RCB Playing XI vs RR: ಡುಪ್ಲೆಸಿಸ್ ಅನುಮಾನ: ಆರ್​ಆರ್​ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆ

ಇಂಡಿಯನ್ ಪ್ರೀಮಿಯರ್ ಲೀಗ್​ 2023 ರಲ್ಲಿಂದು ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮೊದಲ ಮ್ಯಾಚ್​ನಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ.ಆರ್​ಸಿಬಿ ಆಡಿದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಸೋಲು, ಮೂರರಲ್ಲಿ ಜಯ ಕಂಡು 6 ಅಂಕ ಸಂಪಾದಿಸಿ ಪಾಯಿಂಟ್ ಟೇಬಲ್​ನಲ್ಲಿ ಆರನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದು ಆಡಿದ ಆರು ಮ್ಯಾಚ್​ನಲ್ಲಿ ನಾಲ್ಕರಲ್ಲಿ ಗೆದ್ದು ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋಲುಂಡಿದೆ.ಪಾಯಿಂಟ್ ಟೇಬಲ್​ನಲ್ಲಿ ಮೇಲೇರಲು ಮತ್ತು ಪ್ಲಸ್ ರನ್​ರೇಟ್ ಸಂಪಾದಿಸಲು ಆರ್​ಸಿಬಿ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಹೀಗಾಗಿ ಆರ್​ಆರ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಹಿಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಪಟ್ಟ ತೊಟ್ಟಿದ್ದರು. ಫಾಫ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ವರದಿಗಳ ಪ್ರಕಾರ ಇಂದುಕೂಡ ಕೊಹ್ಲಿಯೇ ನಾಯಕನ ಜವಾಬ್ದಾರಿ ಹೊರಲಿದ್ದಾರಂತೆ.ಕೊಹ್ಲಿ ಕ್ಯಾಪ್ಟನ್ ಆಗಿದ್ದರೆ ಡುಪ್ಲೆಸಿಸ್ ವಿಶ್ರಾಂತಿ ಪಡೆದುಕೊಳ್ಳಯವ ಸಾಧ್ಯತೆ ಇದೆ. ಹೀಗಾದಲ್ಲಿ ಮಿಚೆಲ್ ಬ್ರೇಸ್​ವೆಲ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಅಂತೆಯೆ ಜೋಶ್ ಹ್ಯಾಜ್ಲೆವಿಡ್ ಫಿಟ್ ಆಗಿದ್ದರೆ ವೇಯ್ನ್ ಪಾರ್ನೆಲ್ ಸ್ಥಾನ ಬಿಟ್ಟುಕೊಡಬೇಕಿದೆ.ಆರ್​ಸಿಬಿ ಬ್ಯಾಟಿಂಗ್ ಬಲ ಮೂವರೇ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್, ಇವರು ಬೇಗನೆ ನಿರ್ಗಮಿಸಿದರೆ ತಂಡದ ಮೊತ್ತ 100 ದಾಟುವುದು ಅನುಮಾನ. ದಿನೇಶ್ ಕಾರ್ತಿಕ್ ಫಾರ್ಮ್ ಹಾಗೂ ಮಹಿಪಾಲ್ ಲುಮ್ರೂರ್ ಅಬ್ಬರಿಸಬೇಕಾದ ಅವಶ್ಯಕತೆ ಇದೆ.ಶಹಬಾಜ್ ಅಹ್ಮದ್ ಕಡೆಯಿಂದ ಕೂಡ ಇನ್ನಷ್ಟು ಕೊಡುಗೆ ಬರಬೇಕಿದೆ. ವನಿಂದು ಹಸರಂಗ ಆಲ್ರೌಂಡರ್ ಆಗಿದ್ದು ಹೆಸರಿಗೆ ತಕ್ಕಂತೆ ಆಡಬೇಕಿದೆ. ಮೊಹಮ್ಮದ್ ಸಿರಾಜ್ ಬಿಟ್ಟರೆ ಮತ್ಯಾವ ಬೌಲರ್ ಕೂಡ ಮಾರಕವಾಗಿ ಗೋಚರಿಸುತ್ತಿಲ್ಲ. ಕಳೆದ ಪಂದ್ಯದಲ್ಲಿ ಬೌಲರ್​ಗಳು ಕಮ್​ಬ್ಯಾಕ್ ಮಾಡಿದ್ದರೂ ಇನ್ನಷ್ಟು ಲಯಕಂಡುಕೊಳ್ಳಬೇಕಿದೆ.ಆರ್​​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್/ ಮಿಚೆಲ್ ಬ್ರೇಸ್​ವೆಲ್, ಮಹಿಪಾಲ್ ಲುಮ್ರೂರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ.), ವೇಯ್ನ್ ಪಾರ್ನೆಲ್/ ಜೋಶ್ ಹ್ಯಾಜ್ಲೆವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್, ವೈಶಾಕ್ ವಿಜಯ್‌ಕುಮಾರ್, ಮೊಹಮ್ಮದ್ ಸಿರಾಜ್. (ಫೋಟೋ ಕೃಪೆ: XYZ)

source https://tv9kannada.com/photo-gallery/cricket-photos/josh-hazlewood-may-get-chance-today-here-is-the-rcb-likely-playing-xi-for-ipl-2023-match-against-rajasthan-royals-vb-au48-561809.html

Leave a Reply

Your email address will not be published. Required fields are marked *