ಕೆಎಲ್ ರಾಹುಲ್ ಸಿಡಿಸಿದ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಅತಿಥೇಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ತನ್ನ ಅಜೇಯ ಓಟವನ್ನ ಮುಂದುವರಿಸಿದೆ.

ಐಪಿಎಲ್ 2025ರ (IPL 2025) 24 ನೇ ಪಂದ್ಯ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ನೀಡಿದ 164 ರನ್ಗಳನ್ನ ಕನ್ನಡಿಗ ರಾಹುಲ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಇನ್ನು 13 ಎಸೆತಗಳಿರುವಂತೆಯೇ ಡೆಲ್ಲಿ ತಂಡ ಜಯಬೇರಿ ಬಾರಿಸಿತು. ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 163 ರನ್ಗಳಿಸಿತ್ತು. ಈ ಋತುವಿನಲ್ಲಿ ಡೆಲ್ಲಿ ತಂಡ ಸತತ ನಾಲ್ಕನೇ ಗೆಲುವು ದಾಖಲಿಸಿದರೆ, ಆರ್‌ಸಿಬಿ ತನ್ನ ತವರು ನೆಲದಲ್ಲಿ ಸತತ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಪಂದ್ಯದ ಒಂದು ಹಂತದಲ್ಲಿ, ಆರ್‌ಸಿಬಿ ದೆಹಲಿಯ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು, ಆದರೆ ಕನ್ನಡಿಗ ರಾಹುಲ್ ತಮ್ಮ ಬ್ಯಾಟಿಂಗ್ ಮೂಲಕ ದೆಹಲಿಯ ಮೇಲೆ ಜಯ ತಂದುಕೊಟ್ಟರು.
164 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 10 ರನ್ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನ ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್ (2)ಹಾಗೂ ಜೇಕ್ ಫ್ರೇಸರ್ ಮೆಕ್ಗರ್ಕ್ (7) ವಿಕೆಟ್ ಕಳೆದುಕೊಂಡಿತು. ದಯಾಳ್ ಮೊದಲ ಬ್ರೇಕ್ ಕೊಟ್ಟರೆ, ಭುವನೇಶ್ವರ್ ಕುಮಾರ್ 3ನೇ ಓವರ್ನಲ್ಲಿ ಮೆಕ್ಗರ್ಕ್ ವಿಕೆಟ್ ಪಡೆದರು. ಮತ್ತೆ ತಮ್ಮ 3ನೇ ಓವರ್ನಲ್ಲಿ ಇಂಪ್ಯಾಕ್ಟ್ ಸಬ್ ಆಗಿ ಬಂದಿದ್ದ ಅಭಿಷೇಕ್ ಪೊರೆಲ್(7) ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನ ಆರ್‌ಸಿಬಿ ಕಡೆಗೆ ತಿರುಗಿಸಿದ್ದರು. ಸುಯಾಸ್ ಶರ್ಮಾ 15 ರನ್ಗಳಿಸಿದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ವಿಕೆಟ್ ಆರಿಸಿದರು. ಅಕ್ಷರ್ ಔಟ್ ಆದಾಗ ಡೆಲ್ಲಿ ತಂಡದ ಮೊತ್ತ 58ಕ್ಕೆ4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಆದರೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ 5ನೇ ವಿಕೆಟ್ ಜೊತೆಯಾಟದಲ್ಲಿ55 ಎಸೆತಗಳಲ್ಲಿ ಅಜೇಯ 111 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಸ್ಟಬ್ಸ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 38 ರನ್ಗಳಿಸಿದರೆ, ರಾಹುಲ್ 5ನೇ ಕ್ರಮಾಂಕದಲ್ಲಿ ಬಂದ 53 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ಗಳ ಸಹಿತ ಅಜೇಯ 93 ರನ್ಗಳಿಸಿ ಗೆಲುವಿನ ರೂವಾರಿಯಾದರು. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧವೂ ರಾಹುಲ್ ಅಜೇಯ 77 ರನ್ಗಳಿಸಿ ಗೆಲುವು ತಂದುಕೊಟ್ಟಿದ್ದರು. ಎರಡೂ ಪಂದ್ಯಗಳಲ್ಲೂ ತಂಡ ಸಂಕಷ್ಟದಲ್ಲಿದ್ದಾರೆ ಅದ್ಭುತ ಆಟವಾಡಿ ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಕುಮಾರ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಸುಯಾಶ್ ಶರ್ಮಾ 25ಕ್ಕೆ1, ಯಶ್ ದಯಾಳ್ 45ಕ್ಕೆ1 ವಿಕೆಟ್ ಪಡೆದರು. ಆರ್ಸಿಬಿಗೆ ಇದು ತವರಿನಲ್ಲಿ ಸತತ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿತ್ತು.
ಉತ್ತಮ ಆರಂಭದ ಬಳಿಕ ಪರದಾಡಿದ ಆರ್‌ಸಿಬಿ
ಮೊದಲು ಬ್ಯಾಟಿಂಗ್ ಮಾಡಲು ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫಿಲ್ ಸಾಲ್ಟ್ ಮತ್ತು ಕೊಹ್ಲಿ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಫಿಲ್ ಸಾಲ್ಟ್ 37 ರನ್ (17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್) ಬಾರಿಸಿ ದುರಾದೃಷ್ಟಕರ ರನ್ಔಟ್ಗೆ ಬಲಿಯಾದರು. ಈ ವಿಕೆಟ್ ನಂತರ ಆರ್‌ಸಿಬಿ ಯಾವ ಹಂತದಲ್ಲೂ ಚೇತರಿಸಿಕೊಳ್ಳುವುದಕ್ಕೆ ಡೆಲ್ಲಿ ಬೌಲರ್ಗಳು ಅವಕಾಶ ನೀಡಲಿಲ್ಲ. ಕೊನೆಯಲ್ಲಿ ಟಿಮ್ ಡೇವಿಟ್ 20 ಎಸೆತಗಳಲ್ಲಿ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.
ದೇವದತ್ ಪಡಿಕ್ಕಲ್ 8 ಎಸೆತಗಳಲ್ಲಿ11 ಕೇವಲ ಒಂದು ರನ್, ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 22 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 6 ಎಸೆತಗಳಲ್ಲಿ ಕೇವಲ 4 ರನ್, ಜಿತೇಶ್ ಶರ್ಮಾ 11 ಎಸೆತಗಳಲ್ಲಿ ಕೇವಲ 3 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಕೃನಾಲ್ ಪಾಂಡ್ಯ 18 ರನ್ಗಳಿಸಿದರು.
ಆರನೇ ಮತ್ತು 13ನೇ ಓವರ್‌ಗಳ ನಡುವೆ, ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಕೇವಲ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. . 61ಕ್ಕೆ 1ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಎಂಟು ಓವರ್‌ಗಳಲ್ಲಿ 41 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. 17 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 125ರನ್ಗಳಿಸಿ 150 ಅನುಮಾನ ಎಂದುಕೊಳ್ಳಲಾಗಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ ಟಿಮ್ ಡೇವಿಡ್ (20 ಎಸೆತಗಳಲ್ಲಿ ಔಟಾಗದೆ 37) ಕೆಲವು ದೊಡ್ಡ ಹೊಡೆತಗಳನ್ನು ಆಡುವ ಮೂಲಕ ಆರ್‌ಸಿಬಿ ಗೌರವಾನ್ವಿತ ಮೊತ್ತವನ್ನು ತಲುಪಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರೆ, ವಿಪ್ರಜ್ 4 ಓವರ್‌ಗಳಲ್ಲಿ ನಿಗಮ್ 18 ರನ್ ನೀಡಿ 2 ವಿಕೆಟ್ ಪಡೆದರು. ಮುಕೇಶ್ ಕುಮಾರ್ 26ಕ್ಕೆ1, ಮೋಹಿತ್ ಶರ್ಮಾ 2 ಓವರ್‌ಗಳಲ್ಲಿ 10 ರನ್ ನೀಡಿ 1 ವಿಕೆಟ್ ಪಡೆದರು.
ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಭಾನುವಾರ ಜೈಪುರದಲ್ಲಿ ರಾಜಸ್ಥಾನ್ ವಿರುದ್ಧ ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತವರಿನ ನೆಲದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದೇ ದಿನ ಸಂಜೆ 7:30ಕ್ಕೆ ಆಡಲಿದೆ.
News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1