಅಷ್ಟೇ.. ಸೋತರೂ ಅಷ್ಟೇ..ಆರ್​ಸಿಬಿ ಅಭಿಮಾನಿಯ ನಿಯತ್ತಿಗೆ ಸರಿಸಾಟಿಯಿಲ್ಲ ಎಂದು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಮ್ಯಾಚ್ ಯಾರದ್ದೇ  ಇರಲಿ...ತಂಡ ಯಾವುದೇ ಇರಲಿ...ಆರ್​ಸಿಬಿ ಅಭಿಮಾನಿ ಯಾವತ್ತೂ ಆರ್​ಸಿಬಿ ಅಭಿಮಾನಿ. ಅದು ಗೆದ್ದರೂ ಅಷ್ಟೇ.. ಸೋತರೂ ಅಷ್ಟೇ..ಆರ್​ಸಿಬಿ ಅಭಿಮಾನಿಯ ನಿಯತ್ತಿಗೆ ಸರಿಸಾಟಿಯಿಲ್ಲ ಎಂದು ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

source https://tv9kannada.com/photo-gallery/cricket-photos/ipl-2023-rcb-fan-spoted-in-lsg-vs-mi-match-kannada-news-zp-586284.html

Leave a Reply

Your email address will not be published. Required fields are marked *