
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ತನ್ನ ತವರು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸುತ್ತಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆಲ್ಲುವುದು ಅನಿವಾರ್ಯವಾಗಿದೆ ಏಕೆಂದರೆ ಆರ್ಸಿಬಿ ಪ್ಲೇಆಫ್ ಏರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಗುಜರಾತ್ ಈಗಾಗಲೇ ಪ್ಲೇ ಆಫ್ ತಲುಪಿದೆ. ಈಗ ಪ್ಲೇಆಫ್ ತಲುಪಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಬೆಂಗಳೂರು ಪ್ರಯತ್ನಿಸಲಿದೆ.