

ಐಪಿಎಲ್ನ (IPL 2023) 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೋಲ್ಕತ್ತಾ ನೈಟ್ ರೈಡರ್ಸ್( Kolkata Knight Riders vs Royal Challengers Bangalore) ತಂಡವನ್ನು ಎದುರಿಸುತ್ತಿದೆ. ಎರಡು ತಂಡಗಳು ಈ ಸೀಸನ್ನಲ್ಲಿ ಎರಡನೇ ಬಾರಿಗೆ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ (M. Chinnaswamy Stadium in Bengaluru) ಮುಖಾಮುಖಿಯಾಗಿವೆ. ಸದ್ಯ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಕಿಂಗ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಮತ್ತೊಂದೆಡೆ, ಕೆಕೆಆರ್ ಸಿಎಸ್ಕೆ ಎದುರು 49 ರನ್ಗಳಿಂದ ಹೀನಾಯವಾಗಿ ಸೋತಿತ್ತು. ಇಲ್ಲಿಯವರೆಗೆ ಎರಡೂ ತಂಡಗಳು ಐಪಿಎಲ್ನಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ಇದರಲ್ಲಿ ಆರ್ಸಿಬಿ 4 ರಲ್ಲಿ ಗೆದ್ದು 3 ರಲ್ಲಿ ಸೋಲನುಭವಿಸಿದೆ. ಇತ್ತ ಕೆಕೆಆರ್ 2 ರಲ್ಲಿ ಗೆದ್ದು 5 ರಲ್ಲಿ ಸೋಲನುಭವಿಸಿದೆ. 2ರಲ್ಲಿ ಒಂದು ಗೆಲುವು ಆರ್ಸಿಬಿ ವಿರುದ್ಧವೇ ಬಂದಿದ್ದು ಎಂಬುದು ಇಲ್ಲಿ ವಿಶೇಷ.
Views: 0