ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸೌತ್ ಇಂಡಿಯನ್ ಡರ್ಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ದ ಎದುರಾಳಿ ಸಿಎಸ್ಕೆ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿದೆ. 214 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ಗಳಿಸಷ್ಟೇ ಶಕ್ತವಾಗಿ 2 ರನ್ಗಳ ಸೋಲೊಪ್ಪಿಕೊಂಡಿತು.

214 ರನ್ಗಳ ಗುರಿ ಬೆನ್ನಟ್ಟಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟ ನೀಡಿತು. ಆದರೆ ಕೃನಾಲ್ ಪಾಂಡ್ಯ ಮೊದಲ ಬ್ರೇಕ್ ಕೊಟ್ಟರು. 14 ರನ್ಗಳಿಸಿದ್ದ ಶೇಖ್ ರಶೀದ್ ವಿಕೆಟ್ ಪಡೆದರು. ನಂತರದ ಓವರ್ನಲ್ಲಿ ಇಂದೇ ಮೊದಲ ಪಂದ್ಯವನ್ನಾಡಿದ ಲುಂಗಿ ಎಂಗಿಡಿ ಸ್ಯಾಮ್ ಕರನ್(5) ವಿಕೆಟ್ ಪಡೆದು ಮಿಂಚಿದರು.
ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಆಯುಷ್ ಮ್ಹಾತ್ರೆ ಹಾಗೂ ರವೀಂದ್ರ ಜಡೇಜಾ 64 ಎಸೆತಗಳಲ್ಲಿ 114 ರನ್ಗಳ ಜೊತೆಯಾಟ ನೀಡಿ ಅದ್ಭುತ ಕಮ್ಬ್ಯಾಕ್ ಮಾಡಿದರು. ಕೇವಲ 4ನೇ ಪಂದ್ಯವನ್ನಾಡಿದ ಆಯುಷ್ ಭುವನೇಶ್ವರ್ ಕುಮಾರ್ ಸೇರಿ ಆರ್ಸಿಬಿ ಬೌಲರ್ಗಳನ್ನ ಬೆಂಡೆತ್ತಿದ್ದರು. ಆಯುಷ್ 48 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ಗಳ ಸಹಿತ 94 ರನ್ಗಳಿಸಿದರು.
17ನೇ ಓವರ್ನಲ್ಲಿ ಬೌಲಿಂಗ್ ಬಂದ ಎಂಗಿಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಶತಕದತ್ತ ಮುನ್ನಗ್ಗುತ್ತಿದ್ದ ಆಯುಷ್ ಮ್ಹಾತ್ರೆ ವಿಕೆಟ್ ಹಾರಿಸಿದರು. ಅದೇ ಓವರ್ನ ನಂತರದ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್(0) ವಿಕೆಟ್ ಪಡೆದರು. ಎಂಗಿಡಿ ಎಸೆದ ಚೆಂಡನ್ನ ಆಡುವಲ್ಲಿ ವಿಫಲರಾದ ಬ್ರೆವಿಸ್ ಪ್ಯಾಡ್ಗೆ ತಗಲಿಸಿಕೊಂಡರು. ಎಲ್ಬಿಡಬ್ಲೂಗೆ ಎನ್ಗಿಡಿ ಅಫೀಲ್ ಮಾಡುತ್ತಿದ್ದಂತೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಬ್ರೆವಿಸ್ ರಿವ್ಯೂವ್ ತೆಗೆದುಕೊಳ್ಳಲು ತಡ ಮಾಡಿದರು.
ಕೊನೆ ಎರಡು ಓವರ್ಗಳಲ್ಲಿ ಸಿಎಸ್ಕೆಗೆ ಗೆಲ್ಲಲು 29 ರನ್ಗಳ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಎಸೆದ 19ನೇ ಓವರ್ನಲ್ಲಿ ಧೋನಿ-ಜಡೇಜಾ 14 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಸಿಎಸ್ಕೆಗೆ ಗೆಲ್ಲಲು 15 ರನ್ಗಳ ಅಗತ್ಯವಿತ್ತು. ಯಶ್ ದಯಾಳ್ ಎಸೆದ ಮೊದಲ 2 ಎಸೆತದಲ್ಲಿ 2 ಸಿಂಗಲ್ ಬಿಟ್ಟುಕೊಟ್ಟ ದಯಾಳ್, 3ನೇ ಎಸೆತದಲ್ಲಿ ಧೋನಿ ವಿಕೆಟ್ ಪಡೆದರು. ಕೊನೆ 3 ಎಸೆತದಲ್ಲಿ ಗೆಲ್ಲಲು 13 ರನ್ಗಳ ಅಗತ್ಯವಿತ್ತು. ಆದರೆ 4ನೇ ಎಸೆತದಲ್ಲಿ ದಯಾಳ್ ಎಸೆದ ನೋಬಾಲ್ಗೆ ದುಬೆ ಸಿಕ್ಸರ್ ಬಾರಿಸಿದರು. ಹಾಗಾಗಿ 3 ಎಸೆತದಲ್ಲಿ 6 ರನ್ ಬೇಕಿತ್ತು. ಆದರೆ ದಯಾಳ್ ಅದ್ಭುತವಾಗಿ 3 ಎಸೆತಕ್ಕೆ 3 ರನ್ ಬಿಟ್ಟುಕೊಟ್ಟು ಆರ್ಸಿಬಿಗೆ 2 ರನ್ಗಳ ರೋಚಕ ಗೆಲುವು ತಂದುಕೊಟ್ಟರು.
ಆರ್ಸಿಬಿ ಪರ ಲುಂಗಿ ಎಂಗಿಡಿ 30ಕ್ಕೆ 3 ವಿಕೆಟ್ ಪಡೆದು ಮ್ಯಾಚ್ ವಿನ್ನಿಂಗ್ ಸ್ಪೆಲ್ ಮಾಡಿದರು. ಯಶ್ ದಯಾಳ್ 41 ರನ್ ನೀಡಿದರು ಕೊನೆಯ ಓವರ್ನಲ್ಲಿ 1 ವಿಕೆಟ್ ಪಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಕೃನಾಲ್ ಪಾಂಡ್ಯ 24ಕ್ಕೆ 1 ವಿಕೆಟ್ ಪಡೆದರು.
ತವರಿನಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಬೆಂಗಳೂರು ತಂಡ ಉತ್ತಮ ಆರಂಭ ಪಡೆದುಕೊಂಡಿತು. ಕೊಹ್ಲಿ ಹಾಗೂ ಬೆಥೆಲ್ ಮೊದಲ ವಿಕೆಟ್ಗೆ 97 ರನ್ಗಳ ಬೃಹತ್ ಜೊತೆಯಾಟ ನೀಡಿದರು. ಮೊದಲ ಓವರ್ನಿಂದಲೇ ಅಬ್ಬರಿಸಿದ ಬೆಥೆಲ್ ಮೂರು ಬೌಂಡರಿ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಸೂಚನೆ ನೀಡಿದರು. ಕೊಹ್ಲಿ ಮತ್ತು ಬೆಥಲ್ ಅಬ್ಬರದಿಂದ ಪವರ್ ಪ್ಲೇ ನಲ್ಲೇ ಆರ್ಸಿಬಿ 71 ರನ್ಗಳಿಸಿತು. 10 ನೇ ಓವರ್ನಲ್ಲಿ ಪತೀರಣ ಬೌಲಿಂಗ್ನಲ್ಲಿ ಬೆಥೆಲ್ ಡಿವಾಲ್ಟ್ ಬ್ರೆವಿಸ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಔಟಾಗುವ ಮುನ್ನ 33 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 55 ರನ್ಗಳಿಸಿದ್ದರು.
ಬೆಥೆಲ್ ಔಟಾದ ನಂತರದ ಓವರ್ನಲ್ಲಿ ವಿರಾಟ್ ಕೊಹ್ಲಿ ಜಡೇಜಾ ಬೌಲಿಂಗ್ನಲ್ಲಿ17 ರನ್ ಚಚ್ಚುವ ಮೂಲಕ ತಮ್ಮ 62ನೇ ಐಪಿಎಲ್ ಅರ್ಧಶತಕ ಸಿಡಿಸಿದರು. ಆದರೆ, ನಂತರದ ಓವರ್ನಲ್ಲಿ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಖಲೀಲ್ ಅಹ್ಮದ್ಗೆ ಕ್ಯಾಚ್ ನೀಡಿ ಔಟಾದರು. ಕೊಹ್ಲಿ 33 ಎಸೆತಗಳಲ್ಲಿ ತಲಾ 5 ಬೌಂಡರಿ, 5 ಸಿಕ್ಸರ್ಗಳ ಸಹಿತ 62 ರನ್ಗಳಿಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ
ಬೆಥೆಲ್ ಹಾಗೂ ಕೊಹ್ಲಿ ನೀಡಿದ ಉತ್ತಮ ಆರಂಭವನ್ನ ಮುಂದುವರಿಸುವಲ್ಲಿ ಆರ್ಸಿಬಿ ಮಧ್ಯಮ ಕ್ರಮಾಂಕ ವಿಫಲವಾಯಿತು. ದೇವದತ್ ಪಡಿಕ್ಕಲ್ 15 ಎಸೆತಗಳಲ್ಲಿ 17 ರನ್, ರಜತ್ ಪಾಟೀದಾರ್ 15 ಎಸೆತಗಳಲ್ಲಿ 11 ರನ್, ಜಿತೇಶ್ ಶರ್ಮಾ 8 ಎಸೆತಗಳಲ್ಲಿ 7 ರನ್ಗಳಿಸಿ ಔಟ್ ಆದರು. ಈ ಮೂವರ ವೈಫಲ್ಯದಿಂದ ಒಂದು ಅಂತದಲ್ಲಿ ಆರ್ಸಿಬಿ 19 ಓವರ್ಗಳಲ್ಲಿ 159 ರನ್ಗಳಿಸಿತ್ತು. ಈ ಹಂತದಲ್ಲಿ 180-190ರನ್ಗಳ ಮೊತ್ತಕ್ಕೆ ಸೀಮಿತವಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರೊಮ್ಯಾರಿಯೋ ಶೆಫರ್ಡ್ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು.
ಸ್ಫೋಟಕ ಅರ್ಧಶತಕ ಸಿಡಿಸಿದ ಶೆಫರ್ಡ್
7ನೇ ಕ್ರಮಾಂಕದಲ್ಲಿ 18ನೇ ಓವರ್ನಲ್ಲಿ ಕ್ರೀಸ್ಗೆ ಆಗಮಿಸಿದ ಶೆಫರ್ಡ್ 18 ಮತ್ತು 19ನೇ ಓವರ್ಗಳಲ್ಲಿ ಕ್ರಮವಾಗಿ 33 ಹಾಗೂ 21 ರನ್ ಸೂರೆಗೈದರು. ಅದರಲ್ಲೂ ಖಲೀಲ್ ಅಹ್ಮದ್ ಎಸೆದ 19ನೇ ಓವರ್ನಲ್ಲಿ ಕ್ರಮವಾಗಿ 6,6,4,6,n6,0,4 ಬಾರಿಸಿದರು. ಆ ಓವರ್ನಲ್ಲಿ 33 ರನ್ ಬಂದಿತು. ನಂತರ ಇನ್ನಿಂಗ್ಸ್ನ ಬೆಸ್ಟ್ ಬೌಲರ್ ಪತೀರಣ ಬೌಲಿಂಗ್ನಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ಗಳ ಸಹಿತ 21 ರನ್ ಬಾರಿಸಿದರು. ಕೇವಲ 14 ಎಸೆತಗಳಲ್ಲಿ ಅಜೇಯ 53 ರನ್ಗಳ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ 159ರಿಂದ 213ಕ್ಕೆ ಕೊಂಡೊಯ್ದರು.
News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1