RCB Vs DC Live Streaming: ಆರ್​ಸಿಬಿಗೆ ಮೊದಲ ಎದುರಾಳಿ ಡೆಲ್ಲಿ; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

wpl 2023 royal challengers bangalore vs delhi capitals women wpl 2023 live streaming when and where to watch rcb vs dc today match in Kannada

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (Women’s Premier League) ಭಾನುವಾರ ಡಬಲ್ ಹೆಡರ್ ದಿನವಾಗಿದೆ. ಈ ಲೀಗ್‌ನಲ್ಲಿ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯುತ್ತಿರುವುದು ಇದೇ ಮೊದಲು. ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ( Royal Challengers Bangalore and Delhi Capitals) ನಡುವೆ ನಡೆಯಲಿದೆ. ಮತ್ತು ಎರಡನೇ ಪಂದ್ಯ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ (UP Warriors and Gujarat Giants) ನಡುವೆ ನಡೆಯಲಿದೆ. ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ತಮ್ಮ ಮೊದಲ ಪಂದ್ಯವನ್ನು ಭಾನುವಾರ ಆಡಲಿವೆ. ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) ಬೆಂಗಳೂರು ತಂಡದ ನಾಯಕಿಯಾಗಿದ್ದು, ದೆಹಲಿ ವಿಶ್ವ ಚಾಂಪಿಯನ್ ನಾಯಕಿ ಮೆಗ್ ಲ್ಯಾನಿಂಗ್‌ಗೆ (Meg Lanning) ನಾಯಕತ್ವವನ್ನು ಹಸ್ತಾಂತರಿಸಿದೆ.

ಆರ್‌ಸಿಬಿ ಇಲ್ಲಿಯವರೆಗೆ ಯಾವುದೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಪುರುಷರ ತಂಡದಂತೆ ಮಹಿಳಾ ತಂಡವೂ ಕ್ರಿಕೆಟ್ ಪ್ರಪಂಚದ ದೊಡ್ಡ ಹೆಸರುಗಳ ದಂಡನ್ನೇ ಹೊಂದಿದೆ. ತಂಡದಲ್ಲಿ ಸೋಫಿ ಡಿವೈನ್ ಮತ್ತು ಎಲ್ಲಿಸ್ ಪೆರ್ರಿ ಅವರಂತಹ ಅನುಭವಿಗಳಿದ್ದಾರೆ. ಅದೇ ವೇಳೆ ಡೆಲ್ಲಿ ತಂಡದ ಸ್ಥಿತಿಯೂ ಇದೇ ಆಗಿದೆ. ಲ್ಯಾನಿಂಗ್ ಜೊತೆಗೆ ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ ಅವರಂತಹ ಸ್ಟಾರ್ ಆಟಗಾರ್ತಿಯರಿದ್ದಾರೆ. ಈ ಕಾರಣದಿಂದಾಗಿ ಈ ತಂಡವು ಕೂಡ ತುಂಬಾ ಪ್ರಬಲವಾಗಿದೆ.

PSL: ಪಾಕ್ ಕ್ರಿಕೆಟ್​ ಲೀಗ್​ನಲ್ಲಿ ವಿಶೇಷ ಪ್ರಶಸ್ತಿ; ಮ್ಯಾಚ್ ವಿನ್ನರ್​ಗಳಿಗೆ ಫ್ಲಾಟ್, ಐಫೋನ್​, ಶೂ ಗಿಫ್ಟ್..!

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ಯಾವಾಗ ನಡೆಯಲಿದೆ?

ಮಾರ್ಚ್ 5 ರಂದು ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಮಧ್ಯಾಹ್ನ 3:30 ಕ್ಕೆ ನಡೆಯಲಿದ್ದು, ಟಾಸ್ 3 ಗಂಟೆಗೆ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಎಲ್ಲಿ ನಡೆಯಲಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದ ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ನೇರ ಪ್ರಸಾರ ಸ್ಪೋರ್ಟ್ಸ್ 18 ಚಾನೆಲ್‌ಗಳಲ್ಲಿ ಇರಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಇರುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಜೆಮಿಮಾ ರೋಡ್ರಿಗಸ್, ಮೆಗ್ ಲ್ಯಾನಿಂಗ್, ಮರಿಜನ್ ಕಪ್, ಸ್ನೇಹ ದೀಪ್ತಿ, ಅರುಂಧತಿ ರೆಡ್ಡಿ, ಶಫಾಲಿ ವರ್ಮಾ, ರಾಧಾ ಯಾದವ್, ಆಲಿಸ್ ಕ್ಯಾಪ್ಸೆ, ತಾರಾ ನಾರ್ರಿಸ್, ಲಾರಾ ಹ್ಯಾರಿಸ್, ಶಿಖಾ ಪಾಂಡೆ, ಟಿಟಾಸ್ ಸಾಧು, ಜಸಿಯಾ ಅಖ್ತರ್, ಮಿನ್ನು ಮಣಿ, ತಾನಿಯಾ ಭಾಟಿಯಾ, ಪೂನಮ್ ಯಾದವ್, ಜೆಸ್ ಜಾನ್ಸನ್ ಮತ್ತು ಅಪರ್ಣಾ ಮೊಂಡಲ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಡೇನ್ ವ್ಯಾನ್ ನೀಕರ್ಕ್, ಕೋಮಲ್ ಜಂಜಾದ್, ಆಶಾ ಶೋಭನಾ, ಎರಿನ್ ಬರ್ನ್ಸ್, ಪ್ರೀತಿ ಬೋಸ್, ರೇಣುಕಾ ಸಿಂಗ್, ಸೋಫಿ ಡಿವೈನ್, ಹೀದರ್ ನೈಟ್, ಮೇಗನ್ ಶುಟ್, ದೀಕ್ಷಾ, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್ ಮತ್ತು ಶ್ರೇಯಾಂಕಾ ಪಾಟೀಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-2023-royal-challengers-bangalore-vs-delhi-capitals-women-wpl-2023-live-streaming-when-and-where-to-watch-rcb-vs-dc-today-match-in-kannada-psr-au14-530817.html

Views: 0

Leave a Reply

Your email address will not be published. Required fields are marked *