
ಐಪಿಎಲ್ 2025 ರಲ್ಲಿ ಆರ್ಸಿಬಿ ಕ್ವಾಲಿಫೈಯರ್ ಹಂತ ತಲುಪಿದ್ದು, ಈ ಬಾರಿ ಕಪ್ ಗೆದ್ದರೆ ಸರ್ಕಾರ ರಜೆ ಘೋಷಿಸಬೇಕೆಂದು ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಶಿವಾನಂದ ಮಲಲನ್ನವರ ಎಂಬುವವರು ಆರ್ಸಿಬಿ ಕಪ್ ಗೆದ್ದ ದಿನವನ್ನು ‘ಕರ್ನಾಟಕ ರಾಜ್ಯ ಆರ್ಸಿಬಿ ಫ್ಯಾನ್ಸ್ ಹಬ್ಬ’ ಎಂದು ಘೋಷಿಸಿ, ಪ್ರತಿ ವರ್ಷ ರಜೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- ಆರ್ಸಿಬಿ ಅಭಿಮಾನಿಯಿಂದ ಸಿಎಂ ಸಿದ್ದರಾಮಯ್ಯ ಪತ್ರ.
- ಆರ್ಸಿಬಿ ಕಪ್ ಗೆದ್ದರೆ ಹಬ್ಬವನ್ನಾಗಿ ಆಚರಿಸಲು ಸರ್ಕಾರ ಅಧಿಕೃತ ರಜೆ ಘೋಷಣೆ ಮಾಡಲಿ ಎಂದ ಅಭಿಮಾನಿ.
- ಆರ್ಸಿಬಿ ಫ್ಯಾನ್ಸ್ ಹಬ್ಬವೆಂದು ಅಧಿಕೃತವಾಗಿ ಘೋಷಣೆಗೆ ಮನವಿ.
ಬೆಂಗಳೂರು: ಐಪಿಎಲ್ 2025 ರಲ್ಲಿ ಆರ್ಸಿಬಿ ಕ್ವಾಲಿಫೈಯರ್ ಹಂತ ತಲುಪಿದೆ. ಈ ಸಲ ಆರ್ಸಿಬಿ ಕಪ್ ಗೆದ್ದರೆ ಹಬ್ಬವನ್ನಾಗಿ ಆಚರಿಸಲು ಸರ್ಕಾರ ಅಧಿಕೃತ ರಜೆ ಘೋಷಣೆ ಮಾಡಲಿ ಎಂದು ಅಭಿಮಾನಿಯಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
18 ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದ್ದು, ಈವರೆಗೂ ಒಮ್ಮೆಯೂ ಕಪ್ ಗೆಲ್ಲದ ಆರ್ಸಿಬಿ ತಂಡ ಈ ಬಾರಿಯಾದರೂ ಕಪ್ ಗೆಲ್ಲಲೇ ಬೇಕು ಎಂಬುದು ಅಭಿಮಾನಿಗಳು ಆಶಯ. ಇದಕ್ಕೆ ಪೂರಕವಾಗುವಂತೆ ಈ ಬಾರಿ ಆರ್ಸಿಬಿ ಕ್ವಾಲಿಫೈಯರ್ ಹಂತ ತಲುಪಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಯೊಬ್ಬರು ಪತ್ರ ಬರೆದು ರಜೆ ಘೋಷಣೆಗೆ ಮನವು ಮಾಡಿದ್ದಾರೆ.
ಅಭಿಮಾನಿ ಬರೆದ ಪತ್ರದಲ್ಲ ಏನಿದೆ?
ಈ ಪತ್ರವನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾನಂದ ಮಲಲನ್ನವರ ಎಂಬುವವರು ಬರೆದಿದ್ದಾರೆ. ” ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಫೈನಲ್ಗೆ ಹೋಗಿ ಕಪ್ ಗೆದ್ದರೆ ಕರ್ನಾಟಕ ಸರ್ಕಾರರಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ದಿನವನ್ನು ಕರ್ನಾಟಕ ರಾಜ್ಯ ಆರ್ಸಿಬಿ ಫ್ಯಾನ್ಸ್ ಹಬ್ಬವೆಂದು ಅಧಿಕೃತವಾಗಿ ಘೋಷಣೆ ಮಾಡಬೇಕು. ಪ್ರತಿ ವರ್ಷ ಸರ್ಕಾರಿ ರಜೆಯನ್ನು ನೀಡಬೇಕು ” ಎಂದು ಪತ್ರದಲ್ಲಿ ಅಭಿಮಾನಿ ಒತ್ತಾಯಿಸಿದ್ದಾರೆ.
“ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ಜಿಲ್ಲೆಯಲ್ಲಿ ಆಚರಿಸಿದಂತೆ ಆರ್ಸಿಬಿ ಪ್ಯಾನ್ಸ್ ಹಬ್ಬವನ್ನು ಪ್ರತಿ ಜಿಲ್ಲೆಯಲ್ಲಿ ಆಚರಿಸಲು ಸರ್ಕಾರ ಅನುವು ಮಾಡಬೇಕು. ಇದಕ್ಕೆ ಅಗತ್ಯ ಅನುಮತಿಯನ್ನು ನೀಡಬೇಕು ” ಎಂದು ತಂಡದ ಅಭಿಮಾನಿ ವಿನಂತಿ ಮಾಡಿದ್ದಾರೆ.
ಪತ್ರ ಎಲ್ಲೆಡೆ ವೈರಲ್
ಆರ್ಸಿಬಿ ಅಭಿಮಾನಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಈ ಪತ್ರವು ಟ್ವೀಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್, ವ್ಯಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುರುವಾರ ಮಹತ್ವದ ಪಂದ್ಯ
ಸದ್ಯ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ತಂಡಕ್ಕೆ ಪಂಜಾಬ್ ತಂಡ ಎದುರಾಗಲಿದೆ. ಆರ್ಸಿಬಿ ಪಂದ್ಯವನ್ನು ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ ಇನ್ನೊಂದು ಅವಕಾಶ ಇದ್ದು, ಭಾನುವಾರ ಪಂದ್ಯವಾಡಲಿದೆ. ಆ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಬಹುದು.
ವಿರಾಟ್ ಜರ್ಸಿ ನಂಬರ್ 18 ಲಕ್ಕಿ ಎನ್ನುವ ಫ್ಯಾನ್ಸ್
ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ 18 ಆಗಿದ್ದು, ಈ ಬಾರಿ ಐಪಿಎಲ್ 18 ನೇ ಆವೃತ್ತಿ ನಡೆಯುತ್ತಿದೆ. 18 ನಮಗೆ ಲಕ್ಕಿಯಾಗಿದ್ದು, ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
Vijayakarnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1