IPL 2023 Points Table: ಪಾಯಿಂಟ್ಸ್​ ಟೇಬಲ್​ನಲ್ಲಿ ಮೇಲೇರಿದ RCB

IPL 2023 Points Table: ಐಪಿಎಲ್ ಸೀಸನ್ 16 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಬಹುತೇಕ ತಂಡಗಳು 6 ಪಂದ್ಯಗಳನ್ನು ಆಡಿದೆ. 28ನೇ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪಾಯಿಂಟ್ಸ್​ ಟೇಬಲ್​ನಲ್ಲೂ ಮಹತ್ವದ ಬದಲಾವಣೆಯಾಗಿದೆ.ಪಂಜಾಬ್ ಕಿಂಗ್ಸ್​ ವಿರುದ್ಧದ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ 2 ಸ್ಥಾನ ಮೇಲೆಕ್ಕೇರಿದೆ. ಮತ್ತೊಂದೆಡೆ ಸತತ ಸೋಲಿನಿಂದ ಕಂಗೆಟ್ಟಿದ್ದ ವಾರ್ನರ್ ಪಡೆಯು ಗೆಲುವಿನ ಖಾತೆ ತೆರೆದಿದೆ. ಅದರಂತೆ ಗುರುವಾರದ ಅಂತ್ಯಕ್ಕೆ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...1- ರಾಜಸ್ಥಾನ್ ರಾಯಲ್ಸ್ (8 ಅಂಕಗಳು): 6 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 4 ಗೆಲುವು ಹಾಗೂ 2 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ಪ್ರಸ್ತುತ ನೆಟ್​ ರನ್​ ರೇಟ್ ನೆಟ್​​ +1.043.2- ಲಕ್ನೋ ಸೂಪರ್ ಜೈಂಟ್ಸ್ (8 ಅಂಕಗಳು)​: 6 ಪಂದ್ಯಗಳಲ್ಲಿ 2 ಸೋಲು ಹಾಗೂ 4 ಗೆಲುವು ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು +0.709 ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ.3- ಚೆನ್ನೈ ಸೂಪರ್ ಕಿಂಗ್ಸ್ (6 ಅಂಕಗಳು)​: 5 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 2 ಸೋಲು, 3 ಗೆಲುವಿನೊಂದಿಗೆ 3ನೇ ಸ್ಥಾನದಲ್ಲಿದೆ. ತಂಡದ ಪ್ರಸ್ತುತ ಪಾಯಿಂಟ್ಸ್ ಟೇಬಲ್​ ನೆಟ್​ ರನ್​ ರೇಟ್​ +0.265. 4- ಗುಜರಾತ್ ಟೈಟಾನ್ಸ್ (6 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ 2 ಸೋಲು ಹಾಗೂ 3 ಗೆಲುವು ದಾಖಲಿಸಿದೆ. ಈ ಮೂಲಕ +0.192 ನೆಟ್​ ರನ್​ ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ.5- ರಾಯಲ್ ಚಾಲೆಂಜರ್ಸ್ ಬೆಂಗಳೂರು (6 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು 6 ಪಂದ್ಯಗಳನ್ನು ಮುಗಿಸಿದ್ದು, ಇದರಲ್ಲಿ 3 ಪಂದ್ಯಗಳಲ್ಲಿ ಗೆದ್ದರೆ, 3 ರಲ್ಲಿ ಸೋತಿದೆ. ಈ ಮೂಲಕ -0.068 ನೆಟ್​ ರನ್​ ರೇಟ್ ಕಲೆಹಾಕಿ 5ನೇ ಸ್ಥಾನದಲ್ಲಿದೆ.6- ಮುಂಬೈ ಇಂಡಿಯನ್ಸ್ (6 ಅಂಕಗಳು): ಆಡಿರುವ 5 ಪಂದ್ಯಗಳಲ್ಲಿ 3 ಜಯ ಹಾಗೂ 2 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.164 ನೆಟ್​ ರನ್​ ರೇಟ್ ಪಡೆದು 6ನೇ ಸ್ಥಾನದಲ್ಲಿದೆ.7- ಪಂಜಾಬ್ ಕಿಂಗ್ಸ್ (6 ಅಂಕಗಳು)​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 6 ಪಂದ್ಯಗಳಲ್ಲಿ 3 ಜಯ ಹಾಗೂ 3 ಸೋಲು ಕಂಡಿದ್ದು, -0.298 ನೆಟ್​ ರನ್​ ರೇಟ್​ನೊಂದಿಗೆ 7ನೇ ಸ್ಥಾನ ಅಲಂಕರಿಸಿದೆ.8- ಕೊಲ್ಕತ್ತಾ ನೈಟ್ ರೈಡರ್ಸ್ (4 ಅಂಕಗಳು): ಕೆಕೆಆರ್ ಆಡಿರುವ 6 ಪಂದ್ಯಗಳಲ್ಲಿ 4 ಸೋಲು, 2 ಗೆಲುವು ಕಂಡಿದೆ. ಇದೀಗ +0.214 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 8ನೇ ಸ್ಥಾನದಲ್ಲಿದೆ.9- ಸನ್​ರೈಸರ್ಸ್ ಹೈದರಾಬಾದ್ (4 ಅಂಕಗಳು): ಆಡಿರುವ 5 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿ, 3 ಮ್ಯಾಚ್​ನಲ್ಲಿ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -0.798 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನದಲ್ಲಿದೆ.10- ಡೆಲ್ಲಿ ಕ್ಯಾಪಿಟಲ್ಸ್ (2): ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 6 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ತಂಡವು -1.183 ನೆಟ್​ ರನ್​ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.ಗುರುವಾರದವರೆಗೆ (ಏ.20) ಒಟ್ಟು 28 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

source https://tv9kannada.com/photo-gallery/cricket-photos/ipl-2023-points-table-after-todays-match-kannada-news-zp-au50-560407.html

Leave a Reply

Your email address will not be published. Required fields are marked *